ಕೊನೆಗೂ ಈಡೇರಿತು ಬಹು ದಿನದ ಕನಸು!ಸರ್ಕಾರಿ ನೌಕರರ ಮೂಲ ವೇತನದಲ್ಲಿ 44 % ಹೆಚ್ಚಳ !ಈ ದಿನ ಸರ್ಕಾರ ಹೊರಡಿಸುವುದು ಅಧಿಸೂಚನೆ

Wed, 04 Sep 2024-9:43 am,

 ಕೇಂದ್ರ ಸರ್ಕಾರಿ ನೌಕರರಿಗೆ ಬಹಳಷ್ಟು  ಸಿಹಿ ಸುದ್ದಿಗಳು ಎದುರು ನೋಡುತ್ತಿವೆ.  ಬಹುನಿರೀಕ್ಷಿತ ತುಟ್ಟಿಭತ್ಯೆ ಹೆಚ್ಚಳದ ಅಧಿಸೂಚನೆ ಶೀಘ್ರದಲ್ಲೇ  ಹೊರ ಬೀಳಲಿದೆ.   ಮೂಲಗಳ ಪ್ರಕಾರ,ಕೇಂದ್ರ ಸರ್ಕಾರ ಈ ತಿಂಗಳು ಅಂದರೆ ಸೆಪ್ಟೆಂಬರ್‌ನಲ್ಲಿಯೇ ಡಿಎ ಹೆಚ್ಚಳವನ್ನು ಘೋಷಿಸಲಿದೆ.

ಇನ್ನು ಕೇಂದ್ರ ಸರ್ಕಾರಿ ನೌಕರರು 8ನೇ ವೇತನ ಆಯೋಗಕ್ಕಾಗಿ ಬಹಳ ದಿನಗಳಿಂದ ಕಾಯುತ್ತಿದ್ದಾರೆ.ಇದರ ಜಾರಿಯನ್ನು ಸರ್ಕಾರ ಯಾವಾಗ ಪ್ರಕಟಿಸುತ್ತದೆ ಎಂದು ಕತಾರದಿಂದ ಎದುರು ನೋಡುತ್ತಿದ್ದಾರೆ.

ಸಾಮಾನ್ಯವಾಗಿ, ಹೊಸ ವೇತನ ಆಯೋಗವು ಪ್ರತಿ 10 ವರ್ಷಗಳಿಗೊಮ್ಮೆ ಜಾರಿಗೆ ಬರುತ್ತದೆ. 7ನೇ ವೇತನ ಆಯೋಗವು 2016ರಲ್ಲಿ ಜಾರಿಗೆ ಬಂದಿದ್ದು, ಅಧಿಸೂಚನೆಯನ್ನು 2014 ರಲ್ಲಿ ಪ್ರಕಟಿಸಲಾಯಿತು. ಅದರಂತೆ 8ನೇ ವೇತನ ಆಯೋಗದ ಅಧಿಸೂಚನೆ ಈಗ ಹೊರಬೀಳಬೇಕಿದೆ.   

7 ನೇ ವೇತನ ಆಯೋಗದ ಅವಧಿ ಡಿಸೆಂಬರ್ 31, 2025 ರಂದು ಕೊನೆಗೊಳ್ಳುತ್ತದೆ. ಅಷ್ಟರೊಳಗೆ 8ನೇ ವೇತನ ಆಯೋಗದ ಅನುಷ್ಠಾನ ಪೂರ್ಣಗೊಳ್ಳಬೇಕು.8ನೇ ವೇತನ ಆಯೋಗ ಜಾರಿಗೆ ಬಂದ ನಂತರ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ಮೂಲ ವೇತನ, ಮಾಸಿಕ ವೇತನ, ಭತ್ಯೆ, ತುಟ್ಟಿ ಭತ್ಯೆ ಮತ್ತು ಪಿಂಚಣಿಯಲ್ಲಿ ಬದಲಾವಣೆಯಾಗಲಿದೆ.   

ಹೊಸ ವೇತನ ಆಯೋಗದ ರಚನೆಯ ಪ್ರಕ್ರಿಯೆಯಲ್ಲಿ, ಆಯೋಗವು ಪ್ರಸ್ತುತ ಆರ್ಥಿಕ ಪರಿಸ್ಥಿತಿಗಳು, ಉದ್ಯೋಗಿ ವೇತನಗಳು ಮತ್ತು ಪ್ರಯೋಜನಗಳನ್ನು ಒಳಗೊಂಡಂತೆ ವಿವಿಧ ಅಂಶಗಳನ್ನು ಪರಿಗಣಿಸುತ್ತದೆ. ಇದರ ನಂತರ, ಹೊಸ ವೇತನ ಆಯೋಗದ ಶಿಫಾರಸುಗಳ ಆಧಾರದ ಮೇಲೆ, ವೇತನ ಲೆಕ್ಕಾಚಾರದ ವಿವಿಧ ಘಟಕಗಳಲ್ಲಿ ಬದಲಾವಣೆಗಳನ್ನು ಮಾಡಲಾಗುತ್ತದೆ.   

