Chankya niti: ಆಚಾರ್ಯ ಚಾಣಕ್ಯರ ಪ್ರಕಾರ ಈ ಗುಣಗಳಿರುವ ಪುರಷರೊಂದಿಗೆ ಮಹಿಳೆಯರು ಶೀಘ್ರವೇ ಪ್ರೀತಿಯಲ್ಲಿ ಬೀಳುತ್ತಾರೆ!!
Chankaya niti to attract women: ಆಚಾರ್ಯ ಚಾಣಕ್ಯರು ತಮ್ಮ ನೀತಿ ಶಾಸ್ತ್ರದಲ್ಲಿ ಜೀವನದ ಕುರಿತಾದ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇವುಗಳನ್ನು ಪಾಲಿಸುವುದರಿಂದ ನಮ್ಮ ಜೀವನ ಸುಖ ಹಾಗೂ ಸಮೃದ್ದಿಯಿಂದ ಕೂಡಿರುತ್ತದೆ.
ಆಚಾರ್ಯ ಚಾಣಕ್ಯರು ತಮ್ಮ ನೀತಿ ಶಾಸ್ತ್ರದಲ್ಲಿ ಸಂಬಂಧಗಳ ಕುರಿತಾಗಿಯೂ ಹಲವಾರು ಮಹತ್ವದ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇದರ ಪ್ರಕಾರ ಈ ಗುಣಗಳಿರುವ ಪುರುಷರ ಕಡೆಗೆ ಮಹಿಳೆಯರು ಬೇಗನೆ ಆಕರ್ಷಿತರಾಗುತ್ತಾರಂತೆ.
ಆಚಾರ್ಯ ಚಾಣಕ್ಯರ ಪ್ರಕಾರ, ಮಹಿಳೆಯರು ಪ್ರಾಮಾಣಿಕ, ಕಠಿಣ ಪರಿಶ್ರಮ, ಶಾಂತ, ಅವರ ಅಭಿಪ್ರಾಯಗಳನ್ನು ಆಲಿಸುವ ಮತ್ತು ಪ್ರೀತಿಯಲ್ಲಿ ಪ್ರಾಮಾಣಿಕರಾಗಿರುವ ಪುರುಷರಿಗೆ ಹೆಚ್ಚು ಆದ್ಯತೆಯನ್ನು ನೀಡುತ್ತಾರೆ.
ಆಚಾರ್ಯ ಚಾಣಕ್ಯ ಅವರು ಮಹಾನ್ ವಿದ್ವಾಂಸರು, ಮೇಧಾವಿ, ಅತ್ಯಂತ ನುರಿತ ತಂತ್ರಜ್ಞ, ತತ್ವಜ್ಞಾನಿ, ರಾಜತಾಂತ್ರಿಕ ಮತ್ತು ಅರ್ಥಶಾಸ್ತ್ರಜ್ಞ, ಅವರು ಎಲ್ಲಾ ಕ್ಷೇತ್ರಗಳಲ್ಲಿ ಸಮರ್ಥರಾಗಿದ್ದರು ಎಂದು ಹೇಳಲಾಗುತ್ತದೆ.
ಆಚಾರ್ಯ ಚಾಣಕ್ಯರು ತಮ್ಮ ನೀತಿ ಶಾಸ್ತ್ರದಲ್ಲಿ ಮಾನವ ಜೀವನಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ನಮೂದಿಸಿದ್ದಾರೆ. ಅದಕ್ಕಾಗಿಯೇ ಇಂದಿಗೂ ಅನೇಕರು ಅವರ ನೀತಿಗಳನ್ನು ಅನುಸರಿಸುತ್ತಾರೆ. ಆಚಾರ್ಯ ಚಾಣಕ್ಯರು ವೈಯಕ್ತಿಕ ಜೀವನ, ವೈವಾಹಿಕ ಜೀವನ, ವೃತ್ತಿ, ಆರೋಗ್ಯ ಮತ್ತು ಉದ್ಯೋಗದಿಂದ ಪ್ರಾರಂಭಿಸಿ ನೀತಿಶಾಸ್ತ್ರದಲ್ಲಿ ಅನೇಕ ವಿಷಯಗಳನ್ನು ಬರೆದುಕೊಂಡಿದ್ದಾರೆ.
