Chandan Shetty Sanjana Marriage: ಸಂಜನಾ ಆನಂದ ಜೊತೆ ಚಂದನ್ ಶೆಟ್ಟಿ ಮದುವೆ... ರಿವೀಲ್ ಆಗೇ ಬಿಡ್ತು ಬಚ್ಚಿಟ್ಟಿದ್ದ ಬಿಗ್ ಸೀಕ್ರೇಟ್ !
![ಚಂದನ್ ಶೆಟ್ಟಿ ಸಂಜನಾ ಆನಂದ Chandan Shetty Sanjana Anand](https://kannada.cdn.zeenews.com/kannada/sites/default/files/2024/10/09/453596-kjuy.jpg?im=FitAndFill=(500,286))
ಚಂದನ್ ಶೆಟ್ಟಿ ಮತ್ತು ಸಂಜನಾ ಆನಂದ ಮದುವೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅನೇಕ ಪೋಸ್ಟ್ ಗಳು ಹರಿದಾಡುತ್ತಿವೆ.
![ಚಂದನ್ ಶೆಟ್ಟಿ ಸಂಜನಾ ಆನಂದ Chandan Shetty Sanjana Anand](https://kannada.cdn.zeenews.com/kannada/sites/default/files/2024/10/09/453595-ytu.jpg?im=FitAndFill=(500,286))
ನಿವೇದಿತಾ ಗೌಡ ಜೊತೆಗಿನ ವಿಚ್ಛೇದನದ ಬಳಿಕ ಚಂದನ್ ಶೆಟ್ಟಿ ಎರಡನೇ ಮದುವೆ ಆಗ್ತಿದ್ದಾರೆ ಎಂದು ಹೇಳಲಾಗಿತ್ತು.
![ಚಂದನ್ ಶೆಟ್ಟಿ ಸಂಜನಾ ಆನಂದ Chandan Shetty Sanjana Anand](https://kannada.cdn.zeenews.com/kannada/sites/default/files/2024/10/09/453594-ytty.jpg?im=FitAndFill=(500,286))
ನಟಿ ಸಂಜನಾ ಆನಂದ್ ಜೊತೆ ಚಂದನ್ ಶೆಟ್ಟಿ ಎರಡನೇ ಮದುವೆ ನಡೆಯಲಿದೆ ಎಂಬ ವದಂತಿ ಎಲ್ಲೆಡೆ ಹಬ್ಬಿತ್ತು.
ಸೋಶಿಯಲ್ ಮೀಡಿಯಾದಲ್ಲಿ ಸಂಜನಾ ಆನಂದ್ ಹಾಗೂ ಚಂದನ್ ಶೆಟ್ಟಿ ಮದುವೆಯ ಸುದ್ದಿ ಮತ್ತು ಫೋಟೋ ವೈರಲ್ ಆಗಿತ್ತು.
ಸಂಜನಾ ಆನಂದ್ ಇದಕ್ಕೆ ಈಗಾಗಲೇ ಉತ್ತರ ನೀಡಿದ್ದರು. ಈಗ ನಟ ಚಂದನ್ ಶೆಟ್ಟಿ ಸಹ ಈ ಬಗ್ಗೆ ಮಾತನಾಡಿದ್ದಾರೆ.
ಚಂದನ್ ಶೆಟ್ಟಿ, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಒಂದು ಫೋಟೋಕ್ಕೆ ಕಮೆಂಟ್ ಮಾಡುವ ಮೂಲಕ ಈ ವದಂತಿಗೆ ಸ್ಪಷ್ಟನೆ ನೀಡಿದ್ದಾರೆ.
ಟ್ರೆಂಡಿಂಗ್ ಹೆಸರಿನ ಇನ್ಸ್ಟಾ ಖಾತೆಯಲ್ಲಿ ನಟಿ ಸಂಜನಾ ಆನಂದ್ ಜೊತೆ ಚಂದನ್ ಶೆಟ್ಟಿ ಅವರ ಎರಡನೇ ಮದುವೆ ಶೀಘ್ರವೇ ನಡೆಯಲಿದೆ ಎಂಬ ಪೋಸ್ಟ್ ಹಾಕಲಾಗಿತ್ತು.
ಚಂದನ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದು, ಇದೊಂದು ಸುಳ್ಳು ಸುದ್ದಿಯಾಗಿದೆ. ದಯವಿಟ್ಟು ಫೇಕ್ ನ್ಯೂಸ್ ಹರಡುವುದನ್ನು ನಿಲ್ಲಿಸಿ ಎಂದು ಕಮೆಂಟ್ ಮಾಡಿದ್ದಾರೆ.