ಹೆಣ್ಣು ಮಕ್ಕಳ ಪೋಷಕರೇ ತಿಳಿದುಕೊಳ್ಳಿ !ಅಕ್ಟೋಬರ್ 1 ರಿಂದ ಸುಕನ್ಯ ಸಮೃದ್ದಿಗೆ ಹೊಸ ನಿಯಮ !ಶೂನ್ಯವಾಗುವುದು ಬಡ್ಡಿ

Fri, 30 Aug 2024-10:02 am,

ರಾಷ್ಟ್ರೀಯ ಸಣ್ಣ ಉಳಿತಾಯ ಯೋಜನೆಗಳ ಮಾರ್ಗಸೂಚಿಗಳನ್ನು ಅಂಚೆ ಕಚೇರಿ ಮೂಲಕ ಬಿಡುಗಡೆ ಮಾಡಲಾಗಿದೆ.ಈ ನಿಯಮಗಳು ಅಕ್ಟೋಬರ್ 1,2024 ರಿಂದ ಜಾರಿಗೆ ಬರುತ್ತವೆ.

ಈ ಹೊಸ ಮಾರ್ಗ ಸೂಚಿಗಳು ಸುಕನ್ಯಾ ಸಮೃದ್ಧಿ, ಪಿಪಿಎಫ್ ಖಾತೆಯನ್ನು ಹೊಂದಿರುವ ಗ್ರಾಹಕರ ಮೇಲೆ ಪರಿಣಾಮ ಬೀಳಲಿದೆ. ಹೊಸ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪ್ರತಿಯೊಬ್ಬರೂ ಅನುಸರಿಸಲೇ ಬೇಕು.  

ಒಂದು ಮಗುವಿನ ಹೆಸರಿನಲ್ಲಿ ಒಂದೇ ಖಾತೆಗೆ ಅವಕಾಶ. ಅದು ಕೂಡಾ ಪೋಷಕರು ಅಥವಾ ಕಾನುಉನು ಪಾಲರು ತೆರೆಯಬೇಕು. ಅದು ಬಿಟ್ಟು ಅಜ್ಜಿಯರು ತೆರೆಯುವಂತಿಲ್ಲ. ಯೋಜನೆಯ ನಿಯಮಗಳನ್ನು ಮುರಿದರೆ ಖಾತೆಯನ್ನು ಮುಚ್ಚಲಾಗುತ್ತದೆ. 

ಮಗುವಿನ ಹೆಸರಿನಲ್ಲಿ ತೆರೆಯಲಾದ ತಪ್ಪು ಖಾತೆಗಳನ್ನು ಸರಿಪಡಿಸಿದರೆ ಮಾತ್ರ ಹೂಡಿಕೆ ಮೇಲೆ ಬಡ್ಡಿ ನೀಡಲಾಗುತ್ತದೆ. ಇಲ್ಲವಾದರೆ ಬಡ್ಡಿ ಶೂನ್ಯವಾಗುವುದು.ಈ ನಿಟ್ಟಿನಲ್ಲಿ  ಖಾತೆದಾರರು ಅಥವಾ ಪೋಷಕರಿಂದ ಪ್ಯಾನ್ ಮತ್ತು ಆಧಾರ್ ಸಂಖ್ಯೆಯನ್ನು ಸಂಗ್ರಹಿಸಲು ಎಲ್ಲಾ ಅಂಚೆ ಕಚೇರಿಗಳಿಗೆ ತಿಳಿಸಲಾಗಿದೆ.   

ಭಾರತಕ್ಕೆ ಆಗಾಗ ಭೇಟಿ ನೀಡುವ  ಎನ್ಆರ್ ಐಗಳು PPF ಖಾತೆಯನ್ನು ಹೊಂದಿದ್ದರೆ ಅವರಿಗೆ  ಸೆಪ್ಟೆಂಬರ್ 30, 2024 ರವರೆಗೆ ಬಡ್ಡಿಯನ್ನು ನೀಡಲಾಗುತ್ತದೆ. ನಂತರ ಅವರು ಯಾವುದೇ ರೀತಿಯ ಬಡ್ಡಿಯನ್ನು ಪಡೆಯುವುದಿಲ್ಲ.    

ರಾಷ್ಟ್ರೀಯ ಉಳಿತಾಯ ಯೋಜನೆಗೆ ಸಂಬಂಧಿಸಿದ ಮೂರು ರೀತಿಯ ಖಾತೆಗಳಿಗೆ ನಿಯಮಗಳನ್ನು ಬದಲಾಯಿಸಲಾಗಿದೆ.1990 ರ  ಏಪ್ರಿಲ್ 2 ಕ್ಕಿಂತ ಮೊದಲು ತೆರೆಯಲಾದ ಖಾತೆಗಳು ಪ್ರಸ್ತುತ ಬಡ್ಡಿದರದ ಲಾಭವನ್ನು ಪಡೆಯುತ್ತವೆ. ಪ್ರಸ್ತುತ ಪೋಸ್ಟ್ ಆಫೀಸ್ ಉಳಿತಾಯ ಖಾತೆ (POSA) ದರ ಮತ್ತು ಎರಡನೇ ಖಾತೆಯಲ್ಲಿ ಉಳಿದ ಮೊತ್ತಕ್ಕೆ 2% ಬಡ್ಡಿ ನೀಡಲಾಗುತ್ತದೆ.ಹೊಸ ನಿಯಮದ ಅಡಿಯಲ್ಲಿ,  2024 ಅಕ್ಟೋಬರ್ 1 ರಿಂದ ಎರಡೂ ಖಾತೆಗಳ ಮೇಲೆ 0% ಬಡ್ಡಿ ಇರುವುದು.  

ಅಪ್ರಾಪ್ತ ವಯಸ್ಕನ ಹೆಸರಿನಲ್ಲಿ ತೆರೆಯಲಾದ ಖಾತೆಯ ಮೇಲೆ ಪೋಸ್ಟ್ ಆಫೀಸ್ ಉಳಿತಾಯ ಖಾತೆ (POSA) ಬಡ್ಡಿಯು 18 ವರ್ಷ ತುಂಬುವವರೆಗೆ ಲಭ್ಯವಿರುತ್ತದೆ. ನಂತರ PPF ದರವು ಅನ್ವಯಿಸುತ್ತದೆ.ಅಪ್ರಾಪ್ತ ವಯಸ್ಕರಿಗೆ 18 ವರ್ಷ ತುಂಬಿದ ದಿನದಿಂದ ಮುಕ್ತಾಯವನ್ನು ಲೆಕ್ಕಹಾಕಲಾಗುತ್ತದೆ.ಒಂದಕ್ಕಿಂತ ಹೆಚ್ಚು PPF ಖಾತೆಗಳಲ್ಲಿ ಠೇವಣಿ ಮಾಡಿದ ಹಣವು ವಾರ್ಷಿಕ ಮಿತಿಯೊಳಗೆ ಇದ್ದರೆ, ನಂತರ ಯೋಜನೆಯ ಪರಿಣಾಮಕಾರಿ ದರವು ಪ್ರಾಥಮಿಕ ಖಾತೆಗೆ ಅನ್ವಯಿಸುತ್ತದೆ.ಹೆಚ್ಚುವರಿ ಹಣವನ್ನು 0% ಬಡ್ಡಿಯೊಂದಿಗೆ ಹಿಂತಿರುಗಿಸಲಾಗುತ್ತದೆ

ZEENEWS TRENDING STORIES

By continuing to use the site, you agree to the use of cookies. You can find out more by Tapping this link