Biggboss 11 :ಈ ಸ್ಪರ್ಧಿ ನಾಮಿನೇಟ್ ಮಾತ್ರ ಆಗೋದು,ಎಲಿಮಿನೆಟ್ ಚಾನ್ಸೇ ಇಲ್ಲ! ಮೊದಲ ವಾರದಲ್ಲೇ ಈ ಕಂಟೆಸ್ಟೆಂಟ್ ಗೆ ಸಿಕ್ಕಾಪಟ್ಟೆ ಸಪೋರ್ಟ್
ಬಿಗ್ ಬಾಸ್ ಆರಂಭವಾಗುತ್ತಿದ್ದ ಹಾಗೆ ಜಗಳ ಕದನ ಕೂಡಾ ಜೋರಾಗಿಯೇ ನಡೆಯುತ್ತಿದೆ. ಮೊದಲ ವಾರದಲ್ಲಿಯೇ ರೂಲ್ಸ್ ಬ್ರೇಕ್ ಆಗುವ ಮೂಲಕ ಆಟದ ಬಿಸಿ ಏರಿದೆ.
ಈ ಬಾರಿಯ ಸ್ಪರ್ಧಿಗಳು ಕೂಡಾ ಸೇರಿಗೆ ಸವ್ವಾ ಸೇರು ಎನ್ನುವ ಹಾಗೆಯೇ ಇದ್ದಾರೆ. ಇಲ್ಲಿ ರಾಜಿ ಮಾಡಿಕೊಂಡು, ಅನುಸರಿಸಿಕೊಂಡು ಹೋಗೋಣ ಎನ್ನುವ ಮನೋಭಾವ ಇರುವ ಸ್ಪರ್ಧಿಗಳು ತೀರಾ ಕಡಿಮೆ.
ಮೊದಲ ವಾರದ ನಾಮಿನೆಶನ್ ಪ್ರಕ್ರಿಯೆ ಈಗಾಗಲೇ ಮುಗಿದಿದೆ.ಎಲಿಮಿನೆಟ್ ಅದವರ ಪೈಕಿ ಒಬ್ಬರು ದೊಡ್ಮನೆ, ದೊಡ್ಮನೆ ಸ್ಪರ್ಧಿಗಳನ್ನು ಅರ್ಥ ಮಾಡಿಕೊಳ್ಳುವ ಮೊದಲೇ ಹೊರಗೆ ಬರಬೇಕಾಗುತ್ತದೆ.
ಇನ್ನು ಮೊದಲ ವಾರದಲ್ಲಿಯೇ ಫೈರ್ ಬ್ರಾಂಡ್ ಖ್ಯಾತಿಯ ಚೈತ್ರಾ ಕುಂದಾಪುರ ನಾಮಿನೇಟ್ ಆಗಿದ್ದರೆ. ಮನೆಯಲ್ಲಿ ಮೊದಲು ರೂಲ್ಸ್ ಬ್ರೇಕ್ ಮಾಡಿ ಸ್ಪರ್ಧಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸ್ಪರ್ಧಿಗಳೊಂದಿಗೆ ಸ್ಟ್ರಾಂಗ್ ಫೈಟ್ ಗೆ ಇಳಿದಾಗಿದೆ.
ಈಗಾಗಲೇ ಮನೆಯ ಇತರ ಹಾಗಾಗಿ ಮನೆಯಲ್ಲಿ ಚೈತ್ರಾ ಹವಾ ಜೋರಾಗಿದೆ. ಬಿಗ್ ಬಾಸ್ ಮನೆಯಲ್ಲಿ ಮಾತ್ರವಲ್ಲ ಹೊರಗೆ ಕೂಡಾ ಚೈತ್ರಾಗೆ ಬೆಂಬಲ ಸಿಗುತ್ತಿದೆ. ಚೈತ್ರಾ ಪ್ರತೀ ವಾರ ನಾಮಿನೇಟ್ ಆದರೂ ಸಂಶವಿಲ್ಲ.ಆದರೆ ಎಲಿಮಿನೇಟ್ ಮಾತ್ರ ಚಾನ್ಸೇ ಇಲ್ಲ ಎನ್ನುತ್ತಾರೆ ನೆಟ್ಟಿಗರು.
ಚೈತ್ರಾ ತಾನು ತಪ್ಪು ಮಾಡಿರಲಿ, ಸರಿ ಇರಲಿ ವಾದಕ್ಕೆ ಇಳಿದರೆ ರಚ್ಚೆ ಹಿಡಿದು ಕೂರುತ್ತಾರೆ. ಹಾಗಾಗಿ ಅವರ ಸದ್ದು ಮನೆಯಲ್ಲಿಯೇ ಜೋರಾಗಿದೆ. ಹೀಗಾಗಿ ಇಂಥಹ ಸೌಂಡ್ ಸ್ಪರ್ಧಿ ಆಟದಿಂದ ಔಟ್ ಆಗುವುದು ಸಾಧ್ಯವಿಲ್ಲ ಎನ್ನುವ ಮಾತು ಹರಿದಾಡುತ್ತಿದೆ.