Chandra Grahan: ಇನ್ನೆರಡು ದಿನದಲ್ಲಿ ಚಂದ್ರಗ್ರಹಣ, ಈ ವಸ್ತುಗಳನ್ನು ದಾನ ಮಾಡಿದರೆ ಶ್ರೀಮಂತರಾಗುವ ಯೋಗ

Thu, 26 Oct 2023-6:59 am,

ಸೂರ್ಯ ಗ್ರಹಣ, ಚಂದ್ರ ಗ್ರಹಣಗಳು ಖಗೋಳ ವಿಸ್ಮಯಗಳೇ ಆದರೂ ಇವುಗಳಿಗೆ ಜ್ಯೋತಿಷ್ಯ ಶಾಸ್ತ್ರದಲ್ಲೂ ವಿಶಿಷ್ಟವಾದ ಮಹತ್ವವಿದೆ. 

ಇನ್ನೆರಡು ದಿನಗಳಲ್ಲಿ ಈ ವರ್ಷದ ದ್ವಿತೀಯ ಹಾಗೂ ಕೊನೆಯ ಚಂದ್ರಗ್ರಹಣ ಸಂಭವಿಸಲಿದೆ. ಅಕ್ಟೋಬರ್ 28ರಂದು ಚಂದ್ರ ಗ್ರಹಣ ಸಂಭವಿಸಲಿದೆ. 

ಅಕ್ಟೋಬರ್ 28ರ ರಾತ್ರಿ ಆರಾರಂಭವಾಗಿ, ಅಕ್ಟೋಬರ್ 29 ರ ಮಧ್ಯರಾತ್ರಿ 2:24 ಕ್ಕೆ ಮುಕ್ತಾಯವಾಗಲಿರುವ ಈ ಭಾಗಶಃ ಚಂದ್ರ ಗ್ರಹಣ ಭಾರತದಲ್ಲೂ ಗೋಚರಿಸುತ್ತದೆ. 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಚಂದ್ರಗ್ರಹಣದ ಸಮಯದಲ್ಲಿ ದಾನ ಮಾಡುವುದನ್ನು ಅತ್ಯಂತ ಪುಣ್ಯದ ಕೆಲಸ ಎಂದು ಹೇಳಲಾಗುತ್ತದೆ. 

ಚಂದ್ರಗ್ರಹಣದ ಸಮಯದಲ್ಲಿ ನಿರ್ದಿಷ್ಟವಾದ ಎರಡು ವಸ್ತುಗಳನ್ನು ದಾನ ಮಾಡುವುದರಿಂದ ಅಂತಹ ಮನೆಯಲ್ಲಿ ಧನ-ಸಂಪತ್ತಿಗೆ ಎಂದಿಗೂ ಕೊರತೆ ಆಗುವುದಿಲ್ಲ ಎಂದು ಹೇಳಲಾಗುತ್ತದೆ. 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಚಂದ್ರ ಗ್ರಹಣದ ಸಮಯದಲ್ಲಿ ಹಾಲು, ಅನ್ನ ಅಥವಾ ಇವುಗಳಿಂದ ತಯಾರಿಸಿದ ಆಹಾರವನ್ನು ದಾನ ಮಾಡುವುದರಿಂದ ನಿಮ್ಮ ಜೀವನದಲ್ಲಿ ತಲೆದೂರಿರುವ ಆರ್ಥಿಕ ಮುಗ್ಗಟ್ಟಿನಿಂದ ಪರಿಹಾರ ಪಡೆಯಬಹುದು ಎಂದು ನಂಬಲಾಗಿದೆ. 

ಧಾರ್ಮಿಕ ನಂಬಿಕೆಗಳ ಪ್ರಕಾರ, ಮಾತೆ ಅನ್ನಪೂರ್ಣೆ ಸ್ವರೂಪವಾದ ಅಕ್ಕಿ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿಯನ್ನು ತರುತ್ತದೆ. ಅಂತೆಯೇ ಹಾಲು ತಾಯಿ ಮಹಾಲಕ್ಷ್ಮಿಯ ಪ್ರತೀಕ ಎನ್ನಲಾಗುತ್ತದೆ. ಅಗತ್ಯವಿರುವವರಿಗೆ ಹಾಲನ್ನು ದಾನ ಮಾಡುವುದರಿಂದ ಲಕ್ಷ್ಮಿ ಕೃಪೆಗೆ ಪಾತ್ರರಾಗಬಹುದು ಎಂಬ ನಂಬಿಕೆ ಇದೆ. ಇದಲ್ಲದೆ, ಸಕ್ಕರೆ, ಬಿಳಿ ಬಟ್ಟೆಯನ್ನು ಕೂಡ ದಾನ ಮಾಡಬಹುದು. 

ಚಂದ್ರಗ್ರಹಣದ ಸಮಯದಲ್ಲಿ ಹಾಲು, ಅಕ್ಕಿ ಅಥವಾ ಇವುಗಳಿಂದ ತಯಾರಿಸಿದ ಆಹಾರವನ್ನು ದಾನ ಮಾಡುವುದರಿಂದ ಮನೆಯಲ್ಲಿ ಉದ್ವಿಗ್ನತೆ ಕೊನೆಗೊಳ್ಳುತ್ತದೆ. ಮಾತ್ರವಲ್ಲದೆ, ಅಂತಹ ಮನೆಯಲ್ಲಿ ಅಷ್ಟೈಶ್ವರ್ಯ ಪ್ರಾಪ್ತಿಯಾಗಿ, ಖಜಾನೆ ಸದಾ ಸಂಪತ್ತಿನಿಂದ ತುಂಬಿರಲಿದೆ ಎಂದು ಹೇಳಲಾಗುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link