ವಿಚ್ಛೇದನವಾಗಿ ಕೆಲವೇ ತಿಂಗಳಲ್ಲಿ ಚಂದನ್‌ ಶೆಟ್ಟಿ ಎರಡನೆ ಮದುವೆ! ಖ್ಯಾತ ನಟಿಯ ಕೈ ಹಿಡಿಯಲಿದ್ದಾರೆ ಯಾರ್ಪರ್‌?

Mon, 07 Oct 2024-12:18 pm,

Chandhan Shetty second marriage: ಚಂದನ್‌ ಶೆಟ್ಟಿ ಹಾಗೂ ನಿವೇದಿತ ಗೌಡ ಜೋಡಿ ದಿಢಿರನೆ ವಿಚ್ಛೇದನವನ್ನು ಘೋಷಿಸುವ ಮೂಲಕ ತಮ್ಮ ಅಭಿಮಾನಿಗಳಿಗೆ ಶಾಕ್‌ ಕೊಟ್ಟಿದ್ದರು. ಆದರೆ ಇದೀಗ ಚಂದನ್‌ ಶೆಟ್ಟಿ ನಟಿಯೊಬ್ಬರನ್ನು ಕೈ ಹಿಡಿಯಲಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.   

ಹೌದು, ತಮ್ಮ ನ್ಯಾಚುರಲ್‌ ಬ್ಯೂಟಿಯಿಂದಲೇ ಅಭಿಮಾನಿಗಳ ಮನ ಕದ್ದಿರುವ ಸ್ಯಾಂಡಲ್‌ವುಡ್‌ ಕ್ರಶ್‌ ನಟಿ ಸಂಜನಾ ಆನಂದ್‌, ಯಾರ್ಪರ್‌ ಚಂದನ್‌  ಶೆಟ್ಟಿ ಅವರ ಕೈ ಹಿಡಿಯಲಿದ್ದಾರೆ ಎನ್ನುವ ಸುದ್ದಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.   

ನಿವೇದಿತ ಗೌಡ ಹಾಗೂ ಚಂದನ್‌ ಶೆಟ್ಟಿ ವಿಚ್ಛೇದನ ಪಡೆದ ನಂತರ ಈ ಇಬ್ಬರ ಕುರಿತು ಹಲವಾರು ಊಹಾಪೋಹಗಳು ಕೇಳಿ ಬಂದಿದ್ದವು, ಚಂದನ್‌ ಶೆಟ್ಟಿ ಹಾಗೂ ನಟಿ ಸಂಜನಾ ಆನಂದ್‌ ಸೂತ್ರಧಾರಿ ಎಂಬ ಸಿನಿಮಾದಲ್ಲಿ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಇಬ್ಬರ ಕೆಮಿಸ್ಟ್ರಿಗೆ ಫ್ಯಾನ್ಸ್‌ ಫಿದಾ ಆಗಿದ್ದರು.  

ಸಿನಿಮಾದಲ್ಲಿ ಈ ಜೋಡಿ ಹಾಡೊಂದಕ್ಕೆ ಸ್ಟೆಪ್ಸ್‌ ಹಾಕಿದ್ದರು, ಇದಾದ ನಂತರ ಅಭಿಮಾನಿಗಳು ಇವರ ಆನ್‌ಸ್ಕ್ರೀನ್‌ ಕೆಮಿಸ್ಟ್ರಿ ತುಂಬಾ ಚೆನ್ನಾಗಿದೆ, ಈ ಜೋಡಿ ರಿಯಲ್‌ ಲೈಫ್‌ನಲ್ಲೂ ಜೋಡಿಯಾದರೆ ತುಂಬಾ ಚೆನ್ನಾಗಿರುತ್ತದೆ ಎಂದು ಅಭಿಮಾನಿಗಳು ನಿರೀಕ್ಷಿಸಿದ್ದರು.   

ಆದರೆ, ಹೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿ ಕೇಳಿ ಚಂದನ್‌ ಶೆಟ್ಟಿ ಫ್ಯಾನ್ಸ್‌ ಫುಲ್‌ ಖುಷ್‌ ಆಗ್ತಿದ್ದಾರೆ, ನಟಿ ಸಂಜನಾ ಹಾಗೂ ಯಾರ್ಪರ್‌ ಮದುವೆಯಾಗುತ್ತಿದ್ದಾರೆ ಎನ್ನುವ ಸುದ್ದಿಯನ್ನು ಹಬ್ಬಿಸಿತ್ತಿದ್ದಾರೆ.  

ಅಷ್ಟಕ್ಕೂ, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುವ ಈ ಸುದ್ದಿ ನಿಜವಲ್ಲ, ಈ ಕುರಿತು ಸಂಜನಾ ಹಾಗೂ ಚಂದನ್‌ ಶೆಟ್ಟಿ ಇಬ್ಬರೂ ಕೂಡ ಕ್ಲಾರಿಫಿಕೇಶನ್‌ ಕೊಟ್ಟಿದ್ದಾರೆ, ಇದು ಸುಳ್ಳು ಸುದ್ದಿ ಈ ರೀತಿಯಾದ ಸದ್ದಿಯನ್ನು ಹಬ್ಬಿಸಬೇಡಿ ಎಂದು ಅಭಿಮಾನಿಳ ಬಳಿ ಮನವಿ ಮಾಡಿಕೊಂಡಿದ್ದಾರೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link