Prashanth Neel: ಸಲಾರ್‌ ಡೈರೆಕ್ಟರ್‌ ಮನೆಯಲ್ಲಿ ರಿಷಬ್‌ ಮತ್ತು ತಾರಕ್!

Sat, 02 Mar 2024-11:58 am,

ಕನ್ನಡದ ಪ್ಯಾನ್‌ ಇಂಡಿಯಾ ಡೈರೆಕ್ಟರ್‌ ಪ್ರಶಾಂತ್‌ ನೀಲ್‌ ಮನೆಗೆ ಜೂನಿಯರ್ ಎನ್‌.ಟಿ.ಆರ್ ಮತ್ತು ಸ್ಟಾರ್ ರಿಷಬ್ ಶೆಟ್ಟಿ ಆಗಮಿಸಿದ್ದರು̤  

ನಿರ್ದೇಶಕ ಪ್ರಶಾಂತ್‌ ನೀಲ್ ಮನೆಯ ಒಂದು ಸಂಭ್ರಮದಲ್ಲಿ ಟಾಲಿವುಡ್‌ನಿಂದ ಜೂನಿಯರ್ ಎನ್‌.ಟಿ.ಆರ್ ಹಾಗೂ ಕನ್ನಡ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಕೂಡ ಈ ಭಾಗಿ ಆಗಿದ್ದಾರೆ.

ಪ್ರಶಾಂತ್‌ ನೀಲ್ ಮನೆಯ ಕಾರ್ಯಕ್ರಮವೊಂದರಲ್ಲಿ ಪ್ರಶಾಂತ್ ನೀಲ್, ರಿಷಬ್ ಶೆಟ್ಟಿ, ಜೂನಿಯರ್ ಎನ್.ಟಿ.ಆರ್ ಹೀಗೆ ಎಲ್ಲರ ಪತ್ನಿಯರೂ ಕೂಡ ಪಾಲುಗೊಂಡಿದ್ದರು.

ಪ್ಯಾನ್‌ ಇಂಡಿಯಾ ನಿರ್ದೇಶಕ ಪ್ರಶಾಂತ್‌ ನೀಲ್ ನಿರ್ದೇಶನದ ಕೆಜಿಎಫ್-ಸಲಾರ್ ಚಿತ್ರಗಳನ್ನ ಹೊಂಬಾಳೆ ಸಂಸ್ಥೆ ನಿರ್ಮಿಸಿದ ಕಾರಣ ಹೊಂಬಾಳೆಯ ಸಂಸ್ಥೆ ಜೊತೆಗಿನ ದೋಸ್ತಿ ಗಟ್ಟಿಯಾಗಿದೆ. ಆದರಿಂದ ಆ ಸಂಭ್ರಮದಲ್ಲಿ ಹೊಂಬಾಳೆಯ ವಿಜಯ್ ಕಿರಗಂದೂರು ಕೂಡ ಕಾಣಿಸಿಕೊಂಡಿದ್ದು ವಿಶೇಷ ಅಂತ ಹೇಳಬಹುದು.

ಪ್ರಶಾಂತ್‌ ನೀಲ್‌ ಮನೆಯ ಇವೆಂಟ್‌ನಲ್ಲಿ ತಾರಕ್‌ ರಾಮ್‌ ಮತ್ತು ಅವರ ಪತ್ನಿ ಹಾಗೂ ರಿಷಬ್‌ ಶೆಟ್ಟಿ ಮತ್ತು ಅವರ ಪತ್ನಿ ಒಂದೇ ಫ್ರೇಮ್‌ನಲ್ಲಿ ಫೋಟೋ ಇನ್ನಷ್ಟು ಗಮನ ಸೆಳೆಯುತ್ತಿದೆ.

 ನೀಲ್‌ ಮನೆಯ ಸಂಭ್ರಮದ ಫೋಟೋಗಳನ್ನು ಸ್ವತ: ಜೂನಿಯರ್‌ ಎನ್‌.ಟಿ.ಆರ್‌ ಸೋಷಿಯಲ್‌ ಮಿಡಿಯಾದಲ್ಲಿ ಹಂಚಿಕೊಂಡಿದ್ದು, ಸದ್ಯ ಈ ಫೋಟೋಗಳು ವೈರಲ್‌ ಆಗಿವೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link