ಅಕ್ಟೋಬರ್ 1 ರಿಂದ PPFನ ಮೂರು ನಿಯಮಗಳಲ್ಲಿ ಬದಲಾವಣೆ ! ಇನ್ನು ಮುಂದೆ ಈ ಹೂಡಿಕೆ ಮೇಲೆ ಸಿಗುವುದಿಲ್ಲ ಬಡ್ಡಿ !

Mon, 09 Sep 2024-9:30 am,

PPF ಒಂದು ಜನಪ್ರಿಯ ಉಳಿತಾಯ ಯೋಜನೆಯಾಗಿದೆ.ಇದು ದೀರ್ಘಾವಧಿಯಲ್ಲಿ ಉತ್ತಮ ಆದಾಯವನ್ನು ನೀಡುತ್ತದೆ.  

PPFಗೆ ಸಂಬಂಧಿಸಿದ ಮೂರು ಪ್ರಮುಖ ನಿಯಮಗಳು ಅಕ್ಟೋಬರ್ 1ರಿಂದ ಬದಲಾಗುತ್ತವೆ.ಮುಂದಿನ ತಿಂಗಳಿನಿಂದ ಹೊಸ ನಿಯಮ ಜಾರಿಗೆ ಬರಲಿದೆ.ಈ ಸಂಬಂಧ ಹಣಕಾಸು ಸಚಿವಾಲಯ ಮಾರ್ಗಸೂಚಿಗಳನ್ನು ಹೊರಡಿಸಿದೆ.   

PPFನ ಹೊಸ ನಿಯಮಗಳ ಅಡಿಯಲ್ಲಿ ಮೂರು ಬದಲಾವಣೆಗಳು ಕಂಡು ಬರಲಿವೆ.  ಅಪ್ರಾಪ್ತ ವಯಸ್ಕರ ಹೆಸರಿನಲ್ಲಿ ತೆರೆಯಲಾದ PPF ಖಾತೆಗಳ ನಿಯಮಗಳು ಬದಲಾಗುತ್ತವೆ.ಒಂದಕ್ಕಿಂತ ಹೆಚ್ಚು PPF ಖಾತೆಗಳು ಮತ್ತು ಪೋಸ್ಟ್ ಆಫೀಸ್‌ಗಳ ಮೂಲಕ ರಾಷ್ಟ್ರೀಯ ಉಳಿತಾಯ ಯೋಜನೆಗಳ ಅಡಿಯಲ್ಲಿ ARI ಯ PPF ಖಾತೆಗಳ ವಿಸ್ತರಣೆಯ ನಿಯಮ ಕೂಡಾ ಬದಲಾಗಲಿದೆ.     

ಅಪ್ರಾಪ್ತ ವಯಸ್ಕರಿಗೆ 18 ವರ್ಷ ತುಂಬುವವರೆಗೆ ಅಪ್ರಾಪ್ತರ ಹೆಸರಿನಲ್ಲಿ ತೆರೆಯಲಾದ ಪಿಪಿಎಫ್ ಖಾತೆಯಾ ಹೂಡಿಕೆ ಮೇಲೆ ಬಡ್ಡಿ ಮುಂದುವರಿಯುತ್ತದೆ.ಅಂದರೆ,18 ವರ್ಷ ವಯಸ್ಸಾದ ಮೇಲೆ PPF ಬಡ್ಡಿ ದರವನ್ನು ಪಾವತಿಸಲಾಗುತ್ತದೆ. 

ಒಂದಕ್ಕಿಂತ ಹೆಚ್ಚು PPF ಖಾತೆಗಳನ್ನು ಹೊಂದಿದ್ದರೂ,ಸ್ಕೀಮ್ ದರದ ಪ್ರಕಾರ ಹೂಡಿಕೆದಾರರ ಪ್ರಾಥಮಿಕ ಖಾತೆಗೆ ಬಡ್ಡಿ ಸಿಗುತ್ತದೆ.ಆದರೆ ಠೇವಣಿ ಮೊತ್ತವು ವಾರ್ಷಿಕ ಸೀಲಿಂಗ್ ಮಿತಿಯನ್ನು ಮೀರಬಾರದು.ಎರಡನೇ ಖಾತೆಯಲ್ಲಿ ಬ್ಯಾಲೆನ್ಸ್ ಇದ್ದರೆ,ಅದನ್ನು ಪ್ರಾಥಮಿಕ ಖಾತೆಯೊಂದಿಗೆ ಲಿಂಕ್ ಮಾಡಲಾಗುತ್ತದೆ.ಎರಡೂ ಖಾತೆಗಳ ಒಟ್ಟು ಮೊತ್ತವು ವಾರ್ಷಿಕ ಹೂಡಿಕೆ ಮಿತಿಯೊಳಗೆ ಇರಬೇಕು ಎನ್ನುವ ಷರತ್ತು ಇಲ್ಲಿ ಅನ್ವಯವಾಗುತ್ತದೆ. 

ಎರಡನ್ನೂ ಲಿಂಕ್ ಮಾಡಿದ ನಂತರ,ಅಸ್ತಿತ್ವದಲ್ಲಿರುವ ಯೋಜನೆಯ ಬಡ್ಡಿ ದರವು ಪ್ರಾಥಮಿಕ ಖಾತೆಗೆ ಅನ್ವಯಿಸುತ್ತದೆ.ಎರಡನೇ ಖಾತೆಯಲ್ಲಿನ ಹೆಚ್ಚುವರಿ ನಿಧಿಯ ಮೇಲಿನ  ಬಡ್ಡಿಯನ್ನು ಶೂನ್ಯ ಮಾಡಲಾಗುವುದು. 

ಮೂರನೇ ನಿಯಮದ ಅಡಿಯಲ್ಲಿ, NRI PPF ಖಾತೆಗಳು 1968 ರ ಸಾರ್ವಜನಿಕ ಭವಿಷ್ಯ ನಿಧಿ ಯೋಜನೆಯಡಿಯಲ್ಲಿ ತೆರೆಯಲ್ಪಟ್ಟಿವೆ.ಅಲ್ಲಿ ಫಾರ್ಮ್ H ಖಾತೆದಾರರ ನಿವಾಸ ಸ್ಥಿತಿಯನ್ನು ನಿರ್ದಿಷ್ಟವಾಗಿ ಕೇಳುವುದಿಲ್ಲ.ಈ ಖಾತೆಗಳ ಮೇಲಿನ ಬಡ್ಡಿ ದರವನ್ನು POSA ಮಾರ್ಗಸೂಚಿಗಳ ಪ್ರಕಾರ 30 ಸೆಪ್ಟೆಂಬರ್ 2024 ರವರೆಗೆ ನೀಡಲಾಗುತ್ತದೆ.ಇದರ ನಂತರ ಈ ಖಾತೆಗಳ ಮೇಲಿನ ಬಡ್ಡಿ ದರವು ಶೂನ್ಯ ಆಗುತ್ತದೆ

ZEENEWS TRENDING STORIES

By continuing to use the site, you agree to the use of cookies. You can find out more by Tapping this link