10 Rupee Old Note: ನಿಮ್ಮ ಬಳಿ 10 ರೂ.ನ ಹಳೆ ನೋಟು ಇದ್ಯಾ? ಒಂದು ನಿಮಿಷದಲ್ಲಿ 25 ಸಾವಿರ ಗಳಿಸಬಹುದು

Tue, 11 Apr 2023-7:27 pm,

ನಿಮ್ಮ ಬಳಿ ಹಳೆ ಕರೆನ್ಸಿ ನೋಟುಗಳಿದ್ದರೆ ಅವುಗಳನ್ನು ಮಾರಾಟ ಮಾಡಿ ಹಣ ಗಳಿಸಬಹುದು. ಇಂತಹ ಸುದ್ದಿಗಳನ್ನು ನೀವು ಕೇಳಿರಬಹುದು. ಆದರೆ ಇಂದು ಅದು ನಿಜವಾಗಿದೆ. ನಿಮ್ಮ ಬಳಿ ಇರುವ 10 ರೂಪಾಯಿ ನೋಟಿನಿಂದ 25 ಸಾವಿರ ರೂ,ವರೆಗೆ ಗಳಿಕೆ ಮಾಡುವ ಅವಕಾಶವಿದೆ. ಅದರ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ ನೋಡಿ.

ಮನೆಯಲ್ಲಿ ಕುಳಿತು ದೊಡ್ಡ ಮೊತ್ತದ ಹಣವನ್ನು ಗಳಿಸುವ ಅದ್ಭುತ ಅವಕಾಶವನ್ನು ನಿಮ್ಮ ಬಳಿಗೆ ತಂದಿದ್ದೇವೆ.

ಕೆಲವರ ಮನೆಯಲ್ಲಿ ಇಂದಿಗೂ ಸಹ ಹಳೆಯ 10 ರೂಪಾಯಿ ನೋಟು ಇರಬಹುದು. ಆದರೆ ಅವುಗಳನ್ನು ಹೇಗೆ ಬಳಕೆ ಮಾಡುವುದು ಎಂದು ತಿಳಿದಿರುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಈ ಸಲಹೆ ನಿಮಗೆ ಉಪಯೋಗವಾಗಬಹುದು.

Coinbazaar ವೆಬ್‌’ಸೈಟ್ ಇದೀಗ ಹಳೆಯ ನೋಟುಗಳನ್ನು ಆನ್‌’ಲೈನ್‌’ನಲ್ಲಿ ಮಾರಾಟ ಮಾಡಲು ಮತ್ತು ಹಣ ಗಳಿಸಲು ವೇದಿಕೆಯನ್ನು ಒದಗಿಸುತ್ತದೆ.

ರೂ.10ರ ನೋಟು ರೂ.25,000ಕ್ಕೆ ಮಾರಾಟವಾಗುತ್ತದೆ. ಇದಕ್ಕೆ ಕೆಲವೊಂದು ವೈಶಿಷ್ಟ್ಯತೆಗಳಿವೆ. ಅದರಲ್ಲಿ ಪ್ರಮುಖ ವೈಶಿಷ್ಟ್ಯವೆಂದರೆ ಒಂದು ಬದಿಯಲ್ಲಿ ಅಶೋಕ ಸ್ತಂಭ ಮತ್ತು ಇನ್ನೊಂದು ಬದಿಯಲ್ಲಿ ದೋಣಿ ಇರುವ ರೀತಿಯಲ್ಲಿ ಡಿಸೈನ್ ಇರಬೇಕು.

ಮೊದಲು ಅಧಿಕೃತ ವೆಬ್‌ಸೈಟ್ coinbazzar.com ಗೆ ಲಾಗಿನ್ ಆಗಿ. ಮುಖಪುಟದಲ್ಲಿ ಮಾರಾಟಗಾರರಾಗಿ ನಿಮ್ಮನ್ನು ನೋಂದಾಯಿಸಿಕೊಳ್ಳಿ. ಬಳಿಕ ನಿಮ್ಮ ಬಳಿ ಇರುವ ರೂ.10 ನೋಟಿನ ಸ್ಪಷ್ಟ ಮತ್ತು ಸರಿಯಾದ ಫೋಟೋ ತೆಗೆದುಕೊಂಡು ಅದನ್ನು ಪ್ಲಾಟ್‌ ಫಾರ್ಮ್‌ನಲ್ಲಿ ಅಪ್‌ಲೋಡ್ ಮಾಡಿ.

Coinbazaar ಪ್ಲಾಟ್‌’ಫಾರ್ಮ್ ಹಳೆಯ ನೋಟುಗಳು ಮತ್ತು ನಾಣ್ಯಗಳನ್ನು ಖರೀದಿಸಲು ಪ್ಲಾಟ್‌’ಫಾರ್ಮ್ ಬಳಸುವ ಜನರಿಗೆ ನಿಮ್ಮ ಜಾಹೀರಾತನ್ನು ತೋರಿಸುತ್ತದೆ. ಆಗ ಹಳೆಯ ರೂ.10 ನೋಟುಗಳನ್ನು ಖರೀದಿಸಲು ಆಸಕ್ತಿ ಹೊಂದಿರುವ ಜನರು ನಿಮ್ಮ ಜಾಹೀರಾತು ನೋಡಿ, ಬಳಿಕ ನಿಮ್ಮನ್ನು ಸಂಪರ್ಕಿಸುತ್ತಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link