ಉಳಿತಾಯ ಯೋಜನೆಯ ನಿಯಮದಲ್ಲಿ ಬದಲಾವಣೆ ! ಇವರ ಮೇಲಾಗುವುದು ಹೆಚ್ಚು ಪರಿಣಾಮ
ಹಿರಿಯ ನಾಗರಿಕ ಉಳಿತಾಯ ಯೋಜನೆ (SCSS)ಯನ್ನು 60 ವರ್ಷಕ್ಕಿಂತ ಮೇಲ್ಪಟ್ಟ ಜನರು ಅಥವಾ 55 ವರ್ಷಕ್ಕಿಂತ ಮೇಲ್ಪಟ್ಟ ಉದ್ಯೋಗಿಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಈ ಯೋಜನೆಯಲ್ಲಿ, ವಾರ್ಷಿಕವಾಗಿ 8.2 ಶೇಕಡಾ ಬಡ್ಡಿ ಲಭ್ಯವಿದೆ. ಈ ಬದಲಾವಣೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆ ನೀಡಿದೆ. ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ಮಾಡಿದ ಬದಲಾವಣೆ ನಿಮಗೆ ತಿಳಿದುಕೊಳ್ಳಲೇಬೇಕು.
55 ವರ್ಷಕ್ಕಿಂತ ಮೇಲ್ಪಟ್ಟ ಮತ್ತು 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಎಸ್‌ಸಿಸಿಎಸ್‌ನಲ್ಲಿ ಹೂಡಿಕೆ ಮಾಡುವ ಸಮಯವನ್ನು ಒಂದು ತಿಂಗಳಿಂದ ಮೂರು ತಿಂಗಳಿಗೆ ಸರ್ಕಾರ ಹೆಚ್ಚಿಸಿದೆ. ಪ್ರಸ್ತುತ, ಈ ನಿಯಮದ ಅಡಿಯಲ್ಲಿ, ನಿವೃತ್ತಿಯ ನಂತರ ಒಂದು ತಿಂಗಳೊಳಗೆ ಹೂಡಿಕೆ ಮಾಡಬೇಕಾಗುತ್ತದೆ.
ನಿವೃತ್ತಿ ಪ್ರಯೋಜನಗಳ ವ್ಯಾಪ್ತಿಯನ್ನು ಸ್ಪಷ್ಟವಾಗಿ ವಿವರಿಸಲಾಗಿದೆ. ಅಧಿಸೂಚನೆಯ ಪ್ರಕಾರ, ನಿವೃತ್ತಿ ಪ್ರಯೋಜನ ಎಂದರೆ ನಿವೃತ್ತಿಯ ನಂತರ ಸಿಗುವ ಮೊತ್ತ. ಇದು ಭವಿಷ್ಯ ನಿಧಿ ಬಾಕಿ, ನಿವೃತ್ತಿ ಅಥವಾ ಡೆತ್ ಗ್ರಾಚ್ಯುಟಿ, ಇಪಿಎಸ್ ಅಡಿಯಲ್ಲಿ ರಜೆ ಎನ್ಕ್ಯಾಶ್ಮೆಂಟ್ ಅಥವಾ ನಿವೃತ್ತಿ ಪ್ರಯೋಜನಗಳನ್ನು ಒಳಗೊಂಡಿದೆ.
ಹೊಸ ನಿಯಮಗಳ ಪ್ರಕಾರ, ಸರ್ಕಾರಿ ಉದ್ಯೋಗಿಗಳ ಸಂಗಾತಿಗಳು ಸಹ ಯೋಜನೆಯ ಅಡಿಯಲ್ಲಿ ಫೈನಾನ್ಶಿಯಲ್ ಅಸಿಸ್ಟೆಂಟ್ ಅಮೌಂಟ್ ಹೂಡಿಕೆ ಮಾಡಲು ಅನುಮತಿಸಲಾಗಿದೆ.
