Chanakya Niti: ಈ ಸ್ಥಳಗಳಲ್ಲಿ ಹಣ ಖರ್ಚು ಮಾಡಲು ಹಿಂಜರಿಯಬೇಡಿ, ಘನತೆ-ಗೌರವದ ಜೊತೆಗೆ ಧನ ಕೂಡ ಹೆಚ್ಚಾಗುತ್ತದೆ
1. ಯಾವುದೇ ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಯ ಸಹಾಯ ಮಾಡುವಲ್ಲಿ ಹಿಂಜರಿಯಬಾರದು. ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಗೆ ಸಹಾಯ ಮಾಡುವುದರಿಂದ ಸಾಕಷ್ಟು ಪುಣ್ಯ ಪ್ರಾಪ್ತಿಯಾಗುತ್ತದೆ. ಇಂತಹ ವ್ಯಕ್ತಿಗೆ ಅನಾರೋಗ್ಯದಿಂದ ಬಳಲುವ ವ್ಯಕ್ತಿಯ ಆಶೀರ್ವಾದ ಲಭಿಸುತ್ತದೆ ಹಾಗೂ ದೇವರು ಕೂಡ ಆತನ ಮೇಲೆ ಪ್ರಸನ್ನನಾಗುತ್ತಾನೆ ಎನ್ನಲಾಗುತ್ತದೆ.
2. ಬಡ ಜನರಿಗಾಗಿ ಅನ್ನ-ನೀರಿನ ವ್ಯವಸ್ಥೆ ಮಾಡುವಲ್ಲಿ ಎಂದಿಗೂ ಕೂಡ ಹಿಂಜರಿಯಬಾರದು ಎನ್ನಲಾಗಿದೆ. ಬಡ ಜನರಿಗೆ ಅನ್ನ-ನೀರು ನೀಡುವುದು ಪುಣ್ಯದ ಕೆಲಸವಾಗಿದೆ. ಯಾವಾಗಲು ಇಂತಹ ಕೆಲಸಗಳಲ್ಲಿ ಕೈ ಬಿಚ್ಚಿ ದಾನ ಮಾಡಬೇಕು ಎನ್ನಲಾಗುತ್ತದೆ.
3. ಬಡವರ ಮಕ್ಕಳ ಶಿಕ್ಷಣಕ್ಕೆ ಯಾವಾಗಲು ಎರಡು ಕೈಗಳಿಂದ ದಾನ ಮಾಡಬೇಕು. ಇದರಿಂದ ದೇಶಕ್ಕೆ ಓರ್ವ ವಿದ್ಯಾವಂತ ನಾಗರಿಕ ಸಿಗುತ್ತಾನೆ ಹಾಗೂ ಆ ಮಗುವಿನ ಜೀವನ ಮಟ್ಟ ಕೂಡ ಸುಧಾರಿಸುತ್ತದೆ. ವಿದ್ಯಾ ದಾನಕ್ಕೆ ಧರ್ಮಶಾಸ್ತ್ರಗಳಲ್ಲಿಯೂ ಕೂಡ ತುಂಬಾ ಪ್ರಾಮುಖ್ಯತೆಯನ್ನು ನೀಡಲಾಗಿದೆ.
4. ಸಾಮಾಜಿಕ ಕೆಲಸ ಕಾರ್ಯಗಳಲ್ಲಿಯೂ ಕೂಡ ಕೈಬಿಚ್ಚಿ ಹಣ ಖರ್ಚು ಮಾಡಬೇಕು. ಶಾಲೆ-ಆಸ್ಪತ್ರೆಗಳ ನಿರ್ಮಾಣವೇ ಆಗಲಿ ಅಥವಾ ಇತರ ಯಾವುದಾದರೊಂದು ಒಳ್ಳೆಯ ಕೆಲಸವೇ ಆಗಲಿ. ಇದರಲ್ಲಿ ಸಮಾಜದ ಜನರ ಒಳಿತು ಅಡಗಿರುತ್ತದೆ ಮತ್ತು ಸಮಾಜದ ಜನರ ದೃಷ್ಟಿಯಲ್ಲಿ ನಿಮ್ಮ ಘನತೆ ಗೌರವ ಹೆಚ್ಚಾಗುತ್ತದೆ.
5. ಧಾರ್ಮಿಕ ಕೆಲಸ ಕಾರ್ಯಗಳಲ್ಲಿಯೂ ಕೂಡ ಮನಬಿಚ್ಚಿ ಖರ್ಚು ಮಾಡಬೇಕು. ದೇವಸ್ಥಾನದ ನಿರ್ಮಾಣವೇ ಆಗಲಿ ಅಥವಾ ಯಾವುದಾದರೊಂದು ಯಜ್ಞದ ಅನುಷ್ಠಾನವೆ ಆಗಲಿ, ನಿಮ್ಮ ನಗರಕ್ಕೆ ಆಗಮಿಸಿದ ಸಂತರ ಸೇವೆಗಾಗಿ ಹಣ ವೆಚ್ಚ ಮಾಡಲು ಎಂದಿಗೂ ಕೂಡ ಹಿಂಜರಿಯಬೇಡಿ. ಇದರಿಂದ ತುಂಬಾ ಪುಣ್ಯ ಪ್ರಾಪ್ತಿಯಾಗುತ್ತದೆ.