Chanakya Niti: ಮದುವೆಗೆ ಮುನ್ನ ನಿಮ್ಮ ಜೀವನ ಸಂಗಾತಿಯನ್ನು ಈ ವಿಷಯಗಳ ಬಗ್ಗೆ ಪರೀಕ್ಷಿಸಿ!

Wed, 04 Jan 2023-12:47 pm,

ಕೋಪವು ಯಾವುದೇ ಮನುಷ್ಯನನ್ನು ನಾಶಪಡಿಸುತ್ತದೆ. ಇದರಿಂದಾಗಿ ಮಿತ್ರರೂ ಶತ್ರುಗಳಾಗುತ್ತಾರೆ ಮತ್ತು ವ್ಯಕ್ತಿಯು ಯೋಚಿಸದೆ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾನೆ. ಕೋಪವು ವೈವಾಹಿಕ ಜೀವನವನ್ನು ನರಕವಾಗಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಮದುವೆಗೂ ಮೊದಲು ನಿಮ್ಮ ಸಂಗಾತಿಯ ಕೋಪವನ್ನು ಪರೀಕ್ಷಿಸುವುದು ಅತ್ಯವಶ್ಯಕ.

ಚಾಣಕ್ಯನ ನೀತಿ ಶಾಸ್ತ್ರದ ಪ್ರಕಾರ, ಯಾವುದೇ ಮನುಷ್ಯನಿಗೆ ತಾಳ್ಮೆ ಬಹಳ ಮುಖ್ಯ. ಇದು ಮನಷ್ಯನ ಉತ್ತಮ ಗುಣಗಳಲ್ಲಿ ಒಂದು. ತಾಳ್ಮೆ ಎಂಬುದು ವ್ಯಕ್ತಿಯ ಯಾವುದೇ ನಿರ್ಣಾಯಕ ಪರಿಸ್ಥಿತಿಯಿಂದ ಹೊರಬರಲು ಸಹಾಯ ಮಾಡುತ್ತದೆ. ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆಯುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ಜೀವನ ಸಂಗಾತಿಯನ್ನು ನೀವು ಆರಿಸಿಕೊಂಡಾಗ ಈ ಗುಣಕ್ಕೆ ವಿಶೇಷ ಗಮನ ಕೊಡಬೇಕು.

ಚಾಣಕ್ಯ ನೀತಿಯ ಪ್ರಕಾರ, ನೀವು ಯಾರನ್ನಾದರೂ ಮದುವೆಯಾಗಲು ನಿರ್ಧರಿಸಿದಾಗ, ಮೊದಲು ಅವರ ಗುಣಗಳನ್ನು ನೋಡಿ, ಅವರ ಸೌಂದರ್ಯವನ್ನಲ್ಲ. ಚಾಣಕ್ಯರ ಪ್ರಕಾರ, ಯಾವುದೇ ವ್ಯಕ್ತಿಯ ಸೌಂದರ್ಯವು ಜೀವನಕ್ಕೆ ಮುಖ್ಯವಾಗುವುದಿಲ್ಲ, ಉತ್ತಮ ಗುಣಗಳು ಇಲ್ಲದಿದ್ದರೆ ವ್ಯಕ್ತಿಯ ಸೌಂದರ್ಯ ಉಪಯೋಗಕ್ಕೆ ಬರುವುದಿಲ್ಲವಂತೆ.  

ಆಚಾರ್ಯ ಚಾಣಕ್ಯ ಹೇಳುವಂತೆ ಮಾನವನಿಗೆ ಧಾರ್ಮಿಕತೆ ಬಹಳ ಮುಖ್ಯ. ಧಾರ್ಮಿಕ ವ್ಯಕ್ತಿಯು ಸಂಯಮದಿಂದ ಕೂಡಿರುತ್ತಾನೆ ಮತ್ತು ತನ್ನ ಜೀವನ ಸಂಗಾತಿಯ ಕಡೆಗೆ ನಂಬಿಗಸ್ತನಾಗಿರುತ್ತಾನೆ. ಹೀಗಾಗಿ ಮದುವೆಗೆ ಮೊದಲು ನಿಮ್ಮ ಜೀವನ ಸಂಗಾತಿ ಎಷ್ಟು ಧಾರ್ಮಿಕ ಮನಸ್ಥಿತಿ ಹೊಂದಿದ್ದಾರೆಂದು ಪರೀಕ್ಷಿಸುವುದು ಮುಖ್ಯ.

ಆಚಾರ್ಯ ಚಾಣಕ್ಯರ ಪ್ರಕಾರ, ನೀವು ಮಹಿಳೆಯನ್ನು ಮದುವೆಯಾಗಲು ಯೋಚಿಸಿದಾಗ, ಆಕೆಯ ಗುಣಗಳನ್ನು ಪರೀಕ್ಷಿಸಬೇಕು. ಮಹಿಳೆ ಸದ್ಗುಣಿಯಾಗಿರುವುದು ಬಹಳ ಮುಖ್ಯ. ಸೌಂದರ್ಯವು ಯಾವಾಗಲೂ ನಿಮ್ಮೊಂದಿಗೆ ಇರುವುದಿಲ್ಲ, ಆದರೆ ಸದ್ಗುಣಶೀಲ ಮಹಿಳೆ ಪ್ರತಿಕೂಲ ಸಂದರ್ಭಗಳಲ್ಲಿಯೂ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳುತ್ತಾಳೆ.

(ಗಮನಿಸಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link