ಒಂದು ನಿಮಿಷವೂ ಕಾಯಬೇಕಿಲ್ಲ, ಅಪ್ಲೈ ಮಾಡಿದ ತಕ್ಷಣ ಬಿಡುಗಡೆಯಾಗುತ್ತದೆ ಪಿಎಫ್ ಹಣ!ಬ್ಯಾಂಕ್ ನಂತೆ ಇಪಿಎಫ್ ಒ ಕೆಲಸ !ಕೇಂದ್ರ ಸರ್ಕಾರದ ಭರ್ಜರಿ ಯೋಜನೆ
EPFO ನಿರಂತರವಾಗಿ ಉದ್ಯೋಗಿಗಳ ಅನುಕೂಲಕ್ಕಾಗಿ ಕೆಲಸ ಮಾಡುತ್ತಿದೆ. ಇದೀಗ ಹೊಸ ಹೊಸ ಸಾಫ್ಟ್ವೇರ್ ಸಿಸ್ಟಮ್ ಇಪಿಎಫ್ಒ 3.0 ಅನ್ನು ಪ್ರಾರಂಭಿಸಲಿದೆ ಎಂದು ಕೇಂದ್ರ ಸರ್ಕಾರ ಘೋಷಿಸಿದೆ.
ಜೂನ್ ನಿಂದ ಜಾರಿಗೆ ಬರುವ ಈ ಹೊಸ ವ್ಯವಸ್ಥೆ ಬ್ಯಾಂಕಿಂಗ್ ವ್ಯವಸ್ಥೆಯಂತೆ ಕಾರ್ಯನಿರ್ವಹಿಸುತ್ತದೆ. ಅದರ ವೆಬ್‌ಸೈಟ್ ಹೆಚ್ಚು ಬಳಕೆದಾರ ಸ್ನೇಹಿಯಾಗಲಿದೆ ಎಂದು ಸರ್ಕಾರ ಹೇಳಿದೆ.
ಈ ಮೂಲಕ ಯಾವುದೇ ತುರ್ತು ಸಂದರ್ಭದಲ್ಲಿ, ಇಪಿಎಫ್‌ಒ ಸದಸ್ಯರು ನಿಗದಿತ ಮಿತಿಯವರೆಗೆ ಹಣವನ್ನು ಹಿಂಪಡೆಯಲು ಸಾಧ್ಯವಾಗುತ್ತದೆ. EPFO 3.0 ಪ್ರಾರಂಭವಾದ ನಂತರ, EPFO ಸದಸ್ಯರಿಗೆ ATM ಕಾರ್ಡ್‌ಗಳನ್ನು ಒದಗಿಸಲಾಗುವುದು.
ಪ್ರಸ್ತುತ ಪಿಎಫ್ ಖಾತೆದಾರರು ಹಣ ಹಿಂಪಡೆಯುವಾಗ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದರೆ ಸಿಸ್ಟಮ್ ಅನ್ನು ಅಪ್‌ಗ್ರೇಡ್ ಮಾಡಿದ ನಂತರ, ಹೆಸರಿನಲ್ಲಿ ತಪ್ಪು, ಆಧಾರ್ ಮತ್ತು ಬ್ಯಾಂಕ್ ಖಾತೆ ಸಂಖ್ಯೆಯನ್ನು ಅಪ್ಡೇಟ್ ಮಾಡದಿರುವುದು, ಮತ್ತು ಹಳೆಯ ಕಂಪನಿಯ ಪಿಎಫ್ ವರ್ಗಾವಣೆಯಾಗದಂತಹ ಸಮಸ್ಯೆಗಳನ್ನು ಎದುರಿಸಬೇಕಾಗಿಲ್ಲ.
ಐಟಿ ಸಿಸ್ಟಮ್ 2.01 ಅಡಿಯಲ್ಲಿ ವೆಬ್‌ಸೈಟ್ ಮತ್ತು ಸಿಸ್ಟಮ್ ಅನ್ನು ನವೀಕರಿಸುವ ಮೊದಲ ಹಂತವು ಜನವರಿ 2025 ರ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿದೆ. ಇದಾದ ನಂತರ ಯಾವುದೇ ಸಮಸ್ಯೆ ಇಲ್ಲದೆ ಪಿಎಫ್ ಖಾತೆಯಿಂದ ಹಣ ತೆಗೆಯಬಹುದು.