Chaitra Kundapura: ಬಿಗ್‌ ಬಾಸ್‌ ಮನೆ ಸೇರಿರುವ ಚೈತ್ರಾ ಕುಂದಾಪುರ ಸಂಭಾವನೆ ಎಷ್ಟು ಗೊತ್ತಾ? ಪ್ರತಿ ಎಪಿಸೋಡ್‌ಗೆ ಸಿಗುತ್ತೆ ಇಷ್ಟು ದುಡ್ಡು...!!

Tue, 01 Oct 2024-5:11 pm,

ಹಿಂದೂ ಫೈರ್‌ ಬ್ರ್ಯಾಂಡ್ ಎಂದೇ ಖ್ಯಾತಿ ಪಡೆದಿರುವ ಚೈತ್ರಾ ಕುಂದಾಪುರ ಅವರು ಸದ್ಯ ಬಿಗ್‌ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಯಾಗಿ ಎಂಟ್ರಿಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ಕೇವಲ 15 ನಿಮಿಷಗಳ ಕಾಲಾವಕಾಶದಲ್ಲಿ ವೀಕ್ಷಕರಿಂದ 2 ಲಕ್ಷಕ್ಕೂ ಅಧಿಕ ವೋಟ್ಸ್ ಪಡೆದಿದ್ದರು.

ಇನ್ನು ಈ ವರದಿಯಲ್ಲಿ ಚೈತ್ರಾ ಕುಂದಾಪುರ ಹುಟ್ಟೂರು, ಅವರ ವಯಸ್ಸು, ಶಿಕ್ಷಣ, ವೇದಿಕೆ ಹತ್ತಿ ಒಂದು ಸಲ ಭಾಷಣ ಮಾಡಿದ್ರೆ ಪಡೆಯುವ ಸಂಭಾವನೆ ಹಾಗೂ ಬಿಗ್‌ಬಾಸ್‌ನಲ್ಲಿ ಅವರಿಗೆ ಸಿಗುವ ಸಂಭಾವನೆ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಲಿದ್ದೇವೆ.

 

ರಾಜಾ-ರಾಣಿ ಗ್ರ್ಯಾಂಡ್ ಫಿನಾಲೆಯಲ್ಲಿ ಚೈತ್ರಾ ಕುಂದಾಪುರ ಬಿಗ್‌ ಬಾಸ್‌ಗೆ ಬರುವ ಬಗ್ಗೆ ಮಾಹಿತಿ ಸಿಕ್ಕಿತ್ತು.

 

ಇನ್ನು ಚೈತ್ರಾ ಅವರು ಉಡುಪಿ ಜಿಲ್ಲೆಯ ಕುಂದಾಪುರದವರು. ಇಲ್ಲಿನ ತೆಕ್ಕಟ್ಟೆ ಎಂಬಲ್ಲಿ ಶಾಲಾ ಹಾಗೂ ಪಿಯುಸಿ ಶಿಕ್ಷಣವನ್ನು ಮುಗಿಸಿದ ಅವರು , ನಂತರ ಕೊಣಾಜೆಯಲ್ಲಿ ಪದವಿ ಪೂರ್ಣಗೊಳಿಸಿದರು. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

 

ಶಿಕ್ಷಣ ಪೂರ್ತಿಗೊಳಿಸಿದ ಬಳಿಕ ಸುದ್ದಿ ವಾಹಿನಿಯೊಂದರಲ್ಲಿ ಕೆಲಸಕ್ಕೆ ಸೇರಿದರು. ಆನಂತರ ಉಡುಪಿಯ ಸ್ಪಂದನಾ ಟಿವಿ ಹಾಗೂ ಮುಕ್ತ ನ್ಯೂಸ್,  ಉದಯವಾಣಿ ಪತ್ರಿಕೆಯಲ್ಲೂ ಕೆಲಕಾಲ ಉಪಸಂಪಾದಕಿಯಾಗಿ ಕೆಲಸ ಮಾಡಿದ್ದರು. ಇದಷ್ಟೇ ಅಲ್ಲದೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನಲ್ಲಿ ನ್ಯಾಷನಲ್ ಎಕ್ಸಿಕ್ಯೂಟಿವ್ ಕಮಿಟಿ ಮೆಂಬರ್ ಹಾಗೂ ಸೆಂಟ್ರಲ್ ವರ್ಕಿಂಗ್ ಕಮಿಟಿ ಮೆಂಬರ್ ಕೂಡ ಆಗಿದ್ದರು ಚೈತ್ರಾ.

 

ಒಂದಷ್ಟು ಕಾಲ ಉಡುಪಿಯ ಅಜ್ಜರಕಾಡಿನಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿಯೂ ಕೆಲಸ ಮಾಡಿದ್ದಾರೆ. ಪತ್ರಕರ್ತೆಯಾಗಿ, ನಿರೂಪಕಿಯಾಗಿ, ಭಾಷಣಕಾರರಾಗಿ ಗಮನ ಸೆಳೆದಿರುವ ಚೈತ್ರಾ ಹೆಚ್ಚು ಸುದ್ದಿಯಾಗಿದ್ದು ತಮ್ಮ ಆಕರ್ಷಣೀಯ ಭಾಷಣದಿಂದ.

 

ಹಿಂದುತ್ವದ ವಿಚಾರಧಾರೆಗಳನ್ನು ತನ್ನದೇ ವಿಶೇಷ ಶೈಲಿಯ ಭಾಷಣದಿಂದ ಜನರಿಗೆ ತಲುಪುವ ಹಾಗೆ ಮಾಡುತ್ತಿದ್ದ ಚೈತ್ರಾ ಕುಂದಾಪುರ ಒಂದು ರುಪಾಯಿಯೂ ಸಂಭಾವನೆ ಪಡೆಯುವುದಿಲ್ಲವಂತೆ. ತನ್ನಲ್ಲಿರುವ ವಿಚಾರಗಳನ್ನು ಹಿಂದೂ ಬಾಂಧವರಿಗೆ ತಲುಪಿಸಬೇಕು ಎನ್ನುವುದಷ್ಟೇ ಇವರ ಉದ್ದೇಶವಾಗಿದೆ.

 

ಇದಷ್ಟೇ ಅಲ್ಲದೆ, ಚೈತ್ರಾ ಕುಂದಾಪುರ ಅವರಿಗೆ ಸಾಕಷ್ಟು ಅಭಿಮಾನಿ ಬಳಗವಿದೆ. ಸದ್ಯ ಬಿಗ್‌ ಬಾಸ್‌ನಲ್ಲಿ ಪ್ರಬಲ ಸ್ಪರ್ಧಿಯಾಗಿರುವ ಚೈತ್ರಾಗೆ ವಾರಕ್ಕೆ 1 ಲಕ್ಷದವರೆಗೆ ಸಂಭಾವನೆ ನೀಡಲಾಗುತ್ತದೆ ಎಂದು ಹೇಳಲಾಗಿದೆ. ಅಂದಹಾಗೆ ಚೈತ್ರಾ ಅವರಿಗೆ ಈಗ 28 ವರ್ಷ ವಯಸ್ಸು ಎನ್ನಲಾಗಿದೆ.

 

ZEENEWS TRENDING STORIES

By continuing to use the site, you agree to the use of cookies. You can find out more by Tapping this link