ಯುಪಿಎಸ್ ಅಡಿಯಲ್ಲಿ ಸರ್ಕಾರಿ ನೌಕರರ ಮೂಲ ವೇತನ, ಪಿಂಚಣಿ ಹೆಚ್ಚಳ!ಏರಿಕೆ ಎಷ್ಟು ಕಾಣಲಿದೆ ಸ್ಯಾಲರಿ ಇಲ್ಲಿದೆ ಲೆಕ್ಕಾಚಾರ

Mon, 16 Sep 2024-9:59 am,

ಕೇಂದ್ರ ಸರ್ಕಾರ ಇತ್ತೀಚೆಗೆ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಗೆ (NPS) ಬದಲಿಯಾಗಿ ಏಕೀಕೃತ ಪಿಂಚಣಿ ಯೋಜನೆಯನ್ನು (UPS) ಘೋಷಿಸಿದೆ.ಇದು ಏಪ್ರಿಲ್ 1, 2025 ರಿಂದ ಜಾರಿಗೆ ಬರಲಿದೆ.ಕೇಂದ್ರ ಸರ್ಕಾರಿ ನೌಕರರು ಹಳೆಯ ಪಿಂಚಣಿ ಯೋಜನೆಯನ್ನು (ಒಪಿಎಸ್) ಮರು ಜಾರಿಗೆ ತರಬೇಕೆಂದು ಬಹಳ ದಿನಗಳಿಂದ ಒತ್ತಾಯಿಸುತ್ತಿದ್ದಾರೆ.   

ವಿವಿಧ ನೌಕರರ ಸಂಘಟನೆಗಳು ಎನ್‌ಪಿಎಸ್ ರದ್ದುಪಡಿಸಬೇಕು ಮತ್ತು ಒಪಿಎಸ್ ಅನ್ನು ಮರುಸ್ಥಾಪಿಸಬೇಕೆಂದು ಒತ್ತಾಯಿಸುತ್ತಿವೆ.ಒಪಿಎಸ್‌ನಂತೆ ಯುಪಿಎಸ್‌ಗೂ ಪಿಂಚಣಿ ಖಾತರಿ ಇದೆ.ನಿವೃತ್ತಿಯ ಹಿಂದಿನ 12 ತಿಂಗಳ ಮೂಲ ವೇತನದ ಸರಾಸರಿಯ 50% ಅನ್ನು ಪಿಂಚಣಿಯಾಗಿ ಪಾವತಿಸಲಾಗುತ್ತದೆ.   

ಅಲ್ಲದೆ, ಕನಿಷ್ಠ 10 ವರ್ಷಗಳ ಸೇವೆಯ ನಂತರ ನಿವೃತ್ತಿಯಾಗುವವರಿಗೆ ಕನಿಷ್ಠ 10,000 ರೂ.ಗಳ ಪಿಂಚಣಿಯನ್ನು ಈ ಯೋಜನೆಯು ಖಾತರಿಪಡಿಸುತ್ತದೆ.ಪಿಂಚಣಿದಾರರ ಮರಣದ ಸಂದರ್ಭದಲ್ಲಿ, ಸಂಗಾತಿ 60% ಪಿಂಚಣಿ ಪಡೆಯುತ್ತಾರೆ.ಪೂರ್ಣ ಪಿಂಚಣಿಗೆ ಅರ್ಹರಾಗಲು ನೌಕರರು ಕನಿಷ್ಠ 25 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಬೇಕು.  

7ನೇ ವೇತನ ಆಯೋಗದ ಅಡಿಯಲ್ಲಿ ಪ್ರಸ್ತುತ ಕನಿಷ್ಠ ಪಿಂಚಣಿ 9,000 ರೂಪಾಯಿಯನ್ನು ಕನಿಷ್ಠ ಮೂಲ ವೇತನ ರೂ.18,000 ಗೆ ಲಿಂಕ್ ಮಾಡಲಾಗಿದೆ.ಆದರೆ, 2026 ರಲ್ಲಿ ನಿರೀಕ್ಷಿತ 8 ನೇ ವೇತನ ಆಯೋಗದ ನಂತರ, ಕನಿಷ್ಠ ಮೂಲ ವೇತನವು 1.92 ರ ಫಿಟ್‌ಮೆಂಟ್ ಅಂಶವನ್ನು ಪರಿಗಣಿಸಿ 34,560 ರೂಪಾಯಿಗೆ ಏರಿಕೆ ಆಗುವ ನಿರೀಕ್ಷೆಯಿದೆ.  

ಅದರಂತೆ, 25 ವರ್ಷಗಳ ಕಾಲ ಕೆಲಸ ಮಾಡಿದವರಿಗೆ ಕನಿಷ್ಠ ಯುಪಿಎಸ್ ಪಿಂಚಣಿ 17,280 ರೂ ಎಂದು ಅಂದಾಜಿಸಬಹುದು ಎಂದು ಫೈನಾನ್ಶಿಯಲ್ ಎಕ್ಸ್‌ಪ್ರೆಸ್ ವರದಿ ತಿಳಿಸಿದೆ. ನಿವೃತ್ತಿಯ ಹಿಂದಿನ 12 ತಿಂಗಳ ಅವಧಿಯಲ್ಲಿ ನೌಕರನ ಸರಾಸರಿ ಮೂಲ ವೇತನವನ್ನು ಆಧರಿಸಿ ಪಿಂಚಣಿಯ ಲೆಕ್ಕಾಚಾರವನ್ನು ಮಾಡಲಾಗುತ್ತದೆ. 

