CHAITRA NAVRATRI 2022: 51 ಶಕ್ತಿಪೀಠಗಳಲ್ಲಿ ವಿಶೇಷವಾಗಿವೆ ದೇವಿ ದುರ್ಗೆಯ ಈ 5 ದೇಗುಲಗಳು, ದರ್ಶನ ಮಾತ್ರದಿಂದ ಕಷ್ಟಗಳ ಪರಿಹಾರ
1. ದಕ್ಷಿಣೇಶ್ವರ್ ಕಾಳಿ ದೇವಸ್ಥಾನ - ದಕ್ಷಿಣೇಶ್ವರ್ ಕಾಳಿ ದೇವಸ್ಥಾನ ಪಶ್ಚಿಮ ಬಂಗಾಳದ ಹೋಗ್ಲಿ ನದಿಯ ದಡದಲ್ಲಿದೆ. ಈ ದೇವಸ್ಥಾನದಲ್ಲಿ ಕಾಳಿಕಾ ಮಾತೆಯ ಭವ್ಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ನವರಾತ್ರಿಯ ಸಂದರ್ಭದಲ್ಲಿ ಇಲ್ಲಿ ದೇವಿಯ ದರ್ಶನಕ್ಕಾಗಿ ಸಾಗರೋಪಾದಿಯಲ್ಲಿ ಭಕ್ತರು ಆಗಮಿಸುತ್ತಾರ.
2. ಜ್ವಾಲಾ ದೇವಿಯ ದೇವಸ್ಥಾನ, ಕಾಂಗಡಾ - ಜ್ವಾಲಾ ದೇವಿಯ ದೇವಸ್ಥಾನವು ಹಿಮಾಚಲ ಪ್ರದೇಶದ ಕಂಗ್ರಾ ಜಿಲ್ಲೆಯಲ್ಲಿದೆ. ಈ ದೇವಾಲಯದಲ್ಲಿ ಯಾವಾಗಲೂ ಬೆಂಕಿಯ ಜ್ವಾಲೆಗಳು ಹೊರಬರುತ್ತವೆ. ಅದಕ್ಕಾಗಿಯೇ ಇದನ್ನು ಜ್ವಾಲಾ ಮಾತಾ ದೇವಾಲಯ ಎಂದು ಕರೆಯಲಾಗುತ್ತದೆ. ಇದು 51 ಶಕ್ತಿಪೀಠಗಳಲ್ಲಿ ಒಂದಾಗಿದೆ.
3. ಕಾಮಾಖ್ಯಾ ದೇವಿ ದೇವಸ್ಥಾನ - ಕಾಮಾಖ್ಯ ದೇವಾಲಯವು ಗುವಾಹಟಿ (ಅಸ್ಸಾಂ) ನಗರದ ನೀಲಾಂಚಲ್ ಬೆಟ್ಟಗಳ ಮೇಲೆ ನೆಲೆಗೊಂಡಿದೆ. ಈ ದೇವಾಲಯವು ಕೂಡ 51 ಶಕ್ತಿಪೀಠಗಳಲ್ಲಿ ಒಂದಾಗಿದೆ. ಈ ದೇವಾಲಯದಲ್ಲಿ ಕಾಮಾಖ್ಯ ದೇವಿಯ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ. ಇದೊಂದು ಸಿದ್ಧ ಶಕ್ತಿಪೀಠ
4. ಕರಣಿ ಮಾತಾ ಮಂದಿರ - ಕರ್ಣಿ ಮಾತೆಯ ದೇವಸ್ಥಾನವು ರಾಜಸ್ಥಾನದ ದೇಶ್ನೋಕ್ ಎಂಬ ಸ್ಥಳದಲ್ಲಿದೆ. ದೇವಿಯ ಈ ದೇವಾಲಯವನ್ನು ಇಲಿಗಳ ದೇವಾಲಯ ಎಂದೂ ಕರೆಯುತ್ತಾರೆ. ವಾಸ್ತವದಲ್ಲಿ. ಈ ದೇವಾಲಯದಲ್ಲಿ ಸಾವಿರಾರು ಇಲಿಗಳು ಸೇರುತ್ತವೆ. ಕರ್ಣಿ ಮಾತೆಯನ್ನು ದೇವಿ ದುರ್ಗೆಯ ರೂಪವೆಂದೆ ಪರಿಗಣಿಸಲಾಗುತ್ತದೆ.
5. ನೈನಾ ದೇವಿ - ನೈನಾ ದೇವಿ ದೇವಸ್ಥಾನವು ಹಿಮಾಚಲ ಪ್ರದೇಶದ ಬಿಲಾಸ್‌ಪುರದಲ್ಲಿದೆ. ಇದು 51 ಶಕ್ತಿಪೀಠಗಳಲ್ಲಿ ಒಂದಾಗಿದೆ. ಈ ದೇವಾಲಯದಲ್ಲಿ ನೈನಾ ದೇವಿಯ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ. ಸತಿ ದೇವಿಯ ಕಣ್ಣು ಈ ಸ್ಥಳದಲ್ಲಿ ಬಿದ್ದಿದೆ ಎಂಬುದು ಐತಿಹ್ಯ.