ಇಂದಿನಿಂದ ಈ 5 ಪ್ರಮುಖ ಬದಲಾವಣೆಗಳಾಗಲಿವೆ, ಮೊದಲ ಬದಲಾವಣೆ ನಿಮ್ಮ ಜೇಬಿಗೆ ದುಬಾರಿ ಪರಿಣಮಿಸಲಿದೆ
1. ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ - ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಕಮರ್ಷಿಯಲ್ ಎಲ್ಪಿಜಿ ಬೆಲೆ ಏರಿಕೆ ಮಾಡಿವೆ. ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ರೂ.102.50 ಏರಿಕೆಯಾಗಿದೆ. ಈ ಹೊಸ ದರ ಜಾರಿ ಬಳಿಕ ದೆಹಲಿಯಲ್ಲಿ 19 ಕಿ.ಗ್ರಾಂ ವಾಣಿಜ್ಯ ಸಿಲಿಂಡರ್ ಬೆಲೆ ರೂ.2253 ನಿಂದ ರೂ.2355.50ಗೆ ಏರಿಕೆಯಾಗಿದೆ.
2. IPO ಗಳಲ್ಲಿ UPI ಪಾವತಿಯ ಲಿಮಿಟ್ ಹೆಚ್ಚಳ - ಐಪಿಓಗಳಿಗೆ ಯುಪಿಐ ಮೂಲಕ ಮಾಡಲಾಗುವ ಪಾವತಿ ಮಿತಿಯನ್ನು ಸೇಬಿ ಏಪ್ರಿಲ್ ನಿಂದ ಹೆಚ್ಚಿಸಿದೆ. ಸೆಬಿಯ ಈ ನಿಯಮ ಮೇ 1 ರಿಂದ ಜಾರಿಗೆ ಬಂದಿದೆ. ಹೀಗಾಗಿ ಇನ್ಮುಂದೆ ನೀವು ಯಾವುದೇ ಐಪಿಓಗಳಲ್ಲಿ ಯುಪಿಐ ಮೂಲಕ 5 ಲಕ್ಷ ರೂ.ಗಳ ವರೆಗೆ ಪೇಮೆಂಟ್ ಮಾಡಬಹುದು. ಮೊದಲು ಈ ಲಿಮಿಟ್ 2 ಲಕ್ಷ ರೂ.ಗಳವರೆಗೆ ಇತ್ತು.
3. ದುಬಾರಿಯಾದ ಜೆಟ್ ಫ್ಯೂಲ್ - ಮೇ 1 ರಿಂದ ಜೆಟ್ ಫ್ಯೂಲ್ ದುಬಾರಿಯಾಗಿದೆ. ದೆಹಲಿಯಲ್ಲಿ ಏರ್ ಟರ್ಬೈನ್ ಫ್ಯೂಲ್ ಬೆಲೆ 116851.46 ಪ್ರತಿ ಕಿಲೋಲೀಟರ್ ತಲುಪಿದೆ. ಇದಕ್ಕೂ ಮೊದಲು ಏಪ್ರಿಲ್ 16 ರಂದು ಕೂಡ ಎಟಿಎಫ್ ಬೆಲೆಯಲ್ಲಿ ವೇಗ ಕಾಣಿಸಿಕೊಂಡಿದ್ದು ಇಲ್ಲಿ ಗಮನಾರ್ಹ.
4. ಪೂರ್ವಾಂಚಲ್ ಎಕ್ಸ್ ಪ್ರೆಸ್ ವೆ ಸಂಚಾರಕ್ಕೆ ಟೋಲ್ ಟ್ಯಾಕ್ಸ್ - ಮೇ 1 ರಿಂದ ಪೂರ್ವಾಂಚಲ್ ಎಕ್ಸ್ ಪ್ರೆಸ್ ಮೇಲೆ ಸಂಚಾರಕ್ಕೆ ಟೋಲ್ ಟ್ಯಾಕ್ಸ್ ಅನ್ವಯಿಸಲಿದೆ. ಈ ಎಕ್ಸ್ ಪ್ರೆಸ್ ವೆ ಮೇಲೆ ಒಟ್ಟು ಟೋಲ್ ಟ್ಯಾಕ್ಸ್ ರೂ.833 ಇರಲಿದೆ. ಆದರೆ, ಶೇ.25 ವಿನಾಯ್ತಿಯ ನಂತರೆ ನೀವು ರೂ.625 ಪಾವತಿಸಬಹುದು. ಯುಪಿ ಚುನಾವಣೆಗಳ ಹಿನ್ನೆಲೆ ಇದುವರೆಗೆ ಈ ಎಕ್ಸ್ ಪ್ರೆಸ್ ವೆ ಸಂಚಾರಕ್ಕೆ ಯಾವುದೇ ರೀತಿಯ ಟೋಲ್ ಟ್ಯಾಕ್ಸ್ ಅನ್ವಯಿಸಲಾಗಿರಲಿಲ್ಲ.
5. 13 ದಿನಗಳ ಕಾಲ ಬ್ಯಾಂಕ್ ಬಂದ್ ಇರಲಿದೆ - ಮೇ ತಿಂಗಳ ಆರಂಭ ಶನಿವಾರ-ಭಾನುವಾರದ ರಜೆಗಳನ್ನು ಒಳಗೊಂಡಂತೆ ತಿಂಗಳಲ್ಲಿ ಒಟ್ಟು 13 ದಿನಗಳು ಬ್ಯಾಂಕ್ ಗಳಿಗೆ ರಜೆ ಇರಲಿದೆ. ಈ ರಜೆಗಳಲ್ಲಿ 7 ರಜೆಗಳು ಶನಿವಾರ ಹಾಗೂ ಭಾನುವಾರದ ರಜಾದಿನಗಳಾಗಿದ್ದರೆ, ಮೇ 2 ರಂದು ಪರಶುರಾಮ ಜಯಂತಿ, ಮೇ 3 ರಂದು ಈದ್-ಉಲ್-ಫಿತ್ರ ರಜೆ ಶಾಮೀಲಾಗಿವೆ. ಕೆಲ ರಾಜ್ಯಗಳಲ್ಲಿ ನಾಲ್ಕನೇ ತಾರೀಖಿಗೂ ಕೂಡ ಈದ್ ರಜೆ ಇರಲಿದೆ. ಮೇ 9ರಂದು ಗುರು ರಬಿಂದ್ರನಾಥ್ ಜಯಂತಿಯ ನಿಮಿತ್ತ ಪಶ್ಚಿಮ ಬಂಗಾಳದಲ್ಲಿ ರಜೆ ಇರಲಿದೆ. ಮೇ 16ರಂದು ಬುಧ ಹುಣ್ಣಿಮೆ ಹಾಗೂ ಮೇ 24 ರಂದು ಕಾಜಿ ನಜರುಲ್ ಇಸ್ಲಾಂ ಜನುಮದಿನದ ಪ್ರಯುಕ್ತ ರಜೆ ಇರಲಿದೆ.