7th Pay Commission: ಸರ್ಕಾರಿ ನೌಕರರಿಗೆ, ಪಿಂಚಣಿದಾರರಿಗೆ ಡಬಲ್ ಜಾಕ್ ಪಾಟ್: ಡಿಎ ಜೊತೆಗೆ ಕೈ ಸೇರಲಿದೆ 18 ತಿಂಗಳ ಡಿಎ ಅರಿಯರ್ಸ್ !
ಕೇಂದ್ರ ಸರ್ಕಾರಿ ನೌಕರರಿಗೆ ಶೇ 4ರಷ್ಟು ತುಟ್ಟಿಭತ್ಯೆ ಹೆಚ್ಚಳವಾಗಲಿದೆ.ಇದರಿಂದ ಒಂದು ಕೋಟಿಗೂ ಹೆಚ್ಚು ನೌಕರರು ಮತ್ತು ಪಿಂಚಣಿದಾರರಿಗೆ ಭಾರೀ ಪರಿಹಾರ ದೊರೆಯಲಿದೆ.
ಇತ್ತೀಚೆಗೆ ಬಿಡುಗಡೆಯಾದ ಎಐಸಿಪಿಐ ಸೂಚ್ಯಂಕ ಸಂಖ್ಯೆಗಳು ತುಟ್ಟಿಭತ್ಯೆಯಲ್ಲಿ ಶೇಕಡಾ ನಾಲ್ಕರಷ್ಟು ಏರಿಕೆಯನ್ನು ಸೂಚಿಸಿವೆ. ಪ್ರಸ್ತುತ, ನೌಕರರು ಶೇಕಡಾ 46 ರಷ್ಟು ಡಿಎ ಪಡೆಯುತ್ತಿದ್ದಾರೆ
ತುಟ್ಟಿಭತ್ಯೆಯಲ್ಲಿ ಆಗುವ ಶೇಕಡಾ ನಾಲ್ಕು ಹೆಚ್ಚಳವು ನೌಕರರ ಒಟ್ಟು ತುಟ್ಟಿ ಭತ್ಯೆಯನ್ನು ಶೇಕಡಾ 50ಕ್ಕೆ ಹೆಚ್ಚಿಸುತ್ತದೆ
ಇದಲ್ಲದೆ, ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಸ್ಥಗಿತಗೊಂಡಿದ್ದ 18 ತಿಂಗಳ ಡಿಎ ಬಾಕಿಯನ್ನು ಸರ್ಕಾರ ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ. ಅದಕ್ಕಾಗಿ ಅಧಿಸೂಚನೆಯನ್ನು ಹೊರಡಿಸಲಿದೆ ಎಂದು ಮೂಲಗಳು ಹೇಳುತ್ತವೆ.
ಕರೋನಾ ಸಾಂಕ್ರಾಮಿಕ ಸಮಯದಲ್ಲಿ ಜನವರಿ 1, 2020 ರಿಂದ ಜೂನ್ 30, 2021 ರವರೆಗಿನ ತುಟ್ಟಿಭತ್ಯೆಯನ್ನು ತಡೆಹಿಡಿಯಲಾಗಿತ್ತು. ನಂತರ ಪರಿಸ್ಥಿತಿ ಸ್ವಲ್ಪ ಸುಧಾರಿಸಿದ ನಂತರ ತುಟ್ಟಿಭತ್ಯೆಯನ್ನು ಮತ್ತೆ ಆರಂಭಿಸಲಾಯಿತು.
ಆದರೆ, ಸ್ಥಗಿತಗೊಳಿಸಿದ್ದ 18 ತಿಂಗಳ ಮೊತ್ತವನ್ನು ಇನ್ನೂ ನೌಕರರಿಗೆ ಪಾವತಿಸಿಲ್ಲ. ಸರ್ಕಾರ ಈಗ ಆ ಬಾಕಿ ಡಿಎಯನ್ನು ಬಿಡುಗಡೆ ಮಾಡಬಹುದು ಎನ್ನಲಾಗಿದೆ.
ಆದರೆ, ಈ ಬಗ್ಗೆ ಸರ್ಕಾರ ಇನ್ನೂ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿಲ್ಲ.