ಡಿವೋರ್ಸ್ ದಿನ ನಿವೇದಿತಾ ಕೈ ಹಿಡಿದುಕೊಂಡು ಹೋಗಿರುವುದು ಇದೊಂದೇ ಕಾರಣಕ್ಕೆ : ಕೊನೆಗೂ ಮನದ ಮಾತು ಹೊರ ಹಾಕಿದ ಚಂದನ್ ಶೆಟ್ಟಿ

Thu, 18 Jul 2024-10:49 am,

ಚಂದನವನದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಡಿವೋರ್ಸ್ ಪ್ರಕರಣ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರದ್ದು.ಈ ವಿಚ್ಛೇದನದ ಬಗ್ಗೆ ಯಾರು ಕೂಡಾ ಊಹಿಸಿಯೂ ಇರಲಿಲ್ಲ.

ಈ ಮಧ್ಯೆ ಯಾವ ಸುಳಿವೂ ಇಲ್ಲದೆ ಬಂದ ವಿಚ್ಛೇದನ ಸುದ್ದಿಯನ್ನು ಒಂದು ಕ್ಷಣಕ್ಕೆ ಯಾರು ಕೂಡಾ ನಂಬಲೂ ಇಲ್ಲ.ಯಾಕೆಂದರೆ ಇತ್ತೀಚಿನವೆರೆಗೂ ಇವರಿಬ್ಬರ ಜೋಡಿ ಬಗ್ಗೆ ಎಲ್ಲಾ ಕಡೆ ಮೆಚ್ಚುಗೆಯೇ ವ್ಯಕ್ತವಾಗುತ್ತಿತ್ತು. 

ಇನ್ನು ಈ ಡಿವೋರ್ಸ್ ಗೆ ನಿವೇದಿತಾ ಕಾರಣ ಎನ್ನುವ ಟೀಕೆ ಕೂಡಾ ಸಾಮಾಜಿಕ ಮಾಧ್ಯಮಗಳಲ್ಲಿ ಕೇಳಿ ಬಂತು. ಮೂರನೇ ವ್ಯಕ್ತಿಯ ಕಾರಣದಿಂದ ಸಂಸಾರದಲ್ಲಿ ಬಿರುಕು ಮೂಡಿತು ಎನ್ನುವ ಮಾತು ಕೂಡಾ ಹರಿದಾಡಿತು.   

ಆದರೆ ಈ ಜೋಡಿ ಡಿವೋರ್ಸ್ ಗೆ ಕೊಟ್ಟ ಕಾರಣ ಹೊಂದಾಣಿಕೆ ಇರಲಿಲ್ಲ. ಹೊಂದಾಣಿಕೆ ಇಲ್ಲದೆ ಜೊತೆಯಾಗಿ ಬದುಕು ಸಾಧ್ಯವಿಲ್ಲ. ಅದಕ್ಕಾಗಿಯೇ ಪರಸ್ಪರರ ಒಪ್ಪಿಗೆ ಮೇರೆಗೆ ವಿಚ್ಛೇದನ ಎಂದು. 

ಇನ್ನು ಡಿವೋರ್ಸ್ ದಿನ ಚಂದನ್ ಮತ್ತು ನಿವೇದಿತಾ ಕೈ ಹಿಡಿದುಕೊಂಡೇ ಕೋರ್ಟ್ ಗೆ ಬಂದಿದ್ದರು. ಇದಕ್ಕೆ ಕಾರಣ ಏನು  ಎನ್ನುವುದನ್ನು ಚಂದನ್ ಹೇಳಿದ್ದಾರೆ. 

ಡಿವೋರ್ಸ್​ ಪಡೆದೆ ಎನ್ನುವ ಕಾರಣಕ್ಕೆ ನಿವೇದಿತಾರನ್ನು ಆ ದಿನ ಒಂಟಿಯಾಗಿ ಬಿಡಲು ಸಾಧ್ಯವಿರಲಿಲ್ಲ. ಮಾಧ್ಯಮಗಳಿಂದ ಎದುರಾಗುವ ಹಲವಾರು ಪ್ರಶ್ನೆಗಳನ್ನುಆಕೆ ಒಬ್ಬಳೇ ನಿಭಾಯಿಸುವುದು ಕೂಡಾ ಆಗುತ್ತಿರಲಿಲ್ಲ. ಹಾಗಾಗಿ ಮಾನವೀಯತೆ ದೃಷ್ಟಿಯಿಂದ ಅವರ ಜೊತೆ ನಿಂತುಕೊಂಡೆ ಎಂದು ಚಂದನ್ ಹೇಳಿದ್ದಾರೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link