LPG ಬೆಲೆಯಿಂದ ಬ್ಯಾಂಕಿಂಗ್ ನಿಯಮಗಳವರೆಗೆ ಮಾರ್ಚ್‌ನ ಈ ಬದಲಾವಣೆಗಳು ಜೇಬಿನ ಮೇಲೆ ಬೀರಲಿದೆ ನೇರ ಪರಿಣಾಮ

Tue, 01 Mar 2022-10:16 am,

ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಪ್ರತಿ ತಿಂಗಳ ಮೊದಲನೇ ತಾರೀಕಿನಂದು  ಬಿಡುಗಡೆಯಾಗುತ್ತದೆ. ಗ್ಯಾಸ್ ಸಿಲಿಂಡರ್ ಬೆಲೆ ನೇರವಾಗಿ ಸಾಮಾನ್ಯ ಜನರ ಮೇಲೆ ಪರಿಣಾಮ ಬೀರುತ್ತದೆ.  ಮಾರ್ಚ್ 1 ರಿಂದ ಅಂದರೆ ಇಂದಿನಿಂದ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ  105 ರೂ. ಹೆಚ್ಚಳವಾಗಿದೆ. 

IPPB ಅಂದರೆ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ತನ್ನ ಡಿಜಿಟಲ್ ಉಳಿತಾಯ ಖಾತೆಗೆ ಕ್ಲೋಸರ್ ಚಾರ್ಜ್ ವಿಧಿಸಲು ಪ್ರಾರಂಭಿಸಿದೆ. ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆಯನ್ನು ಹೊಂದಿದ್ದರೆ, ಈ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇದಕ್ಕಾಗಿ 150 ರೂ ಮತ್ತು ಜಿಎಸ್‌ಟಿಯನ್ನು ವಿಧಿಸಬೇಕಾಗುತ್ತದೆ. ಈ ಹೊಸ ನಿಯಮವು ಮಾರ್ಚ್ 5, 2022 ರಿಂದ ಜಾರಿಗೆ ಬರಲಿದೆ. 

ಪಿಂಚಣಿದಾರರಿಗೆ ಜೀವಿತ ಪ್ರಮಾಣ ಪತ್ರ ಸಲ್ಲಿಸಲು ಫೆಬ್ರವರಿ 28 ಕೊನೆಯ ದಿನವಾಗಿತ್ತು. ಸರ್ಕಾರ ನೀಡಿರುವ ಈ ವಿನಾಯಿತಿ ಮಾರ್ಚ್ 1ಕ್ಕೆ ಅಂದರೆ ಇಂದಿನಿಂದ ಕೊನೆಗೊಳ್ಳಲಿದೆ. ಪಿಂಚಣಿ ಪಡೆಯುವುದನ್ನು ಮುಂದುವರಿಸಬೇಕಾದರೆ ಪಿಂಚಣಿದಾರರು ತಮ್ಮ ಜೀವನ ಪ್ರಮಾಣಪತ್ರವನ್ನು ಸಮಯಕ್ಕೆ ಸರಿಯಾಗಿ ಸಲ್ಲಿಸುವುದು ಕಡ್ಡಾಯ. ಸಾಮಾನ್ಯವಾಗಿ ಪ್ರತಿ ವರ್ಷ ಜೀವಿತ ಪ್ರಮಾಣ ಪತ್ರ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 30 ಆಗಿರುತ್ತದೆ. ಆದರೆ ಕರೋನಾ ಹಿನ್ನೆಲೆಯಲ್ಲಿ ಸರ್ಕಾರ ಇದನ್ನು ಎರಡು ಬಾರಿ ವಿಸ್ತರಿಸಿದೆ. ನಿರ್ದಿಷ್ಟ ಗಡುವಿಗಿಂತ ಮೊದಲು ಜೀವ ಪ್ರಮಾಣಪತ್ರವನ್ನು ಸಲ್ಲಿಸದಿದ್ದರೆ, ಪಿಂಚಣಿ ನಿಂತು ಹೋಗುತ್ತದೆ. 

ನಿರಂತರವಾಗಿ ಹೆಚ್ಚುತ್ತಿರುವ ಹಣದುಬ್ಬರದ ಮಧ್ಯೆ ಅಮುಲ್ ಹಾಲಿನ ದರವನ್ನು ಲೀಟರ್‌ಗೆ 2 ರೂಹೆಚ್ಚಿಸಲಾಗಿದೆ. ಹೊಸ ದರಗಳು ಇಂದಿನಿಂದ ಅಂದರೆ ಮಾರ್ಚ್ 1 ರಿಂದ ಜಾರಿಗೆ ಬಂದಿವೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link