ಇದ್ದಿಲನ್ನು ಈ ಎಣ್ಣೆಯಲ್ಲಿ ಬೆರೆಸಿ ಕೂದಲಿಗೆ ಹಚ್ಚಿ: ಕೇವಲ 10 ನಿಮಿಷದಲ್ಲಿ ಬುಡದಿಂದಲೇ ಕಡು ಕಪ್ಪಾಗುತ್ತೆ ಬಿಳಿಕೂದಲು
ಕೂದಲಿನ ಶುಷ್ಕತೆಯನ್ನು ಹೋಗಲಾಡಿಸಲು ಕೂದಲನ್ನು ಡಿಟಾಕ್ಸ್ ಮಾಡುವ ಅವಶ್ಯಕತೆಯಿದೆ. ಕೂದಲಿನ ನಿರ್ವಿಶೀಕರಣಕ್ಕೆ ಇದ್ದಿಲು ತುಂಬಾ ಪ್ರಯೋಜನಕಾರಿ. ಇದ್ದಿಲನ್ನು ವಾರಕ್ಕೆ ಎರಡು ಬಾರಿ ಕೂದಲಿಗೆ ಹಚ್ಚಿದರೆ ಒಣ ಮತ್ತು ನಿರ್ಜೀವ ಕೂದಲಿನ ಸಮಸ್ಯೆಯನ್ನು ಹೋಗಲಾಡಿಸಬಹುದು.
ಹೆಚ್ಚಿನ ಜನರು ಚಾರ್ಕೋಲ್ ಹೇರ್ ಮಾಸ್ಕ್ ಅನ್ನು ಮಾರುಕಟ್ಟೆಯಿಂದ ಖರೀದಿಸಿ ಬಳಸುತ್ತಾರೆ. ಆದರೆ ಅವುಗಳಲ್ಲಿ ಹೆಚ್ಚಿನ ಪ್ರಮಾಣದ ರಾಸಾಯನಿಕಗಳಿರುತ್ತವೆ, ಇದರ ಬಳಕೆ ಇನ್ನಿತರ ಸಮಸ್ಯೆಗಳಿಗೆ ಕಾರಣವಾಗಬಹುದು.
ಹೀಗಾಗಿ ಮನೆಯಲ್ಲಿ ತಯಾರಿಸಿದ ಚಾರ್ಕೋಲ್ ಹೇರ್ ಮಾಸ್ಕ್ ಕೂದಲಿನ ಅನೇಕ ಸಮಸ್ಯೆಗೆ ಪರಿಹಾರ ನೀಡಬಹುದು. ಆದ್ದರಿಂದ ಮನೆಯಲ್ಲಿ ಚಾರ್ಕೋಲ್ ಹೇರ್ ಮಾಸ್ಕ್ ಹೇಗೆ ತಯಾರಿಸಬಹುದು ಎಂಬುದರ ಬಗ್ಗೆ ತಿಳಿದುಕೊಳ್ಳೋಣ.
ನೆತ್ತಿಯಿಂದ ಕೊಳೆಯನ್ನು ತೆಗೆದು ಹಾಕುವಲ್ಲಿ ಇದ್ದಿಲು ಸಹಾಯ ಮಾಡುತ್ತದೆ. ಇದು ಕೂದಲಿನಿಂದ ಹೆಚ್ಚುವರಿ ಎಣ್ಣೆಯನ್ನು ತೆಗೆದುಹಾಕುವುದಲ್ಲದೆ, ತುರಿಕೆ, ನೆತ್ತಿಯಲ್ಲಿ ಸುಡುವ ಸಂವೇದನೆ ಮತ್ತು ಕೂದಲಿನ ಶುಷ್ಕತೆಯ ಸಮಸ್ಯೆಗೂ ಪರಿಹಾರ ನೀಡುತ್ತದೆ.