ಆಚಾರ್ಯ ಚಾಣುಕ್ಯರ ಪ್ರಕಾರ ಕೆಲವು ಗುಣಗಳನ್ನು ಹೊಂದಿರುವ ಪುರುಷರನ್ನು ಮಹಿಳೆಯರು ಇಷ್ಟಪಡುತ್ತಾರಂತೆ. ಈ ಐದು ಗುಣಗಳು ಪುರಷನಲ್ಲಿದ್ದರೆ ಮಹಿಳೆಯರು ಆ ಪುರುಷನ ಕಡೆಗೆ ಆಕರ್ಷಿತರಾಗುತ್ತಾರಂತೆ.
ಆಚಾರ್ಯ ಚಾಣಕ್ಯರ ಪ್ರಕಾರ, ಮಹಿಳೆಯರು ಪ್ರಾಮಾಣಿಕ, ಕಠಿಣ ಕೆಲಸ ಮಾಡುವ ಪುರುಷನನ್ನು ಪ್ರೀತಿಸುತ್ತಾರೆ. ಅಂತಹ ಜನರು ಕೆಲಸದ ಕಡೆಗೆ ಸಮರ್ಪಣೆ ಮತ್ತು ಜೀವನದ ಉತ್ಸಾಹವನ್ನು ಹೊಂದಿರುತ್ತಾರೆ ಎಂದು ನಂಬಲಾಗಿದೆ.
ಶಾಂತ - ಜೀವನದ ಬಗ್ಗೆ ಸ್ಪಷ್ಟವಾಗಿರುವ ವ್ಯಕ್ತಿಗೆ ಮಹಿಳೆಯರು ಹೆಚ್ಚು ಆಕರ್ಷಿತರಾಗುತ್ತಾರೆ. ಅಂತಹವರು ಜೀವನದಲ್ಲಿ ಎಷ್ಟೇ ಕಷ್ಟಗಳನ್ನು ಎದುರಿಸಿದರೂ ಧೈರ್ಯದಿಂದ ಹೋರಾಡುತ್ತಾರೆ ಎಂಬ ನಂಬಿಕೆ ಇದೆ.
ಆಚಾರ್ಯ ಚಾಣಕ್ಯ ಪ್ರಕಾರ.. ಮಹಿಳೆಯರು ಪುರುಷರ ನಡವಳಿಕೆಯನ್ನು ಗಮನಿಸುತ್ತಾರೆ.. ಮಹಿಳೆಯರು ತಮ್ಮ ಅಭಿಪ್ರಾಯಗಳನ್ನು ಶಾಂತವಾಗಿ ಕೇಳುವ ಪುರುಷರಿಗೆ ಆದ್ಯತೆ ನೀಡುತ್ತಾರೆ.
ತನ್ನ ಅಭಿಪ್ರಾಯವನ್ನು ಸರಿಯಾದ ರೀತಿಯಲ್ಲಿ ಕೇಳುವ ಮತ್ತು ಅಭ್ಯಾಸ ಮಾಡುವ ಪುರುಷನನ್ನು ಮಹಿಳೆಯರು ಇಷ್ಟಪಡುತ್ತಾರೆ. ಅಂತಹವರಿಂದ ಅವರು ಯಾವಾಗಲೂ ಭರವಸೆ ಹೊಂದುತ್ತಾರೆ ಎಂದು ಅವರು ನಂಬುತ್ತಾರೆ. ಮಹಿಳೆಯರು ಪುರುಷರ ನಡವಳಿಕೆಯನ್ನು ಗಮನಿಸುತ್ತಾರೆ ಎಂದು ಆಚಾರ್ಯ ಚಾಣಕ್ಯರು ತಮ್ಮ ನೀತಿ ಶಾಸ್ತ್ರದಲ್ಲಿ ಉಲ್ಲೇಖಿಸಿದ್ದಾರೆ. ಮಹಿಳೆಯರು ಉತ್ತಮ ನಡತೆಯ ಪುರುಷರತ್ತ ಆಕರ್ಷಿತರಾಗುತ್ತಾರೆ.