Chaitra J Achar: ನೀಲಿ ಮೈಸೂರು ಸಿಲ್ಕ್ ಸೀರೆಯಲ್ಲಿ ಕಂಗೊಳಿಸಿದ ಸಪ್ತ ಸಾಗರದಾಚೆಯ ಚೆಲುವೆ!
ಚಂದನವನದ ಬೆಡಗಿ ನಟಿ ಚೈತ್ರಾ ಆಚಾರ್ ನೀಲಿ ಬಣ್ಣದ ಮೈಸೂರು ಸಿಲ್ಕ್ ಸೀರೆಯನ್ನು ಉಟ್ಟುಕೊಂಡು ವಿಭಿನ್ನ ರೀತಿಯ ಪೋಸ್‌ಗಳಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ.
ನಟಿ ಚೈತ್ರಾ ಆಚಾರ್ 6 ಗಜದ ಮೈಸೂರು ಸಿಲ್ಕ್ ಸೀರೆಯುಟ್ಟು ಕಂಬಳು ಇರೋ ಮನೆಯಲ್ಲಿ ಫೋಟೋಗಳ್ನು ತೆಗೆಸಿಕೊಂಡು, ಅವುಗಳನ್ನು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಕನ್ನಡತಿ ಚೈತ್ರಾ ಆಚಾರ್ ಫೋಟೋದಲ್ಲಿ ಸೀರೆಗೆ ಮ್ಯಾಚ್ ಆಗುವಂತ ನೀಲಿ ಕಲರ್ ಸ್ಟೋನ್‌ನ ಮೂರು ಎಳೆಯ ಸರವನ್ನು ಹಾಕಿಕೊಂಡು, ತೆಲೆಗೆ ತುರುಬು ಹಾಕಿಕೊಂಡು, ಹಣೆಗೆ ಕೆಂಪು ಬೊಟ್ಟನ್ನು ಇಟ್ಟುಕೊಂಡು ಮತ್ತು ಸಣ್ಣ ಮೂಗುತ್ತಿಯನ್ನು ಹಾಕಿಕೊಂಡು ಕಣ್ಮನ ಸೆಳೆದಿದ್ದಾರೆ.
ಚೈತ್ರಾ ಸೋಶಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಹಾಗೆಯೇ ಕ್ಯಾಪ್ಶನ್‌ನಲ್ಲಿ ʻಸುಮ್ ಸುಮ್ನೆ 6 yards of elegance ಅಂತ ಹೇಳೋದಿಲ್ಲ, ಅಂತ ಬರೆದುಕೊಂಡಿದ್ದಾರೆ.
ಚೈತ್ರಾ ಆಚಾರ್ ಯಾವಾಗಲೂ ಹಾಟ್ ಆ್ಯಂಡ್ ಬೋಲ್ಡ್ ಫೋಟೋಗಳ ಮೂಲಕ ಗಮನ ಸೆಳೆದ ನಟಿ ಚಾಲೆಂಜಿಂಗ್ ರೋಲ್‌ಗಳನ್ನು ಹೆಚ್ಚಾಗಿ ಇಷ್ಟಪಡ್ತಾರೆ, ಹಾಗಾಗಿ ಸಪ್ತ ಸಾಗದಾಚೆ ಎಲ್ಲೋ, ಟೋಬಿ ಅಂತಹ ವಿಭಿನ್ನ ಕಥೆಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ.
ಸ್ಯಾಂಡಲ್‌ವುಡ್ ನಟಿ ಚೈತ್ರಾ ಆಚಾರ್ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದಲ್ಲಿ ಕಾಣಿಸಿಕೊಂಡ ಬಳಿಕ ಬೇರೆ ಬೇರೆ ಭಾಷೆಯಿಂದ ಕೂಡ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ.