Salary hike update : ಲೋಕಸಭೆ ಚುನಾವಣೆಗೂ ಮುನ್ನ ಸರ್ಕಾರಿ ಉದ್ಯೋಗಿಗಳಿಗೆ 3 ಪ್ರಮುಖ ಘೋಷಣೆಗಳು! ವೇತನದಲ್ಲಿ ಆಗುವುದು ಭಾರೀ ಹೆಚ್ಚಳ

Wed, 28 Feb 2024-10:09 am,

ಕೇಂದ್ರ ಸರ್ಕಾರಿ ನೌಕರರಿಗೆ ಸದ್ಯದಲ್ಲೇ ಹಲವು ಮಹತ್ವದ ಸುದ್ದಿಗಳು ಸಿಗಲಿವೆ. ಲೋಕಸಭೆ ಚುನಾವಣೆಗೂ ಮುನ್ನ ಕೇಂದ್ರ ಸರ್ಕಾರಿ ನೌಕರರಿಗಾಗಿ ಬಹುನಿರೀಕ್ಷಿತ ಅಧಿಸೂಚನೆ ಹೊರಡಿಸುವ ನಿರೀಕ್ಷೆ ಇದೆ.

ಇತ್ತೀಚೆಗೆ ಬಿಡುಗಡೆಯಾದ ಡಿಸೆಂಬರ್ ಎಐಸಿಪಿಐ ಸೂಚ್ಯಂಕ ಸಂಖ್ಯೆಗಳ ಆಧಾರದ ಮೇಲೆ, ಜನವರಿ 2024 ರಿಂದ  ಶೇಕಡಾ ನಾಲ್ಕರಷ್ಟು ತುಟ್ಟಿಭತ್ಯೆ ಹೆಚ್ಚಳವಾಗಲಿದೆ ಎನ್ನುವುದು ಸ್ಪಷ್ಟವಾಗಿದೆ. ತುಟ್ಟಿ ಭತ್ಯೆಯಲ್ಲಿ ಶೇ.4ರಷ್ಟು ಹೆಚ್ಚಳವಾದರೆ ಕೇಂದ್ರ ಸರ್ಕಾರಿ ನೌಕರರ ಒಟ್ಟು ತುಟ್ಟಿ ಭತ್ಯೆ ಶೇ.50ಕ್ಕೆ ಏರಿಕೆಯಾಗಲಿದೆ.  

ಡಿಎ ಹೆಚ್ಚಳದ ಪ್ರಕಟಣೆ ಮಾರ್ಚ್‌ನಲ್ಲಿ ಹೊರಬರುವ ನಿರೀಕ್ಷೆಯಿದೆ. ಸಾಮಾನ್ಯವಾಗಿ, ಜನವರಿಯಿಂದ ಜಾರಿಗೆ ಬರುವ ತುಟ್ಟಿಭತ್ಯೆ ಹೆಚ್ಚಳದ ಘೋಷಣೆಯು ಮಾರ್ಚ್‌ನಲ್ಲಿ ಅಂದರೆ ಹೋಳಿ ಹಬ್ಬದ ಆಸುಪಾಸಿನಲ್ಲಿ  ಹೊರ ಬೀಳುತ್ತದೆ. 

ಪಿಂಚಣಿದಾರರ ತುಟ್ಟಿಭತ್ಯೆಯನ್ನು ನಿರ್ಧರಿಸಲಾಗುತ್ತದೆ. ಕೈಗಾರಿಕಾ ಕಾರ್ಮಿಕರಿಗೆ ಗ್ರಾಹಕ ಬೆಲೆ ಸೂಚ್ಯಂಕವು 12 ತಿಂಗಳ ಅವಧಿಗೆ ಸರಾಸರಿ 392.83 ಆಗಿದೆ. ಅದರಂತೆ, ಒಟ್ಟು ಭತ್ಯೆಯನ್ನು ಮೂಲ ವೇತನದ ಶೇಕಡಾ 50.26 ಎಂದು ಲೆಕ್ಕಹಾಕಲಾಗುತ್ತದೆ. ದಶಮಾಂಶಗಳನ್ನು ತೆಗೆದುಹಾಕಿದರೆ, ಈ ಹೆಚ್ಚಳ 50% ಆಗಿರುತ್ತದೆ.

ಇದಕ್ಕೂ ಮೊದಲು, ಜುಲೈ 2023 ರಲ್ಲಿ  ತುಟ್ಟಿಭತ್ಯೆಯನ್ನು ಶೇಕಡಾ ನಾಲ್ಕು ರಷ್ಟು ಹೆಚ್ಚಿಸಲಾಯಿತು. ಈಗ ಇದನ್ನು ಮತ್ತೆ ನಾಲ್ಕು ಶೇಕಡಾ ಹೆಚ್ಚಿಸಿದರೆ, ಒಟ್ಟು ಡಿಎ ಶೇಕಡಾ 50 ಕ್ಕೆ ತಲುಪುತ್ತದೆ. ಸುಮಾರು 69.76 ಲಕ್ಷ ಪಿಂಚಣಿದಾರರು ಮತ್ತು 47.58 ಲಕ್ಷ ಕೇಂದ್ರ ಸರ್ಕಾರಿ ನೌಕರರು ಇದರ ಪ್ರಯೋಜನ ಪಡೆಯಲಿದ್ದಾರೆ.

ತುಟ್ಟಿಭತ್ಯೆ ನಂತರ ಫಿಟ್‌ಮೆಂಟ್ ಅಂಶವೂ ಹೆಚ್ಚಾಗುವ ನಿರೀಕ್ಷೆಯಿದೆ. ಪ್ರಸ್ತುತ ಕೇಂದ್ರ ಸರ್ಕಾರಿ ನೌಕರರ ಫಿಟ್‌ಮೆಂಟ್ ಅಂಶ 2.57 ಆಗಿದೆ.ಇದನ್ನು 3.00 ಕ್ಕೆ ಏರಿಸಬೇಕೆಂದು ಸಂಘಗಳು ಬಹಳ ದಿನಗಳಿಂದ ಒತ್ತಾಯಿಸುತ್ತಿವೆ.

ತುಟ್ಟಿಭತ್ಯೆ  50 ಪ್ರತಿಶತವನ್ನು ತಲುಪಿದ ನಂತರ HRA ಯಲ್ಲೂ ಹೆಚ್ಚಳವಾಗುತ್ತದೆ.ಏಳನೇ ವೇತನ ಆಯೋಗದ ಶಿಫಾರಸುಗಳ ಪ್ರಕಾರ, X, Y ಮತ್ತು Z ವರ್ಗದ ನಗರಗಳಲ್ಲಿ ಪ್ರಸ್ತುತ ನೀಡಲಾಗುವ ಹೆಚ್ಆರ್ ಎಯನ್ನು  27, 18 ಮತ್ತು 9 ಪ್ರತಿಶತದಿಂದ 30, 20 ಮತ್ತು 10 ಪ್ರತಿಶತಕ್ಕೆ ಹೆಚ್ಚಿಸಲಾಗುವುದು. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link