ಇದ್ದಿಲು ಮತ್ತು ತೆಂಗಿನೆಣ್ಣೆಯ ಹೇರ್ ಮಾಸ್ಕ್, ಬಿಳಿಕೂದಲನ್ನು ಕ್ಷಣದಲ್ಲಿ ಕಪ್ಪಾಗಿಸಲು ಸಹಾಯ ಮಾಡುತ್ತದೆ. ಜೊತೆಗೆ ನೆತ್ತಿಯನ್ನು ಸ್ವಚ್ಛಗೊಳಿಸಲು ಸಹಕಾರಿಯಾಗಿದೆ. 2 ರಿಂದ 3 ಚಮಚ ತೆಂಗಿನ ಎಣ್ಣೆಯನ್ನು 3 ಚಮಚ ಇದ್ದಿಲು ಪುಡಿಯೊಂದಿಗೆ ಮಿಶ್ರಣ ಮಾಡಿ. ಇದಕ್ಕೂ ಮೊದಲು, ತೆಂಗಿನ ಎಣ್ಣೆಯನ್ನು ಸ್ಪಲ್ಪ ಬಿಸಿ ಮಾಡಿಕೊಳ್ಳಿ. ಈ ಪೇಸ್ಟ್ ತಯಾರಿಸಿ ಕೂದಲಿನ ಬೇರಿನಿಂದ ತುದಿಯವರೆಗೆ ಹಚ್ಚಿ. 20 ನಿಮಿಷಗಳ ಕಾಲ ಇರಿಸಿ. ನಂತರ ಶಾಂಪೂ ಬಳಸಿ ಕೂದಲನ್ನು ತೊಳೆಯಿರಿ.
ಇದ್ದಿಲು ಮತ್ತು ಅಲೋವೆರಾ ಹೇರ್ ಮಾಸ್ಕ್ ಮಾಡಲು, ಒಂದು ಬಟ್ಟಲಿನಲ್ಲಿ 2 ರಿಂದ 3 ಸ್ಪೂನ್ ಇದ್ದಿಲು ತೆಗೆದುಕೊಳ್ಳಿ. ಈಗ 3 ಚಮಚ ಅಲೋವೆರಾ ಜೆಲ್ ಮತ್ತು 1 ಚಮಚ ಅಡಿಗೆ ಸೋಡಾವನ್ನು ಸೇರಿಸಿ. ಪೇಸ್ಟ್ ತಯಾರಿಸಲು ಅಗತ್ಯವಿರುವಷ್ಟು ನೀರು ಸೇರಿಸಿ. ಈ ಪೇಸ್ಟ್ ಅನ್ನು ನೆತ್ತಿಯ ಮೇಲೆ 20 ರಿಂದ 25 ನಿಮಿಷಗಳ ಕಾಲ ಹಚ್ಚಿ ಬಿಡಿ. ನಂತರ ಸೌಮ್ಯವಾದ ಶಾಂಪೂ ಬಳಸಿ ಕೂದಲನ್ನು ತೊಳೆಯಿರಿ.
ಇದ್ದಿಲು ಮತ್ತು ಮೊಟ್ಟೆಯ ಹೇರ್ ಮಾಸ್ಕ್ ತಯಾರಿಸಲು ಒಂದು ಬಟ್ಟಲಿನಲ್ಲಿ ಮೊಟ್ಟೆಯನ್ನು ಹಾಕಿ, ಅದಕ್ಕೆ 2 ಚಮಚ ಇದ್ದಿಲು ಮತ್ತು 3 ರಿಂದ 4 ಚಮಚ ಮೊಸರು ಸೇರಿಸಿ. ಎಲ್ಲಾ ಪದಾರ್ಥಗಳನ್ನು ಮಿಶ್ರಣ ಮಾಡುವ ಮೂಲಕ ಪೇಸ್ಟ್ ತಯಾರಿಸಿ. ನಂತರ ಕೂದಲಿಗೆ ಹಚ್ಚಿ 20 ರಿಂದ 25 ನಿಮಿಷಗಳ ಕಾಲ ಬಿಡಿ. ನಂತರ ಸೌಮ್ಯವಾದ ಶಾಂಪೂವಿನಿಂದ ಕೂದಲನ್ನು ತೊಳೆಯಿರಿ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.