ಸುದೀಪ್ ಜಾಗಕ್ಕೆ ದರ್ಶನ್- ಬಿಗ್ ಬಾಸ್ ನಿರೂಪಣೆಗೆ ಡಿ ಬಾಸ್: ಇದು ನಿಜಾನಾ?
ನಟ ಸುದೀಪ್ ಮುಂದಿನ ಸೀಸನ್ ನಿರೂಪಣೆ ಮಾಡುವುದಿಲ್ಲ ಎಂದು ತಾವೇ ಘೋಷಿಸಿದ್ದಾರೆ. ಇದರ ಬೆನ್ನಲ್ಲೇ ಬಿಗ್ ಬಾಸ್ ಹೋಸ್ಟ್ ಮಾಡುವವರಲ್ಲಿ ಶಿವರಾಜಕುಮಾರ್, ರಮೇಶ್ ಅರವಿಂದ್, ರಿಷಬ್ ಶೆಟ್ಟಿ ಮತ್ತಿತರ ಹೆಸರುಗಳು ಕೇಳಿಬಂದಿದ್ದವು.
ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೆಸರು ಮುನ್ನೆಲೆಗೆ ಬಂದಿದೆ. ಬಿಗ್ ಬಾಸ್ ಜನಪ್ರಿಯಗೊಳ್ಳಲು ಕಿಚ್ಚ ಸುದೀಪ್ ಅವರಂತೆ ದರ್ಶನ್ ಕೂಡ ವಿಶಿಷ್ಟ ಮ್ಯಾನರಿಸಂ ಮಾಡಬಲ್ಲರು ಎನ್ನುವ ಕಾರಣಕ್ಕೆ ಡಿ ಬಾಸ್ ಹೆಸರು ಪರಿಶೀಲನೆಯಲ್ಲಿದೆ ಎಂದು ಹೇಳಲಾಗುತ್ತಿದೆ.
ಕಲರ್ಸ್ ಕನ್ನಡ ತನ್ನ ಜನಪ್ರಿಯ ಕಾರ್ಯಕ್ರಮ ಬಿಗ್ ಬಾಸ್ ಸೀಸನ್ 12ರ ನಿರೂಪಣೆಗೆ ಸುದೀಪ್ ಜಾಗದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ತರಲು ಪ್ರಯತ್ನಿಸುತ್ತಿರುವುದು ಏಕೆ ಎನ್ನುವುದು ಸದ್ಯದ ಕುತೂಹಲ.
ಬಿಗ್ ಬಾಸ್ ಸೀಸನ್ 11 ಟಿಆರ್‌ಪಿ ಗಳಿಕೆಯಲ್ಲಿ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದೆ. ಇದೇ ರೀತಿ ಬಿಗ್ ಬಾಸ್ ಸೀಸನ್ 12 ಕೂಡ ಕಮಾಲ್ ಮಾಡಲು ಮಾಸ್ ಹೀರೋನೇ ಬೇಕು ಅಂತಾ ದರ್ಶನ್ ಅವರ ಹೆಸರನ್ನು ಪರಿಗಣಿಸುತ್ತಿರಬಹುದು ಎಂದು ಹೇಳಲಾಗುತ್ತಿದೆ.
ಸದ್ಯ ದರ್ಶನ್ ಜೈಲಿನಲ್ಲಿ ಇದ್ದರೂ ಅವರ ಬಗ್ಗೆ ಜನರಲ್ಲಿ ಇರುವ ಕ್ರೇಜ್ ಕಡಿಮೆಯಾಗಿಲ್ಲ. ದರ್ಶನ್ ಅವರಿಗೆ ಶೀಘ್ರವೇ ಜಾಮೀನು ಸಿಕ್ಕಿ ಹೊರಬರುತ್ತಾರೆ. ನಂತರ ಅವರ ಮೇಲಿನ ಕ್ರೇಜ್ ಮತ್ತಷ್ಟು ಜಾಸ್ತಿಯಾಗುವ ಸಂಭವ ಇದೆ. ಅವರ ಫ್ಯಾನ್ಸ್ ಫಾಲೊಹಿಂಗ್ ಅನ್ನು ಎನ್ ಕ್ಯಾಷ್ ಮಾಡಿಕೊಳ್ಳಲು ಕಲರ್ಸ್ ಕನ್ನಡ ಯೋಚಿಸುತ್ತಿದೆ ಎಂದು ಹೇಳಲಾಗುತ್ತಿದೆ.
ಬಿಗ್ ಬಾಸ್ ಕಾರ್ಯಕ್ರಮ ಜನಪ್ರಿಯಗೊಳ್ಳಲು ಕಿಚ್ಚ ಸುದೀಪ್ ಅವರ ಮ್ಯಾನರಿಸಂ ಕೂಡ ಕಾರಣ. ಈಗ ಈ ಷೋವನ್ನು ಮುಂದುವರಿಸಲು ವಿಶಿಷ್ಟ ಮ್ಯಾನರಿಸಂ ಮಾಡಬಲ್ಲ ಸೆಲಬ್ರಿಟಿಯೊಬ್ಬರ ಅಗತ್ಯ ಇದೆ. ಅದು ದರ್ಶನ್ ಅವರಿಂದ ಸಾಧ್ಯ ಎನ್ನುವ ಕಾರಣಕ್ಕೆ ಡಿ ಬಾಸ್ ಹೆಗಲಿಗೆ ಬಿಗ್ ಬಾಸ್ ನಿರೂಪಣೆ ಹೋಗಲಿದೆ ಎಂದು ಹೇಳಲಾಗುತ್ತಿದೆ.
ಸದ್ಯ ದರ್ಶನ್ ಬಿಗ್ ಬಾಸ್ ಸೀಸನ್ 12ರ ನಿರೂಪಣೆ ಮಾಡುವ ವಿಚಾರ ಅಲ್ಲಲ್ಲಿ ವದಂತಿ ಎನ್ನುವ ರೀತಿಯಲ್ಲಿ ಕೇಳಿ ಬರುತ್ತಿದೆ.
ಆದರೆ ಇದರ ಬಗ್ಗೆ ದರ್ಶನ್ ಅವರ ಕಡೆಯಿಂದಾಗಲಿ ಕಲರ್ಸ್ ಕನ್ನಡ ಕಡೆಯಿಂದಾಗಲಿ ಯಾವುದೇ ರೀತಿಯ ಅಧಿಕೃತವಾದ ಹೇಳಿಕೆಗಳು ಬಂದಿಲ್ಲ.