Indian Celebrity Couples: 2024 ರಲ್ಲಿ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ತಾರಾ ಜೋಡಿಗಳು ಯಾರೆಲ್ಲಾ ಅಂತ ಗೊತ್ತೇ??
ದೀಪಿಕಾ ಪಡುಕೋಣೆ - ರಣವೀರ್ ಸಿಂಗ್ : ಬಾಲಿವುಡ್ ತಾರಾ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ನವೆಂಬರ್ 14 2018 ರಲ್ಲಿ ಪ್ರೀತಿಸಿ ದಾಂಪತ್ಯಕ್ಕೆ ಹೆಜ್ಜೆಹಾಕಿದ್ರು. ಇದೀಗ ಈ ಜೋಡಿ ವಿವಾಹವಾದ ಐದು ವರ್ಷಗಳ ಬಳಿಕ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಅದಿತಿ ಪ್ರಭುದೇವ - ಯಶಸ್ ಪಾಟ್ಲಾ: ಕಿರುತೆರೆ ಹಾಗೂ ಸ್ಯಾಂಡಲ್‌ವುಡ್ ಪ್ರೇಕ್ಷಕರ ಮನಗೆದ್ದ ನಟಿ ಅದಿತಿ ಪ್ರಭುದೇವ 2022ರ ನವೆಂಬರ್ 28ರಂದು ಉದ್ಯಮಿ ಯಶಸ್ ಪಾಟ್ಲಾ ಜೊತೆಗೆ ಸಪ್ತಪದಿ ತುಳಿದಿದ್ದಾರೆ. ಇದೀಗ ಈ ದಂಪತಿಗಳು ತಮ್ಮ ಮೊದಲ ಮಗು ಬರುವಿಕೆಗಾಗಿ ಎದುರು ನೋಡುತ್ತಾಯಿದ್ದಾರೆ.
ಮಿಲನಾ ನಾಗರಾಜ್ - ಡಾರ್ಲಿಂಗ್ ಕೃಷ್ಣ: ಲವ್ ಮಾಕ್‌ಟೇಲ್ ಸಿನಿಮಾದ ಮೂಲಕ ಖ್ಯಾತಿ ಪಡೆದ ಜೋಡಿ ನಟಿ ಮಿಲನಾ ನಾಗರಾಜ್ ಮತ್ತು ನಟ ಡಾರ್ಲಿಂಗ್ ಕೃಷ್ಣ 2021ರ ಫೆಬ್ರವರಿ 14 ರಂದು ವಿವಾಹವಾದವರು. ಸದ್ಯ ಈ ಕಪಲ್ ಇದೇ ವರ್ಷ ಮೊದಲ ಮಗುವಿನ ಆಗಮನಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ.
ಅಮಲಾ ಪಾಲ್- ಜಗತ್ ದೇಸಾಯಿ: ಚಂದನವನದಲ್ಲಿ ಹೆಬ್ಬುಲಿ ಬೆಡಗಿ ಎಂದೆ ಖ್ಯಾತಿ ಪಡೆದ ಬಹುಭಾಷಾ ನಟಿ ಅಮಲಾ ಪೌಲ್ ಕಳೆದ ವರ್ಷ ಜಗತ್ ದೇಸಾಯಿ ಜೊತೆಗೆ ಮದುವೆಯಾಗಿದ್ದಾರೆ. ಈ ಜೋಡಿ ಈ ವರ್ಷ ತಮ್ಮ ಮೊದಲ ಮಗುವಿನ ಆಗಮನವಾಗುತ್ತಿರುವುದರಿಂದ ಖುಷಿಯಾಗಿ ಕಾಯುತ್ತಿದ್ದಾರೆ.
ಯಾಮಿ ಗೌತಮ್ - ಆದಿತ್ಯ ಧರ್: ಕನ್ನಡದ ಉಲ್ಲಾಸ ಉತ್ಸಾಹ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪದಾರ್ಫಣೆ ಮಾಡಿದ ಬಾಲಿವುಡ್ ನಟಿ ಯಾಮಿ ಗೌತಮ್ 2021 ರಲ್ಲಿ ಸಿನಿಮಾ ನಿರ್ಮಾಪಕ ಪತಿ ಆದಿತ್ಯ ಧರ್ ಜೊತೆಗೆ ದಾಂಪತ್ಯಕ್ಕೆ ಕಾಲಿಟ್ಟ ನಟಿ ಸದ್ಯ ಈ ಜೋಡಿ ತಮ್ಮ ಮೊದಲ ಮಗು ಬರುವಿಕೆಗಾಗಿ ಕುತೂಹಲದಿಂದ ಎದುರು ನೋಡುತ್ತಾ ಇದ್ದಾರೆ.
ವರುಣ್ ಧವನ್ - ನತಾಶಾ ದಲಾಲ್: ಬಾಲಿವುಡ್ ಖ್ಯಾತ ನಟ ವರುಣ್ ಧವನ್ ಮತ್ತು ಫ್ಯಾಷನ್ ಡಿಸೈನರ್ ನತಾಶಾ ದಲಾಲ್ 2021 ರಲ್ಲಿ ಸರಳವಾಗಿ ಕುಟುಂಬಸ್ತರ ಸಾಕ್ಷಿಯಾಗಿ ವಿವಾಹವಾದರು. ಈ ಜೋಡಿ ಇದೀಗ ತಮ್ಮ ಮೊದಲ ಮಗುವನ್ನು ಬರಮಾಡಿ ಕೊಡಲು ಸಜ್ಜಾಗುತ್ತಿದ್ದಾರೆ.