ಸರ್ಕಾರಿ ನೌಕರರ ವೇತನದಲ್ಲಿ 27 ಸಾವಿರ ರೂ. ಹೆಚ್ಚಳ ! ಈ ತಿಂಗಳಿನಿಂದಲೇ ಜಾರಿ !
ತುಟ್ಟಿಭತ್ಯೆಯನ್ನು ಶೇಕಡಾ 4 ರಷ್ಟು ಅಂದರೆ ಶೇ. 46 ರಷ್ಟು ಏರಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಹೆಚ್ಚಿಸಿರುವ ಡಿಎ ಜುಲೈ 1 ರಿಂದಲೇ ಅನ್ವಯವಾಗಲಿದೆ.
ಹೆಚ್ಚಿಸಲಾಗಿರುವ ಡಿಎ ಜುಲೈ 1 ರಿಂದಲೇ ಜಾರಿಗೆ ಬರುವಂತೆ ಆದೇಶದಲ್ಲಿ ಹೇಳಲಾಗಿದೆ. ಈ ಹಿನ್ನೆಲೆಯಲಿ ಮೂರು ತಿಂಗಳ ಬಾಕಿ ಡಿಎ ಕೂಡಾ ಈ ಬಾರಿ ವೇತನದ ಜೊತೆಗೆ ಸಿಗಲಿದೆ. ಹಾಗಿದ್ದರೆ ಈ ಬಾರಿ ವೇತನದಲ್ಲಿ ಎಷ್ಟು ಮೊತ್ತ ಹೆಚ್ಚಿಗೆ ಸಿಗಲಿದೆ ಎನ್ನುಅ ಲೆಕ್ಕಾಚಾರ ಇಲ್ಲಿದೆ.
ಮೂಲ ವೇತನ - 56,900 ರೂ., ಹೊಸ ಡಿಎ (ಶೇ 46) - ತಿಂಗಳಿಗೆ 26,174 .ರೂ , ಹಿಂದಿನ ಡಿಎ (ಶೇ 42) - ತಿಂಗಳಿಗೆ 23,898 .ರೂ, ತುತ್ತಿಭತ್ಯೆಯಲ್ಲಿನ ಹೆಚ್ಚಳ - ತಿಂಗಳಿಗೆ 2,276 ರೂ. ವಾರ್ಷಿಕ ಹೆಚ್ಚಳ - 27,312. ಹೈಯರ್ ಬ್ಯಾಂಡ್ ಉದ್ಯೋಗಿಗಳ ವೇತನವು ತುಟ್ಟಿಭತ್ಯೆಯ ರೂಪದಲ್ಲಿ ತಿಂಗಳಿಗೆ 2,276 ರೂ. ಹೆಚ್ಚಳವಾಗುವುದು.
ಈ ಬಾರಿ ವೇತನಕ್ಕೆ ಮೂರು ತಿಂಗಳ ಬಾಕಿ ಹಾಗೂ ಅಕ್ಟೋಬರ್ ತಿಂಗಳ ಡಿಎ ಹಣ ಸೇರ್ಪಡೆಯಾಗಲಿದೆ. ಅಂದರೆ ಈ ಬಾರಿ ಮಾಸಿಕ ವೇತನದಲ್ಲಿ 2276*4=9,104 ರೂ. ಹೆಚ್ಚಿಗೆ ಸಿಗಲಿದೆ. ಇದಲ್ಲದೇ ಉದ್ಯೋಗಿಗಳಿಗೆ ಅಡ್ಹಾಕ್ ಬೋನಸ್ ಕೂಡಾ ಸಿಗಲಿದೆ.
ಮೂಲ ವೇತನ - ರೂ 18,000, ಹೊಸ ಡಿಎ (ಶೇ 46) - ತಿಂಗಳಿಗೆ 8280 .ರೂ ಪ್ರಸ್ತುತ ಡಿಎ (ಶೇ 42) - ತಿಂಗಳಿಗೆ 7560.ರೂ, ಡಿಎ ಯಲ್ಲಿನ ಹೆಚ್ಚಳ - ತಿಂಗಳಿಗೆ 720 . ರೂ, ವಾರ್ಷಿಕ ಹೆಚ್ಚಳ - 8640 . ರೂ
ಇದರ ಪ್ರಕಾರ ಮೂರು ತಿಂಗಳ ಬಾಕಿ ಮತ್ತು ಅಕ್ಟೋಬರ್ ತಿಂಗಳ ಡಿಎ ವೇತನಕ್ಕೆ ಸೇರ್ಪಡೆಯಾಗಲಿದೆ. ಅಂದರೆ ನಿಮ್ಮ ಮಾಸಿಕ ವೇತನಕ್ಕಿಂತ 720*4=2840 ರೂ. ಹೆಚ್ಚಿಗೆ ಹಣ ಸಿಗಲಿದೆ. ಇದಲ್ಲದೇ ಪ್ರತ್ಯೇಕವಾಗಿ ಬೋನಸ್ ಕೂಡಾ ಸಿಗಲಿದೆ.