ಸರ್ಕಾರಿ ನೌಕರರ ವೇತನದಲ್ಲಿ 92% ಹೆಚ್ಚಳ !ಇಲ್ಲಿಯವರೆಗಿನ ಅತಿ ದೊಡ್ಡ ಹೈಕ್ ಇದು !ಸಂಪೂರ್ಣ ಅಂಕಿ ಅಂಶ ಇಲ್ಲಿದೆ ನೋಡಿ
ಕೆಲವು ದಿನಗಳ ಹಿಂದಷ್ಟೇ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆಯಲ್ಲಿ ಹೆಚ್ಚಳ ಮಾಡಿ ಘೋಷಣೆ ಹೊರ ಬಿದ್ದಿದೆ. ಇದರ ಬೆನ್ನಲ್ಲೇ ಇದೀಗ ಮತ್ತೊಂದು ಬಂಪರ್ ಸುದ್ದಿ ಬಂದಿದೆ.
10 ವರ್ಷಗಳಿಗೊಮ್ಮೆ ಹೊಸ ವೇತನ ಆಯೋಗ ರಚನೆಯಾಗುವುದು ಪದ್ಧತಿ. ಆ ಪ್ರಕಾರ ಇದೀಗ ಹೊಸ ವೇತನ ಆಯೋಗ ರಚನೆಯ ಕಾಲ ಕೂಡಿ ಬಂದಿದೆ.ಮುಂದಿನ ವೇತನ ಆಯೋಗ ರಚನೆ ಬಗ್ಗೆ ಸರ್ಕಾರ ತಯಾರಿ ನಡೆಸಿದೆ ಎನ್ನಲಾಗಿದೆ.
8 ನೇ ವೇತನ ಆಯೋಗವನ್ನು ಮುಂದಿನ ವರ್ಷದ ಆರಂಭದಲ್ಲಿ ಘೋಷಿಸಬಹುದು. ಕೇಂದ್ರ ಬಜೆಟ್ 2025 ರಲ್ಲಿಅಂದರೆ ವರ್ಷದ ಆರಂಭದಲ್ಲಿಯೇ ಈ ಬಗ್ಗೆ ಘೋಷಣೆ ಹೊರ ಬೀಳಲಿದೆ ಎನ್ನಲಾಗಿದೆ.
8ನೇ ವೇತನ ಶ್ರೇಣಿಯಲ್ಲಿ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ವೇತನ ಮತ್ತು ಪಿಂಚಣಿದಲ್ಲಿ ಭರ್ಜರಿ ಏರಿಕೆ ಕಂಡುಬರಲಿದೆ.ಹೊಸ ವೇತನ ಆಯೋಗದ ಮೂಲ ವೇತನ, ಭತ್ಯೆ ಇತ್ಯಾದಿಗಳನ್ನು ಪರಿಷ್ಕರಿಸಲಾಗುವುದು.
8ನೇ ವೇತನ ಆಯೋಗದ ಶಿಫಾರಸುಗಳಲ್ಲಿ 1.92ಕ್ಕೆ ನಿಗದಿಪಡಿಸಿರುವ ಫಿಟ್‌ಮೆಂಟ್ ಅಂಶ ಜಾರಿಯಾದರೆ ಕೇಂದ್ರ ಸರ್ಕಾರಿ ನೌಕರರ ಮೂಲ ವೇತನ 18,000 ರೂ.ನಿಂದ ಸುಮಾರು 34,560 ರೂ.ಗೆ ಏರಿಕೆಯಾಗಲಿದೆ. ಅಂದರೆ ವೇತನದಲ್ಲಿ ಶೇ.92ರಷ್ಟು ಏರಿಕೆಯಾಗಲಿದೆ.
ಪಿಂಚಣಿದಾರರ ಪಿಂಚಣಿಯಲ್ಲೂ ದೊಡ್ಡ ಮೊತ್ತದ ಏರಿಕೆ ಕಾಣಲಿದೆ. ನಿವೃತ್ತರ ಕನಿಷ್ಠ ಪಿಂಚಣಿ 9,000 ರೂ.ನಿಂದ 17,280 ರೂ.ಗೆ ಹೆಚ್ಚಾಗಬಹುದು. ಹಣದುಬ್ಬರ, ವೆಚ್ಚ ಮತ್ತು ಇತರ ಆರ್ಥಿಕ ಅಂಶಗಳಿಂದ ಪ್ರಭಾವಿತವಾಗಿರುವ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಇದು ದೊಡ್ಡ ಪರಿಹಾರವನ್ನು ನೀಡುತ್ತದೆ.
8ನೇ ವೇತನ ಆಯೋಗ ರಚನೆಯಾದ ನಂತರ ಆಯೋಗವು ವಿವಿಧ ಆರ್ಥಿಕ ಪರಿಸ್ಥಿತಿಗಳನ್ನು ವಿಶ್ಲೇಷಿಸಿ ಅದಕ್ಕೆ ಅನುಗುಣವಾಗಿ ಲೆಕ್ಕಾಚಾರಗಳನ್ನು ಸಿದ್ಧಪಡಿಸಿ ತನ್ನ ವರದಿಯನ್ನು ಸಲ್ಲಿಸುತ್ತದೆ.ಹಿಂದಿನ ವೇತನ ಸಮಿತಿಗಳು ಇದಕ್ಕಾಗಿ ಸಾಕಷ್ಟು ಸಮಯವನ್ನು ತೆಗೆದುಕೊಂಡಿವೆ.ಆ ನಂತರ ಸರ್ಕಾರ ಅದನ್ನು ಪರಿಶೀಲಿಸಿ ಅನುಮೋದನೆ ನೀಡಲಿದೆ.
ಸೂಚನೆ :ಈ ಪೋಸ್ಟ್ ಅನ್ನು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಬರೆಯಲಾಗಿದೆ. ಆ ಮೂಲಕ ವೇತನದ ದರದಲ್ಲಿ ಹೆಚ್ಚಳ ಅಥವಾ ಮುಂದಿನ ವೇತನ ಆಯೋಗದ ಯಾವುದೇ ಗ್ಯಾರಂಟಿ ನೀಡಲಾಗುವುದಿಲ್ಲ. ಇತ್ತೀಚಿನ ಮತ್ತು ನಿಖರವಾದ ಮಾಹಿತಿಗಾಗಿ ಅಧಿಕೃತ ಸರ್ಕಾರಿ ವೆಬ್‌ಸೈಟ್‌ಗಳನ್ನು ಪ್ರವೇಶಿಸಲು ಶಿಫಾರಸು ಮಾಡಲಾಗಿದೆ.