ಚಾಣಕ್ಯ ನೀತಿ: ಆಸ್ತಿ-ಅಂತಸ್ತಲ್ಲ ಹೆಣ್ಣು ತನ್ನ ಗಂಡನ ಬಳಿ ಬಯಸೋದು ಕೇವಲ ಈ 5 ಗುಣಗಳನ್ನು ಮಾತ್ರ..!
ಚಾಣಕ್ಯ ನೀತಿಯಲ್ಲಿ ನಮ್ಮ ಜೀವನಕ್ಕೆ ಸಂಬಂಧಿಸಿದ ಹಲವು ವಿಷಯಗಳನ್ನು ಉಲ್ಲೇಖಿಸಲಾಗಿದ್.ಎ ಇದರಲ್ಲಿ ಆಚಾರ್ಯ ಚಾಣಕ್ಯರು ಗಂಡ-ಹೆಂಡತಿ ನಡುವಿನ ಸಂಬಂಧ ಚೆನ್ನಾಗಿರಬೇಕು ಎಂದರೆ ಅನುಸರಿಸಬೇಕಾದ ಕೆಲವು ನಿಯಮಗಳ ಬಗ್ಗೆಯೂ ಉಲ್ಲೇಖಿಸಿದ್ದಾರೆ.
ಮದುವೆಯಲ್ಲಿ ಪತಿ ಪತ್ನಿಯರ ನಡುವಿನ ಸಂಬಂಧ ಬಹಳ ಮುಖ್ಯ. ಇದು ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಮಹತ್ವದ ಪರಿಣಾಮವನ್ನು ಉಂಟು ಮಾಡುತ್ತದೆ.
ಹೆಣ್ಣಿನ ಆಸೆ, ಬಯಕೆ ಎಂದರೆ ಸಾಮಾನ್ಯವಾಗಿ ಜನರ ಆಲೋಚನೆ ಬರುವುದೇ ಆಕೆ ವಸ್ತ್ರ, ಒಡವೆಗಳನ್ನು ಇಷ್ಟಪಡುತ್ತಾಳೆ ಎಂದು. ಆದರೆ, ಚಾಣಕ್ಯರ ಪ್ರಕಾರ, ಮದುವೆಯಾದ ಹೆಣ್ಣು ಆಸ್ತಿ-ಅಂತಸ್ತಿಗಿಂತ ಮುಖ್ಯವಾಗಿ ಆಸ್ತಿಗಿಂತಲೂ ಮಿಗಿಲಾದ ಕೆಲವು ಗುಣಗಳನ್ನು ತನ್ನ ಗಂಡನಲ್ಲಿ ಬಯಸುತ್ತಾಳೆ. ಅಂತಹ ಗುಣಗಳೆಂದರೆ...
ಸುಖ ಸಂಸಾರಕ್ಕೆ 'ಪ್ರೀತಿ' ಬಹಳ ಮುಖ್ಯ. ಗಂಡನಾದವನು ಹೆಂಡತಿಯನ್ನು ಎಷ್ಟು ಪ್ರೀತಿಸುತ್ತಾನೋ ಸಂಸಾರ ಅಷ್ಟು ಆನಂದದಾಯಕಾವಾಗಿರುತ್ತದೆ ಚಾಣಕ್ಯ ನೀತಿಯಲ್ಲಿ ತಿಳಿಸಲಾಗಿದೆ.
ಗಂಡನಾದವನು ತನ್ನೊಂದಿಗೆ ಪ್ರಾಮಾಣಿಕವಾಗಿರಬೇಕು. ಎಲ್ಲವನ್ನೂ ಮುಕ್ತವಾಗಿ ಹಂಚಿಕೊಳ್ಳಬೇಕು ಎಂದು ಹೆಣ್ಣು ಬಯಸುತ್ತಾಳೆ. ಗಂಡನಾದವನು ಯಾವುದೇ ವಿಚಾರವನ್ನು ಹೆಂಡತಿಯಿಂದ ಮುಚ್ಚಿಡುತ್ತಿದ್ದರೆ ಅದೇ ಜಗಳಕ್ಕೆ ನಾಂದಿ ಮಾಡಿಕೊಡುತ್ತದೆ ಎಂದು ಚಾಣಕ್ಯರು ತಿಳಿಸಿದ್ದಾರೆ.
ಹೆಂಡತಿ ಹಣ, ಒಡವೆಗಿಂತ ಗಂಡನಾದವನು ತನ್ನೊಂದಿಗೆ ಸಮಯ ಕಳೆಯಬೇಕು ಎಂದು ಬಯಸುತ್ತಾಳೆ. ಗಂಡನ ಸಮಯವೇ ಆಕೆಗೆ ಎಲ್ಲಕ್ಕಿಂತ ಮುಖ್ಯವಾಗಿರುತ್ತದೆ.
ಪ್ರತಿ ಹೆಣ್ಣು ಗೌರವದಿಂದ ಬದುಕಲು ಇಚ್ಚಿಸುತ್ತಾಳೆ. ಆದರಲ್ಲೂ, ತನ್ನ ಗಂಡನಾದವನು ಎಲ್ಲರೆದುರು ಗೌರವದಿಂದ ನಡೆಸಿಕೊಂಡರೆ ಅಂತಹ ಹೆಣ್ಣು ತನಗಿಂತ ಅದೃಷ್ಟವಂತೆ ಬೇರೆ ಯಾರಿಲ್ಲ ಎಂದು ಭಾವಿಸುತ್ತಾಳೆ.
ಮನೆ ಎಂದ ಮೇಲೆ ಕಷ್ಟ-ಸುಖ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಆದರೆ, ಕಷ್ಟದ ಸಂದರ್ಭದಲ್ಲಿ ಜೊತೆಯಾಗಿ ನಿಂತು ಧೈರ್ಯ ತುಂಬುವ ಗಂಡ ಸಿಗಬೇಕೆಂದು ಹೆಣ್ಣು ಬಯಸುತ್ತಾಳೆ.
ಮೇಲೆ ಉಲ್ಲೇಖಿಸಿದ ಈ ಐದು ಪ್ರಮುಖ ಗುಣಗಳು ಗಂಡನಲ್ಲಿದ್ದರೆ ಹೆಂಡತಿಗೆ ಸ್ವರ್ಗಕ್ಕೆ ಮೂರೇ ಗೇಣು ಎನ್ನುತ್ತಾರೆ ಆಚಾರ್ಯ ಚಾಣಕ್ಯ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.