ನಟ ದರ್ಶನ್‌ ಅಕ್ಕ ಇವರೇ ನೋಡಿ.. ತಮ್ಮನ ಹೆಸರೇ ಹೇಳದೆ ಸ್ವಂತ ಶ್ರಮದಿಂದ ಬದುಕುತ್ತಿರುವ ಈ ಸ್ವಾಭಿಮಾನಿ ಇರೋದೆಲ್ಲಿ ಗೊತ್ತಾ?

Tue, 15 Oct 2024-6:46 pm,

Darshan real sister: ದರ್ಶನ್ ಸ್ಯಾಂಡಲ್‌ವುಡ್‌ನ ಚಾಲೆಂಜಿಂಗ್‌ ಸ್ಟಾರ್.​ ಕನ್ನಡ ಚಿತ್ರರಂಗದ‌ ಪ್ರತಿಭಾನ್ವಿತ ಸ್ಟಾರ್​ ನಟ. ಚಿತ್ರದುರ್ಗದ ಮೂಲದ ರೇಣುಕಾಸ್ವಾಮಿ ಕೊಲೆ ಆರೋಪದ ಮೇಲೆ ಬಳ್ಳಾರಿ ಜೈಲಿನಲ್ಲಿದ್ದಾರೆ.

ದರ್ಶನ್‌ ತಂದೆ ತೂಗುದೀಪ ಶ್ರೀನಿವಾಸ್‌. ಇವರು ಸಹ ಕನ್ನಡದ ಖ್ಯಾತ ನಟ. ಖಳ ನಾಯಕನ ಪಾತ್ರದ ಮೂಲಕವೇ ತೂಗುದೀಪ ಶ್ರೀನಿವಾಸ್‌ ಫೇಮಸ್‌ ಆದವರು. ಇವರಿಗೆ ಒಂದು ಹೆಣ್ಣು ಮತ್ತು ಇಬ್ಬರು ಗಂಡು ಮಕ್ಕಳು. ದಿವ್ಯಾ, ದಿನಕರ್‌ ಮತ್ತು ದರ್ಶನ್.‌

ನಟ ದರ್ಶನ್‌ ನಿಜವಾದ ಸಹೋದರಿ ದಿವ್ಯಾ ತೂಗುದೀಪ. ಆದರೆ ದರ್ಶನ್ ಅವರ ಮತ್ತೊಬ್ಬ ಸಹೋದರಿಯ ವಿಡಿಯೋ ಕೆಲ ದಿನಗಳ ಹಿಂದೆ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು

ಸ್ವಂತ ತಮ್ಮ ಸ್ಟಾರ್‌ ಹೀರೋ ಆಗಿದ್ದಾಗ ಸಹೀದರಿಯ ಬಾಳು ಐಷಾರಾಮಿ ಅಗಿಯೇ ಇರುತ್ತದೆ ಎಂಬುದು ಅನೇಕರ ಪರಿಕಲ್ಪನೆ. ಎಲ್ಲಿಯೂ ಸೋದರನ ಹೆಸರನ್ನೇ ಹೇಳದೆ ಸ್ವಾಭಿಮಾನದಿಂದ ಬದುಕುತ್ತಿರುವ ದರ್ಶನ್ ಅವರ ಅಕ್ಕ ಇವರು. 

ದರ್ಶನ್‌ ಅವರ ಈ ಸಹೋದರಿಯ ಹೆಸರು ಸರಳ. ಕಳೆದ 7 ವರ್ಷದಿಂದ ಮನೆಯಲ್ಲೇ ಅಡುಗೆ ತಯಾರಿಸಿ ಜೀವನ ನಡೆಸುತ್ತಿದ್ದಾರೆ. ನಿಮಗೆ ಬೇಕಾದ ಅಡುಗೆಯ ಪಟ್ಟಿಯನ್ನು ಮುಂಚಿತವಾಗಿ ಹೇಳಿದರೆ ಸಾಕು ರುಚಿಯಾಗಿ ಮಾಡಿ ಕೊಡುತ್ತಾರೆ.

ಸರಳ ಅವರು ದರ್ಶನ್ ದೊಡ್ಡಪ್ಪನ ಮಗಳು. ಮೈಸೂರಿನ ಯಾದವಗಿರಿಯಲ್ಲಿ ವಾಸಿಸುತ್ತಾರೆ. ನಮ್ಮ ವಂಶ ಸ್ವಾಭಿಮಾನವಾಗಿ ಬದುಕಬೇಕು ಎಂಬುದೇ ದರ್ಶನ್​ ಆಸೆ ಎಂದು ಸರಳ ಹೇಳುತ್ತಾರೆ. 

ದೊಡ್ಡಪ್ಪನ ಮಕ್ಕಳು ಅಂತ ದರ್ಶನ್‌ ಎಂದಿಗೂ ಭೇದ-ಭಾವ ಮಾಡಿಲ್ಲ. ಸ್ವಂತ ಅಕ್ಕ-ತಂಗಿಯರ ರೀತಿ ನೋಡಿಕೊಳ್ಳುತ್ತಾನೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link