ನಟ ಕಮಲ್‌ ಹಾಸನ್‌ ಅಣ್ಣ ಕನ್ನಡದ ಜನಪ್ರಿಯ ನಟ: ರಾಷ್ಟ್ರಪ್ರಶಸ್ತಿ ಗೆದ್ದ ಹೆಸರಾಂತ ಹೀರೋ... ನಟಿ ಸುಹಾಸಿನಿಯ ತಂದೆಯೂ ಹೌದು: ಯಾರೆಂದು ಗೆಸ್‌ ಮಾಡಿ

Mon, 02 Sep 2024-2:52 pm,

ಕನ್ನಡ ಸಿನಿಮಾ ರಂಗ ಅದೆಷ್ಟೋ ದಿಗ್ಗಜ ನಟರನ್ನು ಕಂಡಿದೆ. ಆದರೆ ಅವರಲ್ಲಿ ಕೆಲವೇ ಕೆಲ ನಟರು ಅತ್ಯುತ್ತಮ ನಟನೆಗಾಗಿ ರಾಷ್ಟ್ರಪ್ರಶಸ್ತಿ ಗೆದ್ದಿರುವುದು. ಅಂದಹಾಗೆ ಈ ವರದಿಯಲ್ಲಿ ನಾವಿಂದು ಮಾತನಾಡಲಿರುವುದು ಕೂಡ ಅಂತಹದ್ದೇ ಓರ್ವ ದಿಗ್ಗಜನ ಬಗ್ಗೆ.

 

ಚಾರುಹಾಸನ್ ಶ್ರೀನಿವಾಸನ್. ಹುಟ್ಟಿದ್ದು 5 ಜನವರಿ 1931ರಲ್ಲಿ. ಭಾರತೀಯ ನಟ, ನಿರ್ದೇಶಕ ಮತ್ತು ನಿವೃತ್ತ ವಕೀಲರಾದ ಇವರು ತಮಿಳು, ಕನ್ನಡ, ತೆಲುಗು, ಮಲಯಾಳಂ ಮತ್ತು ಹಿಂದಿ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡ ಚಲನಚಿತ್ರ ʼತಬರನ ಕಥೆʼ (1987) ಗಾಗಿ ಅತ್ಯುತ್ತಮ ನಟ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮತ್ತು ಅತ್ಯುತ್ತಮ ನಟ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದಿದ್ದಾರೆ.

 

ಅಂದಹಾಗೆ ಚಾರುಹಾಸನ್ ಅವರು ಹಿರಿಯ ನಟ ಕಮಲ್ ಹಾಸನ್ ಅವರ ಹಿರಿಯ ಸಹೋದರ ಮತ್ತು ನಟಿ ಸುಹಾಸಿನಿಯ ತಂದೆ.

 

ಚಾರುಹಾಸನ್ 5 ಜನವರಿ 1931 ರಂದು ವಕೀಲ ಮತ್ತು ಭಾರತೀಯ ಸ್ವಾತಂತ್ರ್ಯ ಹೋರಾಟಗಾರ ಡಿ. ಶ್ರೀನಿವಾಸನ್ ಮತ್ತು ಅವರ ಪತ್ನಿ ರಾಜಲಕ್ಷ್ಮಿ ಪುತ್ರನಾಗಿ ಜನಿಸಿದರು. ಇವರು ಕಮಲ್ ಹಾಸನ್‌ʼಗಿಂತ ಇಪ್ಪತ್ತಮೂರು ವರ್ಷ ಹಿರಿಯರಾಗಿದ್ದರು.

 

ಚಾರುಹಾಸನ್ ಎಲ್ಲಾ ಮಕ್ಕಳಂತೆ ವಿದ್ಯಾಭ್ಯಾಸ ಪಡೆಯಲಿಲ್ಲ. ಒಂದೊಮ್ಮೆ ಅಪಘಾತಕ್ಕೀಡಾಗಿದ್ದ ಅವರಿಗೆ ಮನೆಯಲ್ಲಿಯೇ ಶಿಕ್ಷಣದ ವ್ಯವಸ್ಥೆ ಮಾಡಲಾಗಿತ್ತು. ಅದಾದ ನಂತರ 5 ನೇ ತರಗತಿಗೆ ನೇರವಾಗಿ ಸೇರ್ಪಡೆಗೊಂಡರು. 1949 ರಲ್ಲಿ, ಚಾರುಹಾಸನ್ ಬೆಳಗಾವಿಯ ರಾಜಾ ಲಖಮಗೌಡ ಕಾನೂನು ಕಾಲೇಜು ಸೇರಿದರು. ಅಲ್ಲಿಂದ 1951 ರಲ್ಲಿ ವಕೀಲರಾಗಿ ಅರ್ಹತೆ ಪಡೆದರು.

 

ಚಾರುಹಾಸನ್‌ʼಗೆ ಬಾಲ್ಯದಿಂದಲೂ ಸಿನಿಮಾಗಳಲ್ಲಿ ಆಸಕ್ತಿ ಇತ್ತು. 1940 ರ ದಶಕದ ಉತ್ತರಾರ್ಧದಲ್ಲಿ, ಅವರು ದಿನಕ್ಕೆ ಎರಡು ವಿದೇಶಿ ಚಲನಚಿತ್ರಗಳನ್ನು ವೀಕ್ಷಿಸುತ್ತಿದ್ದರಂತೆ. ಕಿರಿಯ ಸಹೋದರ ಕಮಲ್ ಹಾಸನ್ ಅವರು ಬಾಲನಟನಾಗಿ ಚಲನಚಿತ್ರಗಳಲ್ಲಿ ನಟಿಸಲು ಪ್ರಾರಂಭಿಸಿದಾಗ, ಚಾರುಹಾಸನ್ ಅವರನ್ನು ನೋಡಿಕೊಳ್ಳುತ್ತಿದ್ದರು.

 

ಅಂತಿಮವಾಗಿ ಚಾರುಹಾಸನ್ 1979 ರಲ್ಲಿ ಮಹೇಂದ್ರನ್ ನಿರ್ದೇಶಿಸಿದ ತಮಿಳು ಚಲನಚಿತ್ರ ಉತಿರಿಪೂಕ್ಕಲ್‌ʼಗೆ ಪಾದಾರ್ಪಣೆ ಮಾಡಿದರು. ಇದು ಪುದುಮೈಪಿತನ್ ಅವರ ಸಣ್ಣ ಕಥೆಯನ್ನು ಆಧರಿಸಿದೆ. ಅಂದಿನಿಂದ, ಅವರು 120 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಪೋಷಕ ಅಥವಾ ನೆಗೆಟಿವ್‌ ಪಾತ್ರಗಳನ್ನು ನಿರ್ವಹಿಸಿದ್ದಾರೆ,

 

ಚಾರುಹಾಸನ್ 1953ರಲ್ಲಿ ಕೋಮಲಂ ಎಂಬವರನ್ನು ವಿವಾಹವಾದರು. ಈ ದಂಪತಿಗೆ ನಂದಿನಿ, ಸುಹಾಸಿನಿ ಮತ್ತು ಸುಭಾಸಿನಿ ಎಂಬ ಮೂವರು ಪುತ್ರಿಯರಿದ್ದಾರೆ. ಇನ್ನು ಸುಹಾಸಿನಿ ನಟ ಮತ್ತು ಚಲನಚಿತ್ರ ನಿರ್ದೇಶಕ ಮಣಿರತ್ನಂ ಅವರನ್ನು ವಿವಾಹವಾಗಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link