ಚಂದಿರನ ಕೃಪೆಯಿಂದ ನಿರ್ಮಾಣಗೊಂಡಿದೆ ಶಶಿ ರಾಜಯೋಗ, 3 ರಾಶಿಗಳ ಜನರಿಗೆ ಆಕಸ್ಮಿಕ ಧನಲಾಭದ ಜೊತೆಗೆ ಭಾಗ್ಯೋದಯದ ಪ್ರಬಲ ಯೋಗ!

Thu, 05 Oct 2023-1:01 pm,

Shashi Rajyog: ವೈದಿಕ ಜೋತಿಷ್ಯ  ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಚಂದಿರನ ಗೋಚರದಿಂದ ಶಶಿ ರಾಜಯೋಗ ನಿರ್ಮಾಣಗೊಳ್ಳುತ್ತಿದೆ. ಈ ರಾಜಯೋಗ ಮೂರು ರಾಶಿಗಳ ಜನರ ಪಾಲಿಗೆ ಅತ್ಯಂತ ಮಂಗಳಕರ ಸಾಬೀತಾಗಲಿದ್ದು, ಈ ಜನರ ಜೀವನದಲ್ಲಿ ಹಣದ ಹೊಳೆಯೇ ಹರಿಯಲಿದೆ. 

ವೃಷಭ ರಾಶಿ: ಈ ರಾಜಯೋಗ ನಿಮ್ಮ ರಾಶಿಯಲ್ಲಿಯೇ ನಿರ್ಮಾಣಗೊಂಡ ಕಾರಣ ಇದು ನಿಮ್ಮ ಪಾಲಿಗೆ ಸಾಕಷ್ಟು ಲಾಭಗಳನ್ನು ತರಲಿದೆ. ಇದರಿಂದ ನಿಮಗೆ ನಿಮ್ಮ ಯೋಜನೆಗಳಲ್ಲಿ ಅಪಾರ ಯಶಸ್ಸು ಸಿಗಲಿದೆ. ಈ ಅವಧಿಯಲ್ಲಿ ನಿಮಗೆ ಒತ್ತಡದಿಂದ ಮುಕ್ತಿ ಸಿಗಲಿದೆ. ನೀವು ಕೈಗೊಂಡ ನಿರ್ಧಾರಗಳು ಉತ್ತಮ ಗುಣಮಟ್ಟದ್ದಾಗಿರಲಿವೆ. ಕೆಲಸದ ನಿಮಿತ್ತ ಯಾತ್ರೆ ಸಂಭವಿಸುವ ಸಾಧ್ಯತೆ ಇದೆ. ಈ ಯಾತ್ರೆ ನಿಮ್ಮ ಪಾಲಿಗೆ ಅತ್ಯಂತ ಲಾಭದಾಯಕವಾಗಿರಲಿದೆ. ಸಿಲುಕಿಹಾಕಿಕೊಂಡ ನಿಮ್ಮ ಧನ ನಿಮ್ಮತ್ತ ಮರಳಲಿದೆ. ಈ ಅವಧಿಯಲ್ಲಿ ನಿಮಗೆ ನಿಮ್ಮ ಅದೃಷ್ಟದ ಅಪಾರ ಬೆಂಬಲ ಸಿಗಲಿದೆ.   

ಕರ್ಕ ರಾಶಿ: ಶಶಿ ರಾಜಯೋಗ ನಿಮ್ಮ ಪಾಲಿಗೆ ಅತ್ಯಂತ ಶುಭ ಫಲದಾಯಿ ಸಾಬೀತಾಗಲಿದೆ. ಅದರಲ್ಲಿಯೂ ವಿಶೇಷವಾಗಿ ಸರ್ಕಾರಿ ನೌಕರಿಯಲ್ಲಿರುವವರಿಗೆ ಹಾಗೂ ರಾಜಕೀಯ ಮುಖಂಡರಿಗೆ ಇದರಿಂದ ಸಾಕಷ್ಟು ಲಾಭ ಸಿಗಲಿದೆ. ನೌಕರವರ್ಗದ ಜನರಿಗೆ ಬಯಸಿದ ಕಡೆಗೆ ವರ್ಗಾವಣೆ ಸಿಗುವ ಸಾಧ್ಯತೆ ಇದೆ. ವ್ಯಾಪಾರಿಗಳಿಗೆ ಉತ್ತಮ ಧನಲಾಭವಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಈ ಅವಧಿಯಲ್ಲಿ ನಿಮ್ಮಲ್ಲಿ ಅತಿಯಾದ ಆತ್ಮವಿಶ್ವಾಸ ಹಾಗೂ ಸಾಹಸವನ್ನು ನೀವು ನೋಡುವಿರಿ. ನಿಮ್ಮ ಕಾರ್ಯ ವಿಧಾನದಲ್ಲಿಯೂ ಕೂಡ ಹೊಸ ಹೊಳಪು-ಚೈತನ್ಯವನ್ನು ನೀವು ಕಾಣುವಿರಿ. ಆಮದು ರಫ್ತು ವ್ಯವಹಾರದಲ್ಲಿ ತೊಡಗಿರುವವರಿಗೆ ಉತ್ತಮ ಲಾಭ ಸಿಗುವ ಸಾಧ್ಯತೆ ಇದೆ.   

ವೃಶ್ಚಿಕ ರಾಶಿ: ಶಶಿ ರಾಜಯೋಗ ನಿರ್ಮಾಣ ವೃಶ್ಚಿಕ ರಾಶಿಯ ಜಾತಕದವರಿಗೆ ಆಕಸ್ಮಿಕ ಧನಲಾಭವನ್ನು ತಂದು ಕೊಡಲಿದೆ. ಆದಾಯದ ಹೊಸ ಮಾರ್ಗಗಳು ನಿಮ್ಮ ಪಾಲಿಗೆ ತೆರೆದುಕೊಳ್ಳಲಿವೆ ಹಾಗೂ ಆರೋಗ್ಯ ಸಾಕಷ್ಟು ಸುಧಾರಿಸಲಿದೆ. ದೀರ್ಘಕಾಲದಿಂದ ನಿಮಗೆ ಸಿಗಬೇಕಾದ ಪ್ರಮೋಷನ್ ಭಾಗ್ಯ ನಿಮಗೆ ಪ್ರಾಪ್ತಿಯಾಲಿದೆ. ಈ ಅವಧಿಯಲ್ಲಿ ನೀವು ವಾಹನ, ಆಸ್ತಿ ಪಾಸ್ತಿ ಖರೀದಿಸುವ ಸಾಧ್ಯತೆ ಇದೆ.   

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)  

ZEENEWS TRENDING STORIES

By continuing to use the site, you agree to the use of cookies. You can find out more by Tapping this link