ಮೂಲಗಳ ಪ್ರಕಾರ, 8ನೇ ವೇತನ ಆಯೋಗವು 2025ರಲ್ಲಿ ಸ್ಥಾಪನೆಯಾಗಲಿದ್ದು, 2026ರಲ್ಲಿ ಜಾರಿಗೆ ಬರಲಿದೆ.ಹೊಸ ವೇತನ ಆಯೋಗವನ್ನು ಸ್ಥಾಪಿಸಿದ ನಂತರ, ವೇತನ ರಚನೆಯಲ್ಲಿ ಹಲವು ಬದಲಾವಣೆಗಳಾಗಲಿವೆ.ಇದರಿಂದ ಕೇಂದ್ರ ಸರ್ಕಾರಿ ನೌಕರರಿಗೆ ವೇತನ ಹೆಚ್ಚಳವಾಗಲಿದೆ.  

ಈ ವೇತನ ಹೆಚ್ಚಳದಿಂದ ಮಾಸಿಕ ವೇತನದಲ್ಲೂ ಗಣನೀಯ ಏರಿಕೆಯಾಗಲಿದೆ.ಹಂತ 1 ಉದ್ಯೋಗಿಗಳಿಗೆ, 34% ವರೆಗೆ ವೇತನ ಹೆಚ್ಚಳವನ್ನು ನಿರೀಕ್ಷಿಸಲಾಗಿದೆ. ಹಂತ 18 ನೌಕರರು 100% ವರೆಗೆ ವೇತನ ಹೆಚ್ಚಳವನ್ನು ಕಾಣಬಹುದು. ಪ್ರಸ್ತಾವಿತ ಬದಲಾವಣೆಗಳ ಪ್ರಕಾರ, ಹಂತ 1 ಉದ್ಯೋಗಿಗಳಿಗೆ ವೇತನವು 34,560 ರೂಪಾಯಿಗೆ ಮತ್ತು ಹಂತ 18 ಉದ್ಯೋಗಿಗಳ ವೇತನ 4.8 ಲಕ್ಷಕ್ಕೆ ಏರಬಹುದು.

ಹೊಸ ವೇತನ ಆಯೋಗಗಳನ್ನು ಸಾಮಾನ್ಯವಾಗಿ 10 ವರ್ಷಗಳಿಗೊಮ್ಮೆ ರಚಿಸಲಾಗುತ್ತದೆ. 7 ನೇ ವೇತನ ಆಯೋಗವನ್ನು 2014 ರಲ್ಲಿ ಘೋಷಿಸಲಾಯಿತು ಮತ್ತು 2016 ರಲ್ಲಿ ಜಾರಿಗೆ ತರಲಾಯಿತು. ಅದರಂತೆ 8ನೇ ವೇತನ ಆಯೋಗವನ್ನು 2026ರಲ್ಲಿ ರಚಿಸಬೇಕು. ಆದರೆ, ಈ ಬಗ್ಗೆ ಸರ್ಕಾರ ಇನ್ನೂ ಅಧಿಕೃತವಾಗಿ ಏನನ್ನೂ ಘೋಷಿಸಿಲ್ಲ.

ಹೊಸ ಪೇ ಬ್ಯಾಂಡ್‌ಗಳನ್ನು ಪರಿಚಯಿಸಿದಾಗ ಮೂಲ ವೇತನವನ್ನು ನಿರ್ಧರಿಸುವ ಫಿಟ್‌ಮೆಂಟ್ ಅಂಶವನ್ನು ಬದಲಾಯಿಸಲಾಗುತ್ತದೆ. ಇದರಿಂದಾಗಿ ಕೇಂದ್ರ ಸರ್ಕಾರಿ ನೌಕರರ ವೇತನದಲ್ಲಿ ಭಾರಿ ಏರಿಕೆಯಾಗಿದೆ.ಪಿಂಚಣಿದಾರರ ಪಿಂಚಣಿಯಲ್ಲಿ ಭಾರಿ ಏರಿಕೆಯಾಗಲಿದೆ.

6ನೇ ವೇತನ ಶ್ರೇಣಿಯಿಂದ 7ನೇ ವೇತನ ಶ್ರೇಣಿಗೆ ಪರಿವರ್ತನೆಯಾದ ಮೇಲೆ ನೌಕರರ ಸಂಘವು ವೇತನ ಪರಿಷ್ಕರಣೆಯಲ್ಲಿ ಫಿಟ್‌ಮೆಂಟ್ ಅಂಶವನ್ನು 3.68ಕ್ಕೆ ಬದಲಾಯಿಸುವಂತೆ ಒತ್ತಾಯಿಸಿತ್ತು. ಆದರೆ ಸರ್ಕಾರ ಅದನ್ನು 2.57ರಲ್ಲಿಯೇ ಉಳಿಸಿಕೊಂಡಿದೆ. 8ನೇ ವೇತನ ಆಯೋಗದಲ್ಲಿ ಫಿಟ್‌ಮೆಂಟ್ ಅಂಶವು 3.68 ಪಟ್ಟು ಹೆಚ್ಚಾಗುವ ನಿರೀಕ್ಷೆಯಿದೆ.  

ಸೂಚನೆ :ಈ ಪೋಸ್ಟ್ ಅನ್ನು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಬರೆಯಲಾಗಿದೆ.ಆ ಮೂಲಕ ವೇತನದ ದರದಲ್ಲಿ ಹೆಚ್ಚಳ ಅಥವಾ ಮುಂದಿನ ವೇತನ ಆಯೋಗದ ಯಾವುದೇ ಗ್ಯಾರಂಟಿ ನೀಡಲಾಗುವುದಿಲ್ಲ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link