New Year 2023: ಭಾರತದ ಈ ಪ್ರಸಿದ್ಧ ಸ್ಥಳಗಳಿಗೆ ಭೇಟಿ ನೀಡಿ ಹೊಸ ವರ್ಷವನ್ನು ಆಚರಿಸಿ: ಕಡಿಮೆ ಹಣದಲ್ಲಿ ಡಬಲ್ ಮಸ್ತ್

Tue, 27 Dec 2022-4:41 pm,

ಗೋವಾದಲ್ಲಿ ಹೊಸ ವರ್ಷವನ್ನು ಆಚರಿಸುವುದು ಅನೇಕ ಜನರ ಕನಸಾಗಿದೆ. ನೀವೂ ಕೂಡ ಇಲ್ಲಿ ಮೋಜು ಮಾಡಬೇಕೆಂದಿದ್ದರೆ ಇಲ್ಲಿಗೆ ಹೋಗಲು ಯೋಜನೆ ರೂಪಿಸಿಕೊಳ್ಳಿ. ಹೊಸ ವರ್ಷಕ್ಕೆ ಇಲ್ಲಿಗೆ ಹೋದರೆ ನಿರಾಶೆಯಿಂದ ಹಿಂತಿರುಗುವುದಿಲ್ಲ. ಇಲ್ಲಿ ರಾತ್ರಿಜೀವನವನ್ನು ಆನಂದಿಸಲು ವಿದೇಶಿಯರೂ ಬರುತ್ತಾರೆ.

ಹೊಸ ವರ್ಷದ ಪಾರ್ಟಿಗೆ ಜೈಪುರ ಉತ್ತಮ ತಾಣವಾಗಿದೆ. ನೀವು ಇಲ್ಲಿನ ಸುಂದರವಾದ ಕಟ್ಟಡಗಳು ಮತ್ತು ಪ್ರದೇಶಗಳನ್ನು ನೋಡಿದರೆ ಖಂಡಿತವಾಗಿಯೂ ಮೈಮರೆಯುತ್ತೀರಿ. ಕೇವಲ 4ರಿಂದ 5 ಸಾವಿರ ರೂಪಾಯಿ ಖರ್ಚು ಮಾಡಿ ಇಲ್ಲಿಗೆ ಬರಬಹುದು.

ನೀವು ಹೊಸ ವರ್ಷದ ಪಾರ್ಟಿಯನ್ನು ಅತ್ಯುತ್ತಮವಾಗಿ ಮಾಡಲು ಬಯಸಿದರೆ, ನೀವು ಕಸೋಲ್‌ಗೆ ಹೋಗಬೇಕು. ಇಲ್ಲಿನ ತಂಪಾದ ವಾತಾವರಣ ನಿಮ್ಮನ್ನು ಸಂತೋಷಗೊಳಿಸಬಹುದು. ಈ ಮೂಲಕ 2023 ಅನ್ನು ಸ್ವಾಗತಿಸಿ.  ಇಲ್ಲಿಗೂ ಸಹ 4 ರಿಂದ 5 ಸಾವಿರ ರೂಪಾಯಿಗಳಲ್ಲಿ ನೀವು ಭೇಟಿ ನೀಡಬಹುದು. ಇಲ್ಲಿಗೆ ಹೋದರೆ ಇನ್ನು ಕೆಲವು ದಿನ ಇರಬೇಕಾದ ಅನಿವಾರ್ಯತೆ ಎದುರಾಗುತ್ತದೆ.

ಚಳಿಗಾಲದಲ್ಲಿ ಮನಾಲಿಗೆ ತೆರಳಬೇಕು. ಒಬ್ಬರಿಗೆ 4 ರಿಂದ 5 ಸಾವಿರ ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಇಲ್ಲಿ ನೀವು ಪ್ಯಾರಾಚೂಟಿಂಗ್, ಪ್ಯಾರಾಗ್ಲೈಡಿಂಗ್ ಮತ್ತು ಸ್ಕೇಟಿಂಗ್ ಅನ್ನು ಆನಂದಿಸಬಹುದು. ಇದಲ್ಲದೆ, ನೀವು ಮಣಿಕರಣ್ ಸಾಹಿಬ್‌ನ ಸುಂದರವಾದ ಗುರುದ್ವಾರಕ್ಕೆ ಭೇಟಿ ನೀಡಬಹುದು.

ನೀವು ಕಡಲ ತೀರಗಳಲ್ಲಿ ಬೈಕಿಂಗ್ ಮಾಡಲು ಇಷ್ಟಪಡುತ್ತಿದ್ದರೆ ಮತ್ತು ಮೇಲ್ಛಾವಣಿಯ ಕೆಫೆಗಳಲ್ಲಿ ನಿಮ್ಮ ಸಂಗಾತಿಯೊಂದಿಗೆ ಸುತ್ತಾಡಲು ಇಷ್ಟಪಡುತ್ತಿದ್ದರೆ, ನೀವು ಪಾಂಡಿಚೇರಿಗೆ ಹೋಗಬೇಕು. ಇಲ್ಲಿ ಫ್ರಾನ್ಸ್‌ನ ವಸಾಹತುಶಾಹಿ ಕಟ್ಟಡಗಳು ನಿಮ್ಮನ್ನು ಸಾಕಷ್ಟು ಆಕರ್ಷಿಸುತ್ತವೆ.

ಉದಯಪುರವನ್ನು ಸರೋವರಗಳ ನಗರ ಎಂದು ಕರೆಯಲಾಗುತ್ತದೆ. ನೀವು ಇಲ್ಲಿ ಹೊಸ ವರ್ಷವನ್ನು ಆಚರಿಸಿದರೆ, ಅದು ತುಂಬಾ ಸ್ಮರಣೀಯವಾಗಿರುತ್ತದೆ. ಏಕೆಂದರೆ ಇಲ್ಲಿ ಹೊಳೆಯುವ ಸರೋವರ ಮತ್ತು ಸೂರ್ಯಾಸ್ತದ ಸುಂದರ ನೋಟವು ನಿಮ್ಮನ್ನು ಆಕರ್ಷಿಸುತ್ತದೆ. ಚಳಿಗಾಲದಲ್ಲಿ ಇಲ್ಲಿನ ಆಹ್ಲಾದಕರ ವಾತಾವರಣವನ್ನು ಎಂತಹವರೂ ಕೂಡ ಇಷ್ಟಪಡುತ್ತಾರೆ. ಇದೊಂದು ಪ್ರಸಿದ್ಧ ಪ್ರವಾಸಿ ಸ್ಥಳವಾಗಿದೆ. ಅದಕ್ಕಾಗಿಯೇ ನೀವು ಹತ್ತಿರದ ಅನೇಕ ಸ್ಥಳಗಳನ್ನು ನೋಡಬಹುದು. 6 ರಿಂದ 10 ಸಾವಿರ ರೂಪಾಯಿ ಖರ್ಚು ಮಾಡಿ ಇಲ್ಲಿಗೆ ಬರಬಹುದು

ZEENEWS TRENDING STORIES

By continuing to use the site, you agree to the use of cookies. You can find out more by Tapping this link