ದರ್ಶನ್ ಅವರನ್ನು ಮನೆಯಲ್ಲಿ ಪ್ರೀತಿಯಿಂದ ಏನಂತ ಕರೀತಾರೆ ಗೊತ್ತಾ?
ಟಗರು ಪಲ್ಯ ಸಿನಿಮಾದ ಕಾರ್ಯಕ್ರಮದಲ್ಲಿ ದರ್ಶನ್ ಅವರ ಈ ಹೆಸರು ಬಹಿರಂಗಗೊಂಡಿದೆ. ಕಾರ್ಯಕ್ರಮಕ್ಕೆ ಆಗಮಿಸಿದ್ದ ನಟಿ ತಾರಾ ಈ ವಿಷಯ ಹಂಚಿಕೊಂಡಿದ್ದಾರೆ.
ಟಗರು ಪಲ್ಯ ಸಿನಿಮಾದ ಬಗ್ಗೆ ಮಾತನಾಡುತ್ತಿದ್ದ ನಟಿ ತಾರಾ ದರ್ಶನ್ ಅವರನ್ನು ಅವರ ತಾಯಿ ಕರೆಯುವಂತೆಯೇ ಕರೆದರು.
ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದ ದರ್ಶನ್ ಅವರನ್ನು ತಾರಾ ಅವರು ಅಪ್ಪು ಎಂದು ಕರೆದರು.
ನಂತರ ದರ್ಶನ್ ಅವರನ್ನು ಅವರ ಮನೆಯಲ್ಲಿ ಅವರ ತಾಯಿ, ಸಹೋದರಿ ಎಲ್ಲರೂ ಅಪ್ಪು ಎಂದೇ ಕರೆಯುವುದು ಎಂದು ತಾರಾ ಹೇಳಿದರು.
ಹಾಗಾಗಿ ನನಗೂ ದರ್ಶನ್ ಅನ್ನು ಅಪ್ಪು ಅಂತ ಕರೆದೇ ಅಭ್ಯಾಸ ಎಂದು ತಾರಾ ಹೇಳಿದರು.
ದರ್ಶನ್ ಅವರು ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಿ, ಚಿತ್ರತಂಡದ ಎಲ್ಲರಿಗೂ ಶುಭ ಹಾರೈಸಿದರು.