ಸರ್ಕಾರಿ ನೌಕರರಿಗೆ ಜಾಕ್ ಪಾಟ್ ! 18 ತಿಂಗಳ ಬಾಕಿ ಡಿಎ ಬಗ್ಗೆ ಕೊನೆಗೂ ಹೊರ ಬಿತ್ತು ಆದೇಶ ! ಒಂದು ವಾರದಲ್ಲಿ ಖಾತೆ ಸೇರುವುದು ಹಣ
18 ತಿಂಗಳ ತುಟ್ಟಿಭತ್ಯೆ ಕುರಿತು ಈಗ ಮತ್ತೆ ಚರ್ಚೆ ಆರಂಭವಾಗಿದೆ. ಇದು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ದೊಡ್ಡ ಸಮಾಧಾನದ ವಿಷಯ. ಯಾಕೆಂದರೆ ಕೈ ತಪ್ಪಿಯೇ ಹೋಯಿತು ಅಂದುಕೊಂಡಿದ್ದ ಈ ಮೊತ್ತ ಕೈ ಸೇರುವ ಕಾಲ ಹತ್ತಿರ ಬಂದಿದೆ.
ಕರೋನಾ ಕಾಲದಲ್ಲಿ ತಡೆ ಹಿಡಿಯಲಾಗಿದ್ದ 18 ತಿಂಗಳ ಬಾಕಿ ಡಿಎ ಇದೀಗ ಸಿಗಲಿದೆ. ಹೀಗಾದಾಗ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ಖಾತೆಗೂ ದೊಡ್ಡ ಮೊತ್ತ ಜಮೆಯಾಗಲಿದೆ.
ಕೊರೊನಾ ಸಮಯದಲ್ಲಿ ಎದುರಾಗಿದ್ದ ಆರ್ಥಿಕ ಬಿಕ್ಕಟ್ಟನ್ನು ನಿಭಾಯಿಸಲು ಕೇಂದ್ರ ಸರ್ಕಾರವು ತುಟ್ಟಿಭತ್ಯೆಯನ್ನು ತಡೆಹಿಡಿದಿತ್ತು. ಈ ಮೊತ್ತವನ್ನು ಹೆಚ್ಚು ಅಗತ್ಯವಿರುವ ದುರ್ಬಲ ವರ್ಗದ ಜನರ ಕಲ್ಯಾಣ ಯೋಜನೆಗಳು ಮತ್ತು ಇತರ ಅಗತ್ಯಗಳಿಗಾಗಿ ಬಳಸಲಾಯಿತು.
ಇದೀಗ ಈ 18 ತಿಂಗಳ ಅರಿಯರ್ ಮೊತ್ತವನ್ನು ಬಿಡುಗಡೆ ಮಾಡಲು ಸರ್ಕಾರ ಈಗ ಯೋಜಿಸುತ್ತಿದೆ ಎಂದು ಹೇಳಲಾಗಿದೆ. ನವೆಂಬರ್ 20ರೊಳಗೆ ನೌಕರರ ಖಾತೆಗೆ ಬಾಕಿ ಹಣ ಸಂದಾಯವಾಗಲಿದೆ ಎಂಬ ವರದಿಗಳೂ ಕೆಲವೆಡೆ ಕೇಳಿಬರುತ್ತಿವೆ.
ಇಲಾಖೆಯ ಮೂಲಗಳ ಪ್ರಕಾರ, ಕರೋನಾ ಅವಧಿಯಲ್ಲಿ ತಡೆ ಹಿಡಿಯಲಾಗಿದ್ದ ಡಿಎಯ ಮೊದಲ ಕಂತು ನವೆಂಬರ್ 20 ರಂದು ಬಿಡುಗಡೆಯಾಗಲಿದೆ. ಆದರೆ, ಈ ಬಗ್ಗೆ ಇನ್ನೂ ಅಧಿಕೃತ ಘೋಷಣೆ ಹೊರಬಿದ್ದಿಲ್ಲ.
ಈ ಮೊತ್ತ ನೇರವಾಗಿ ನೌಕರರ ಬ್ಯಾಂಕ್ ಖಾತೆಗೆ ಸಂದಾಯವಾಗಲಿದೆ ಎನ್ನಲಾಗಿದೆ. ಡಿಎ ಬಾಕಿ ಕುರಿತ ಚರ್ಚೆ ಪುನರಾರಂಭವಾಗುತ್ತಿದ್ದಂತೆ ಈ ತಿಂಗಳ 18 ತಿಂಗಳ ಡಿಎ ಬಾಕಿ ಬಿಡುಗಡೆ ಮಾಡಲು ಸರ್ಕಾರ ಉದ್ದೇಶಿಸಿದೆ ಎಂದು ಮೂಲಗಳು ತಿಳಿಸಿವೆ.
ಈ ಕುರಿತು ವಿವಿಧ ನೌಕರರ ಸಂಘಟನೆಗಳು ಹಲವು ಬಾರಿ ಮನವಿ ಸಲ್ಲಿಸಿವೆ. ಈ ಬಾಕಿ ಮೊತ್ತ ನೌಕರರ ಖಾತೆ ಸೇರಿದರೆ ಸರ್ಕಾರಿ ನೌಕರರಿಗೆ ಜಾಕ್ ಪಾಟ್ ಸಿಕ್ಕಿದ ಹಾಗೆಯೇ ಆಗಲಿದೆ.
ಸೂಚನೆ :ಈ ಲೇಖನವನ್ನು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಬರೆಯಲಾಗಿದೆ. ಇದರಿಂದ ಡಿಎ ಮೊತ್ತದ ಬಗ್ಗೆ ಯಾವುದೇ ಗ್ಯಾರಂಟಿ ನೀಡಲಾಗುವುದಿಲ್ಲ.ಇತ್ತೀಚಿನ ಮತ್ತು ನಿಖರವಾದ ಮಾಹಿತಿಗಾಗಿ ಅಧಿಕೃತ ಸರ್ಕಾರಿ ವೆಬ್‌ಸೈಟ್‌ಗಳನ್ನು ಪರಿಶೀಲಿಸಬಹುದು.