Electricity Bill: ವಿದ್ಯುತ್ ಬಿಲ್ ಕಡಿಮೆ ಮಾಡಲು ನಿಮ್ಮ ಮನೆಯ ಈ 3 ಗ್ಯಾಜೆಟ್‌ಗಳನ್ನು ಇಂದೇ ಬದಲಾಯಿಸಿ

Tue, 07 Nov 2023-11:01 am,

ಬೇಸಿಗೆ ಕಾಲದಲ್ಲಿ ಫ್ಯಾನ್, ಕೂಲರ್, ಎಸಿಗಳ ಬಳಕೆ ಚಳಿಗಾಲದಲ್ಲಿ ಗೀಸರ್ ಮತ್ತು ಹೀಟರ್ ಗಳ ಬಳಕೆಯಿಂದಾಗಿ ಸಾಮಾನ್ಯವಾಗಿ ವಿದ್ಯುತ್ ಬಿಲ್ ಹೆಚ್ಚಾಗುತ್ತದೆ. ಇದಲ್ಲದೆ, ಮನೆಯಲ್ಲಿ ಅನಾವಶ್ಯಕವಾಗಿ ಲೈಟ್ ಉರಿಸುವುದು, ವಿದ್ಯುತ್ ಉಪಕರಣಗಳನ್ನು ಬಳಸುವುದರಿಂದಲೂ ವಿದ್ಯುತ್ ಬಿಲ್ ಹೆಚ್ಚಾಗಬಹುದು. 

ಆದಾಗ್ಯೂ, ನಾವು ಕೆಲವು ವಿಷಯಗಳ ಬಗ್ಗೆ ವಿಶೇಷ ಗಮನ ಹರಿಸುವ ಮೂಲಕ ಮನೆಯ ವಿದ್ಯುತ್ ಬಿಲ್ ಹೆಚ್ಚಳದ ಸಮಸ್ಯೆಯಿಂದ ಕೊಂಚ ಮಟ್ಟಿಗೆ ಪರಿಹಾರವನ್ನು ಪಡೆಯಬಹುದು. ಅದರಲ್ಲೂ ಮುಖ್ಯವಾಗಿ ನಿಮ್ಮ ಮನೆಯಲ್ಲಿರುವ ಕೆಲವು ಗ್ಯಾಜೆಟ್‌ಗಳನ್ನು ಬದಲಾಯಿಸುವ ಮೂಲಕ ಈ ಸಮಸ್ಯೆಗೆ ಸುಲಭ ಪರಿಹಾರ ಲಭ್ಯವಾಗಲಿದೆ. ಅಂತಹ ಕೆಲವು ಪರಿಹಾರಗಳ ಬಗ್ಗೆ ತಿಳಿಯೋಣ...   

ನೀವು ನಿಮ್ಮ ಮನೆಯಲ್ಲಿ ಇನ್ನೂ ಕೂಡ ಹಳೆಯ ಬಲ್ಬ್‌ಗಳನ್ನು ಬಳಸುತ್ತಿದ್ದರೆ ಅದರ ಬದಲಿದೆ ಎಲ್ಇಡಿ ಬಲ್ಬ್‌ಗಳನ್ನು ಬಳಸಿ. ಇದು ವಿದ್ಯುತ್ ಅನ್ನು ಮಿತವಾಗಿ ಬಳಸುವುದರಿಂದ ವಿದ್ಯುತ್ ಬಿಲ್ ಸುಮಾರು 70% ಕಡಿಮೆ ಮಾಡಬಹುದು. 

ನೀವು ಚಳಿ ಅಥವಾ ಮಳೆಗಾಲದಲ್ಲಿ ಹೀಟರ್‌ಗಳನ್ನು ಬಳಸುತ್ತಿದ್ದರೆ ಈಗಲೇ ಈ ಸಾಧನವನ್ನು ಬ್ಲೋವರ್ ಗಳ ಜೊತೆಗೆ ಬದಲಾಯಿಸಿ. ಹೆಚ್ಚಿನ ಸಾಮರ್ಥ್ಯದ ಹೀಟರ್  ವಿದ್ಯುತ್ ಬಿಲ್ ಅನ್ನು ಹೆಚ್ಚಿಸುತ್ತದೆ. ಬ್ಲೋವರ್ ಬಳಕೆಯಿಂದ ವಿದ್ಯುತ್ ಬಳಕೆ ಕಡಿಮೆ ಆಗುವುದರ ಜೊತೆಗೆ ಇದು ಬಿಲ್ ಅನ್ನು ಕೂಡ ಕಡಿಮೆ ಮಾಡುತ್ತದೆ. 

ನೀವು ಸ್ನಾನಕ್ಕಾಗಿ ನೀರನ್ನು ಬಿಸಿ ಮಾಡಲು ಇನ್ನೂ ಸಹ ಹಳೆಯ ರಾಡ್ಗಳು ಅಥವಾ ಹಳೆ ಶೈಲಿಯ ಗೀಸರ್ ಗಳನ್ನು ಬಳಸುತ್ತಿದ್ದರೆ ಕೂಡಲೇ ಅದನ್ನು ಬದಲಾಯಿಸಿ. ಈ ಎರಡೂ ಸಾಧನಗಳು ಹೆಚ್ಚು ವಿದ್ಯುತ್ ಬಳಸುವುದರಿಂದ ವಿದ್ಯುತ್ ಬಿಲ್ ಕೂಡ ಹೆಚ್ಚಾಗುತ್ತದೆ. ಇದನ್ನು ತಪ್ಪಿಸಲು ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುವ 5 ಸ್ಟಾರ್ ರೇಟಿಂಗ್ ಹೊಂದಿರುವ ಹೊಸ ಗೀಸರ್‌ಗಳನ್ನು ಖರೀದಿಸುವುದು ಪ್ರಯೋಜನಕಾರಿ ಆಗಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link