ಹೊಸ ನಿಯಮಗಳ ಪ್ರಕಾರ, ಒಂದು ವರ್ಷ ಪೂರ್ಣಗೊಳ್ಳುವ ಮೊದಲು ಖಾತೆಯನ್ನು ಮುಚ್ಚಿದರೆ, ಠೇವಣಿ ಮಾಡಿದ ಮೊತ್ತದಿಂದ ಒಂದು ಪ್ರತಿಶತವನ್ನು ಕಡಿತಗೊಳಿಸಲಾಗುತ್ತದೆ. ಮೊದಲು, ಒಂದು ವರ್ಷದ ಮೊದಲು ಖಾತೆಯನ್ನು ಮುಚ್ಚಿದರೆ, ಯಾವುದೇ ರೀತಿಯ ಬಡ್ಡಿ ಸಿಗುತ್ತಿರಲಿಲ್ಲ. ಖಾತೆಯಲ್ಲಿ ಇರುವ ಮೊತ್ತವನ್ನು ಹಾಗೆಯೇ ಹಿಂತಿರುಗಿಸಲಾಗುತ್ತಿತ್ತು. ಈಗ ಹೂಡಿಕೆ ಮಾಡಿದ ಮೊತ್ತಕ್ಕೆ ಯಾವುದೇ ಬಡ್ಡಿ ಸೇರದೇ ಇದ್ದಲ್ಲಿ ಮೂಲ ಮೊತ್ತದಿಂದ ಒಂದು ಶೇಕಡಾವನ್ನು ಕಡಿತಗೊಳಿಸಲಾಗುತ್ತದೆ.
ಅಧಿಸೂಚನೆಯ ಪ್ರಕಾರ, ಯಾರಾದರೂ ಐದು ವರ್ಷಗಳವರೆಗೆ ಹೂಡಿಕೆ ಮಾಡಿದ್ದು, ನಾಲ್ಕು ವರ್ಷಗಳೊಳಗೆ ಖಾತೆಯನ್ನು ಮುಚ್ಚಿದರೆ, ಖಾತೆದಾರರು ಉಳಿತಾಯ ಖಾತೆಯ ಬಡ್ಡಿಯನ್ನು ಮಾತ್ರ ಪಡೆಯುತ್ತಾರೆ. ಮೊದಲು ಇಂಥಹ ಪರಿಸ್ಥಿತಿಯಲ್ಲಿ ಮೂರು ವರ್ಷಗಳವರೆಗೆ ಯೋಜನೆಯ ಬಡ್ಡಿದರವನ್ನೇ ನೀಡಲಾಗುತ್ತಿತ್ತು. ಅಧಿಸೂಚನೆಯ ಪ್ರಕಾರ, ಐದು ವರ್ಷಗಳ ಹೂಡಿಕೆ ಅವಧಿಯನ್ನು ಸಹ ತೆಗೆದುಹಾಕಲಾಗಿದೆ.
ಇತ್ತೀಚೆಗೆ ಅಂಚೆ ಇಲಾಖೆಯಿಂದ ಅಧಿಸೂಚನೆ ಹೊರಡಿಸಲಾಗಿದೆ. ಇದರ ಪ್ರಕಾರ, ನೀವು ಒಂದು ವರ್ಷ, ಎರಡು ವರ್ಷ ಅಥವಾ ಮೂರು ವರ್ಷಗಳ ಕಾಲ ಹಿರಿಯ ನಾಗರಿಕ ಯೋಜನೆಯಲ್ಲಿ ಹೂಡಿಕೆ ಮಾಡಿ, ಆರು ತಿಂಗಳು ಅಥವಾ ಒಂದು ವರ್ಷದ ನಂತರ ಖಾತೆಯನ್ನು ಮುಚ್ಚುತ್ತಿರಿ ಎಂದು ಇಟ್ಟುಕೊಳ್ಳೋಣ. ಹೀಗಾದಾಗ ನೀವು ಎಷ್ಟಿ ತಿಂಗಳಿಗೆ ಹಣ ಹೂಡಿಕೆ ಮಾಡುತ್ತಿರೋ ಅಷ್ಟೇ ತಿಂಗಳಿಗೆ ಬಡ್ಡಿಯನ್ನು ಪಡೆಯುತ್ತೀರಿ.