ಕೊಳವೆಬಾವಿಗೆ ಬಿದ್ದ ಬಾಲಕ: ಛತ್ತೀಸ್‌ಗಡದಲ್ಲಿ ನಡೆದ ಅತಿದೊಡ್ಡ ಕಾರ್ಯಾಚರಣೆಯ ಫೋಟೋಸ್
ರಾಹುಲ್ ಸಾಹು ಎಂಬ ಬಾಲಕ 80 ಅಡಿ ಆಳದ ತೆರೆದ ಬಾವಿಗೆ ಬಿದ್ದಿದ್ದಾನೆ.
ರಾಹುಲ್‌ನನ್ನು ಕಾಪಾಡಲು ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಈ ಸಮಯದಲ್ಲಿ ಎನ್‌ಡಿಆರ್‌ಎಫ್ ಸಿಬ್ಬಂದಿ ಬಿ ಅನಿಲ್ (ಆಂಧ್ರ ಪ್ರದೇಶ) ಮತ್ತು ಕೆಎಪಿಎಸ್‌ಇ ಎಲ್‌ಬಿ(ಮಹಾರಾಷ್ಟ್ರ)ಯ ಸಿಬ್ಬಂದಿ ಬಾಲಕನ ಚಲನವಲನದ ಮೇಲೆ ಕಣ್ಣಿಟ್ಟಿದ್ದಾರೆ.
ಕಳೆದ 3 ದಿನಗಳಿಂದ ಸುಮಾರು 300 ಅಧಿಕಾರಿಗಳು, ಉದ್ಯೋಗಿಗಳು, ಕಾರ್ಮಿಕರು ರಾಹುಲ್ ರಕ್ಷಣೆಯಲ್ಲಿ ತೊಡಗಿದ್ದಾರೆ.
ಬಿಲಾಸ್‌ಪುರದಿಂದ ರಕ್ಷಣಾ ಸ್ಥಳಕ್ಕೆ ಡ್ರಿಲ್ ಯಂತ್ರ ತಲುಪಿದೆ. ಈ ಯಂತ್ರದ ಮೂಲಕ ಬಂಡೆಯನ್ನು ಕತ್ತರಿಸಿ ಬೋರ್‌ವೆಲ್‌ನಲ್ಲಿ ಸಿಲುಕಿರುವ ರಾಹುಲ್‌ನನ್ನು ಹೊರಕರೆತರುವ ಪ್ರಯತ್ನ ಮಾಡಲಾಗುತ್ತಿದೆ.
ರಾಹುಲ್ ಅವರನ್ನು ರಕ್ಷಿಸಲು ಎನ್‌ಡಿಆರ್‌ಎಫ್ ತಂಡ ಹಗಲಿರುಳು ರಕ್ಷಣಾ ಕಾರ್ಯದಲ್ಲಿ ನಿರತವಾಗಿತ್ತು.
ಬಂಡೆ ಕೊರೆಯುವ ವೇಳೆ ಅಡೆತಡೆ ಉಂಟಾದ್ದರಿಂದ ಆತನನ್ನು ಹೊರತೆಗೆಯಲು ಕೊಂಡ ಸಮಯ ತೆಗೆದುಕೊಳ್ಳುತ್ತಿದೆ
ಭಾನುವಾರ ರಾತ್ರಿಯಿಂದಲೇ ಸಿಎಂಎಚ್‌ಒ, ಸಿವಿಲ್ ಸರ್ಜನ್, ಬಿಎಂಒ ಸೇರಿದಂತೆ ವೈದ್ಯರು, ಸ್ಟಾಫ್ ನರ್ಸ್‌ಗಳು ತುರ್ತು ವೈದ್ಯಕೀಯ ವ್ಯವಸ್ಥೆಗೆ ಸಿದ್ಧರಾಗಿದ್ದಾರೆ.
ಸಿಎಂ ಭೂಪೇಶ್ ಬಘೇಲ್ ಅವರು ರಾಹುಲ್ ಪೋಷಕರೊಂದಿಗೆ ವಿಡಿಯೋ ಕಾಲ್ ಮೂಲಕ ಮಾತುಕತೆ ಮುಂದುವರಿಸಿದ್ದಾರೆ.