8ನೇ ವೇತನ ಆಯೋಗದಲ್ಲಿ ಫಿಟ್‌ಮೆಂಟ್ ಅಂಶವನ್ನು 2.57ರಿಂದ 3.68ಕ್ಕೆ ಹೆಚ್ಚಿಸಬೇಕು ಎಂದು ಕೇಂದ್ರ ಸರಕಾರಿ ನೌಕರರು ಒತ್ತಾಯಿಸುತ್ತಿದ್ದಾರೆ. ಫಿಟ್‌ಮೆಂಟ್ ಅಂಶವು ಕೇಂದ್ರ ಸರ್ಕಾರಿ ನೌಕರರ ಸಂಬಳ ಮತ್ತು ಕಾರ್ಯಕ್ಷಮತೆಯನ್ನು ಲೆಕ್ಕಾಚಾರ ಮಾಡಲು ಬಳಸುವ ಸಾಮಾನ್ಯ ಗುಣಕವಾಗಿದೆ.  

ಆರನೇ ವೇತನ ಆಯೋಗವು 1.86 ರ ಫಿಟ್‌ಮೆಂಟ್ ಅಂಶವನ್ನು ಶಿಫಾರಸು ಮಾಡಿದ್ದು,  7ನೇ ವೇತನ ಶ್ರೇಣಿಯಲ್ಲಿರುವ ಎಲ್ಲಾ ನೌಕರರ ಫಿಟ್‌ಮೆಂಟ್ ಅಂಶವನ್ನು 2.57ಕ್ಕೆ ಹೆಚ್ಚಿಸಲಾಗಿದೆ.ಈ ಫಿಟ್‌ಮೆಂಟ್ ಅಂಶವನ್ನು ಆಧರಿಸಿ ಕೇಂದ್ರ ಸರ್ಕಾರಿ ನೌಕರರ ಕನಿಷ್ಠ ವೇತನವನ್ನು ಮಾಸಿಕ ರೂ.7,000ದಿಂದ ರೂ.18,000ಕ್ಕೆ ಹೆಚ್ಚಿಸಲಾಗಿದೆ.  

8ನೇ ವೇತನ ಆಯೋಗವು ಜಾರಿಗೆ ಬಂದಾಗ ಫಿಟ್‌ಮೆಂಟ್ ಅಂಶವು 2.57 ರಿಂದ 3.68 ಕ್ಕೆ ಹೆಚ್ಚಾಗುವ ನಿರೀಕ್ಷೆಯಿದೆ.ಇದರಿಂದ ಶೇ.44ರಷ್ಟು ವೇತನ ಹೆಚ್ಚಳವಾಗುವ ಸಾಧ್ಯತೆ ಇದೆ.ಇತರ ಭತ್ಯೆಗಳಲ್ಲೂ ಭಾರೀ ಏರಿಕೆಯಾಗಲಿದೆ.      

8ನೇ ವೇತನ ಶ್ರೇಣಿಯಲ್ಲಿ ಭತ್ಯೆ, ಪ್ರಯಾಣ ಭತ್ಯೆ, ಮನೆ ಬಾಡಿಗೆ ಭತ್ಯೆ ಕೂಡ ಏರಿಕೆಯಾಗುವ ನಿರೀಕ್ಷೆ ಇದೆ. 8ನೇ ವೇತನ ಆಯೋಗವು ಜಾರಿಗೆ ಬಂದ ನಂತರ ಹಣದುಬ್ಬರ ಮತ್ತು ಜೀವನ ವೆಚ್ಚದಲ್ಲಿನ ಬದಲಾವಣೆಗಳನ್ನು ಪ್ರತಿಬಿಂಬಿಸಲು ಈ ಭತ್ಯೆಗಳನ್ನು ಪರಿಷ್ಕರಿಸಲಾಗುವುದು.

ಆದರೆ, 8ನೇ ವೇತನ ಆಯೋಗವನ್ನು ಸ್ಥಾಪಿಸುವ ಕುರಿತು ಕೇಂದ್ರ ಸರ್ಕಾರ ಇನ್ನೂ ಅಧಿಕೃತವಾಗಿ ಏನನ್ನೂ ಪ್ರಕಟಿಸಿಲ್ಲ. 8ನೇ ವೇತನ ಆಯೋಗದ ನಿರ್ದಿಷ್ಟ ಅನುಷ್ಠಾನದ ದಿನಾಂಕವೂ ಇನ್ನೂ ನಿಗದಿಯಾಗಿಲ್ಲ.

ಸೂಚನೆ : ಈ ಪೋಸ್ಟ್ ಅನ್ನು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಬರೆಯಲಾಗಿದೆ. ಆ ಮೂಲಕ ವೇತನದ ದರದಲ್ಲಿ ಹೆಚ್ಚಳ ಅಥವಾ ಮುಂದಿನ ವೇತನ ಆಯೋಗದ ಯಾವುದೇ ಗ್ಯಾರಂಟಿ ನೀಡಲಾಗುವುದಿಲ್ಲ. ಇತ್ತೀಚಿನ ಮತ್ತು ನಿಖರವಾದ ಮಾಹಿತಿಗಾಗಿ ಅಧಿಕೃತ ಸರ್ಕಾರಿ ವೆಬ್‌ಸೈಟ್‌ಗಳನ್ನು ಅಕ್ಸೆಸ್ ಮಾಡಲು  ಶಿಫಾರಸು ಮಾಡಲಾಗಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link