Chanakya Niti: ಹೆಣ್ಣನ್ನು ಖುಷಿಪಡಿಸಲು ಒಂಟೆಯ ಈ ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ, ಮೊದಲ ಪ್ರಯತ್ನದಲ್ಲೇ ಫುಲ್ ರಿಸಲ್ಟ್ ಗ್ಯಾರಂಟಿ!

Wed, 01 May 2024-9:16 pm,

1. ಚಾಣಕ್ಯರ ಪ್ರಕಾರ ಒಂಟೆಯ ಈ 5 ಗುಣಗಳನ್ನು ಹೊಂದಿರುವ ಪುರುಷರ ಪತ್ನಿ ಅವರಿಂದ ತುಂಬಾ ಸಂತುಷ್ಟರಾಗುತ್ತಾರೆ ಎನ್ನಲಾಗಿದೆ. ಇಂತಹ ಪುರುಷನ ಕುಟುಂಬ ಖುಷಿಗಳಿಂದ ತುಂಬಿರುತ್ತದೆ. ಬನ್ನಿ ಆಗುಣಗಳು ಯಾವುದು ತಿಳಿದುಕೊಳ್ಳೋಣ,   

2. ಸಂತೃಪ್ತಿ ಹೊಂದಿರುವ ಪುರುಷ - ಯಾವ ರೀತಿ ಒಂಟೆ ತನಗೆ ಎಷ್ಟು ಆಹಾರ ಸಿಗುತ್ತದೆ. ಅದರಿಂದಲೇ ಸಂತುಷ್ಟಿಯನ್ನು ಪಡೆದುಕೊಳ್ಳುತ್ತದೆಯೋ, ಅದೇ ರೀತಿ ಪುರುಷ ತನಗೆ ಸಾಧ್ಯವಾದಷ್ಟು ಪರಿಶ್ರಮ ಪಾಡಬೇಕು ಮತ್ತು ಅದರಿಂದ ಸಿಕ್ಕ ಫಲದಿಂದ ಸಂತುಷ್ಟಿಯನ್ನು ಹೊಂದಬೇಕು ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಇಂತಹ ಗುಣ ಇರುವ ಪುರುಷ ಬೇಗನೆ ಯಶಸ್ಸನ್ನು ಪ್ರಾಪ್ತಿ ಮಾಡಿಕೊಳ್ಳುತ್ತಾನೆ.   

3. ಎಚ್ಚರಿಕೆಯಿಂದ ಇರುವ ಪುರುಷ- ಯಾವ ರೀತಿ ಒಂಟೆ ಗಾಢ ನಿದ್ರೆಯಲ್ಲಿಯೂ ಕೂಡ ಎಚ್ಚರಿಕೆಯಿಂದ ಇರುತ್ತದೆಯೋ, ಅದೇ ರೀತಿ ಪುರುಷ ಕೂಡ ತನ್ನ ಕುಟುಂಬ, ಪತ್ನಿ ಹಾಗೂ ಕರ್ತವ್ಯದ ಪ್ರತಿ ಎಚ್ಚರಿಕೆಯಿಂದ ಇರಬೇಕು ಎಂದು ಚಾಣಕ್ಯ ಹೇಳುತ್ತಾರೆ. ಇಂತಹ ಗುಣ ಇರುವ ಪುರುಷನ ಪತ್ನಿ ಯಾವಾಗಲೂ ಸಂತೋಷದಿಂದ ಇರುತ್ತಾಳೆ.   

4.ಪ್ರಾಮಾಣಿಕ ಪುರುಷ - ಸಾಮಾನ್ಯವಾಗಿ ಒಂಟೆಯ ಪ್ರಾಮಾಣಿಕತೆಯ ಮೇಲೆ ಜನ ಸಂಶಯ ಪಡಬಾರದು ಎಂದು ಹೇಳುತ್ತಾರೆ. ಅದೇ ರೀತಿ ಪುರುಷ ತನ್ನ ಪತ್ನಿ ಹಾಗೂ ಕಾರ್ಯಗಳ ಪ್ರತಿ ಪ್ರಾಮಾಣಿಕರಾಗಿರಬೇಕು ಎನ್ನುತ್ತಾರೆ ಆಚಾರ್ಯ ಚಾಣಕ್ಯ, ಪರಸ್ತ್ರೀಯನ್ನು ನೋಡಿ ಜೊಲ್ಲು ಸುರಿಸುವ ಪತಿಯನ್ನು ಪತ್ನಿ ದ್ವೇಷಿಸುತ್ತಾಳೆ ಮತ್ತು ಪ್ರಮಾಣಿಕ ಪುರುಷನನ್ನು ಪ್ರೀತಿಸುತ್ತಾಳೆ.   

5. ಶೌರ್ಯ ಹೊಂದಿರುವ ಪುರುಷ: ಆಚಾರ್ಯ ಚಾಣಕ್ಯರ ಪ್ರಕಾರ ಯಾವ ರೀತಿ ಒಂಟೆ ಸಾಕಷ್ಟು ಶೌರ್ಯ ಹೊಂದಿರುವ ಪ್ರಾಣಿಯಾಗಿರುತ್ತದೆಯೋ ಮತ್ತು ತನ್ನ ಒಡೆಯನ ರಕ್ಷಣೆಗೆ ಸದಾ ಸಿದ್ಧವಾಗಿರುತ್ತದೆಯೋ, ಅದೇ ರೀತಿ ಪುರುಷ ಕೂಡ ಅವಶ್ಯಕತೆ ಬಿದ್ದರೆ ತನ್ನ ಪತ್ನಿ ಹಾಗೂ ಕುಟುಂಬ ರಕ್ಷಣೆಗೆ ತನ್ನ ಜೀವವನ್ನೇ ಪಣಕ್ಕಿಡಲು ಹಿಂಜರಿಯಬಾರದು ಎನ್ನಲಾಗಿದೆ.   

6. ಸಂತುಷ್ಟವಾಗಿಡುವ ಪುರುಷ: ಚಾಣಕ್ಯರ ಪ್ರಕಾರ ತನ್ನ ಪತ್ನಿಗೆ ಎಲ್ಲಾ ರೀತಿಯ ಸುಖಗಳನ್ನು ಕೊಡುವುದು ಪುರುಷನ ಮೊದಲ ಆದ್ಯತೆ ಇರಬೇಡು ಎನ್ನಲಾಗಿದೆ. ಶಾರೀರಿಕ ಹಾಗೂ ಮಾನಸಿಕವಾಗಿ ತನ್ನ ಪತ್ನಿಯನ್ನು ಖುಷಿಯಾಗಿರುವ ಪುರುಷನನ್ನು ಆತನ ಸ್ತ್ರೀ ಸಂಗಾತಿ ಪ್ರೀತಿಸುತ್ತಾಳೆ ಎನ್ನುತ್ತಾರೆ.   

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)  

ZEENEWS TRENDING STORIES

By continuing to use the site, you agree to the use of cookies. You can find out more by Tapping this link