ಇಂತಹ ಮಹಿಳೆಯರನ್ನು ಎಂದಿಗೂ ಮದುವೆಯಾಗಬಾರದು; ಮದುವೆಯಾದ್ರೆ ನಿಮ್ಮ ಜೀವನವೇ ನರಕವಾಗುತ್ತಂತೆ!!
ಬಹುತೇಕ ಪುರುಷರು ಸುಂದರ ಯುವತಿಯರನ್ನು ಪ್ರೀತಿಸಿ ಮದುವೆಯಾಗಲು ಬಯಸುತ್ತಾರೆ. ಆದರೆ ಚಾಣಕ್ಯನ ಪ್ರಕಾರ, ಕೇವಲ ಸೌಂದರ್ಯ ಸಾಕಾಗುವುದಿಲ್ಲ. ಉತ್ತಮ ಬುದ್ಧಿವಂತಿಕೆ & ಕೌಶಲ್ಯವನ್ನೂ ಹೊಂದಿರಬೇಕು. ಸೌಂದರ್ಯ ಎಂಬುದು ತಾತ್ಕಾಲಿಕ. ಜೀವನದಲ್ಲಿ ಬುದ್ಧಿವಂತಿಕೆ & ಕೌಶಲ್ಯಗಳು ತುಂಬಾ ಅಗತ್ಯವೆಂದು ಸಲಹೆ ನೀಡಿದ್ದಾರೆ.
ಚಾಣಕ್ಯನ ಪ್ರಕಾರ, ಸುಳ್ಳು ಹೇಳುವ ಮಹಿಳೆಯರನ್ನೂ ಎಂದಿಗೂ ಮದುವೆಯಾಗಬಾರದಂತೆ. ಇಂತಹವರು ಪತಿ & ಆತನ ಕುಟುಂಬದ ಸದಸ್ಯರಿಗೆ ಮೋಸ ಮಾಡುವ ಸಾಧ್ಯತೆಗಳು ಹೆಚ್ಚಿರುತ್ತದೆ. ಸುಳ್ಳು ಹೇಳಿದರೆ ಕುಟುಂಬದಲ್ಲಿ ಕಲಹ ಉಂಟಾಗುತ್ತದೆ. ಗಂಡ-ಹೆಂಡತಿಯ ನಡುವೆ ನಂಬಿಕೆಯ ಕೊರತೆ ಉಂಟಾಗುತ್ತದೆ. ಹೀಗಾಗಿ ಸುಳ್ಳು ಹೇಳುವವರನ್ನು ಯಾವುದೇ ಕಾರಣಕ್ಕೂ ಮದುವೆಯಾಗಬಾರದಂತೆ.
ಕೆಟ್ಟ ಸ್ವಭಾವ ಹೊಂದಿರುವ ಮಹಿಳೆಯೊಂದಿಗೆ ಏಳು ಹೆಜ್ಜೆ ಹಾಕಿದರೆ ನೀವು ಪ್ರತಿ ಹಂತದಲ್ಲೂ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಸದಾ ಸಿಟ್ಟು ಹಾಗೂ ಅಸೂಯೆ ತುಂಬಿರುವ ಹೆಂಗಸರು ಗಂಡನ ಬದುಕನ್ನೇ ನರಕವಾಗಿಸುತ್ತಾರೆ. ಹೀಗಾಗಿ ಇಂತಹವರಿಂದ ಆದಷ್ಟು ದೂರವಿರುವುದು ಉತ್ತಮ.
ಕೆಟ್ಟ ಕೌಟುಂಬಿಕ ಹಿನ್ನೆಲೆಯುಳ್ಳ ಮಹಿಳೆಯನ್ನು ಯಾವುದೇ ಕಾರಣಕ್ಕೂ ಮದುವೆಯಾಗಬಾರದು. ಇಂತವರು ತಮ್ಮ ಕುಟುಂಬದ ಸದಸ್ಯರಿಂದ ಕೆಟ್ಟ ಗುಣಗಳನ್ನು ಅಳವಡಿಸಿಕೊಳ್ಳಬಹುದು. ಇದರಿಂದ ಪುರುಷರು ತುಂಬಾ ತೊಂದರೆ ಅನುಭವಿಸಬೇಕಾಗುತ್ತದೆ.
ಯಾವುದೇ ಒಂದು ಕುಟುಂಬವನ್ನು ನೋಡಿಕೊಳ್ಳಲು ಸಾಧ್ಯವಾಗದ ಮಹಿಳೆಯರನ್ನು ಮದುವೆಯಾಗಬಾರದು ಅಂತಾ ಚಾಣಕ್ಯರು ಹೇಳುತ್ತಾರೆ. ಮಹಿಳೆ ತನ್ನ ಮನೆ ಮತ್ತು ಕುಟುಂಬವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಪತಿಗೆ ಎಲ್ಲಾ ವಿಷಯಗಳಲ್ಲಿ ಸಲಹೆ ಮತ್ತು ಸೂಚನೆಗಳನ್ನು ನೀಡುವ ಮಟ್ಟದಲ್ಲಿರಬೇಕು. ಮನೆಗೆಲಸ ಮಾಡಲಾಗದ ಮಹಿಳೆ ತನ್ನ ಗಂಡನಿಗೆ ಹೊರೆಯಾಗುತ್ತಾಳೆ.
ಚಾಣಕ್ಯನ ಪ್ರಕಾರ, ಒಬ್ಬ ಪುರುಷ ಧಾರ್ಮಿಕ ಅಥವಾ ಧರ್ಮನಿಷ್ಠೆ ಇಲ್ಲದ ಮಹಿಳೆಯನ್ನು ಮದುವೆಯಾಗಬಾರದು. ಅಲ್ಲದೇ ತನ್ನ ಕುಟುಂಬಕ್ಕೆ ವಿಶ್ವಾಸದ್ರೋಹ ಮಾಡುವ ಮಹಿಳೆಯನ್ನು ಯಾವುದೇ ಕಾರಣಕ್ಕೂ ನಂಬಬಾರದು. ಅವಳು ತನ್ನ ಪತಿಗೆ ವಿಶ್ವಾಸದ್ರೋಹಿ ಆಗುತ್ತಾಳೆ.