Chaturgrahi Yog: ಚತುರ್ಗ್ರಾಹಿ ಯೋಗದಿಂದ ಈ 4 ರಾಶಿಯವರ ಬಾಳೇ ಬಂಗಾರ, ಸಂಪತ್ತು ವೃದ್ಧಿ
ಈಗಾಗಲೇ ಗುರು ವೃಷಭ ರಾಶಿಯನ್ನು ಪ್ರವೇಶಿಸಿದ್ದಾನೆ. ಇದರ ಬೆನ್ನಲ್ಲೇ ಸೂರ್ಯ, ಬುಧ ವೃಷಭ ರಾಶಿಗೆ ಪದಾರ್ಪಣೆ ಮಾಡಲಿದ್ದಾರೆ. ಮೇ 19 ರಂದು ಐಷಾರಾಮಿ ಜೀವನಕಾರಕನಾದ ಶುಕ್ರನು ಕೂಡ ಇದೇ ರಾಶಿಗೆ ಪ್ರವೇಶಿಸಲಿದ್ದಾನೆ. ಇದರಿಂದಾಗಿ, ಚತುರ್ಗ್ರಾಹಿ ಯೋಗ ನಿರ್ಮಾಣವಾಗಲಿದೆ.
ವೃಷಭ ರಾಶಿಯಲ್ಲಿ ಗುರು ಮತ್ತು ಶುಕ್ರ ಸಂಯೋಗದಿಂದ ಗಜಲಕ್ಷ್ಮಿ ರಾಜಯೋಗ, ಸೂರ್ಯ ಮತ್ತು ಬುಧ ಸಂಯೋಗದಿಂದ ಬುಧಾದಿತ್ಯ ರಾಜಯೋಗ, ಶುಕ್ರ ಮತ್ತು ಸೂರ್ಯನ ಸಂಯೋಗದೊಂದಿಗೆ ಶುಕ್ರಾದಿತ್ಯ ಯೋಗ ನಿರ್ಮಾಣವಾಗುತ್ತಿದೆ.
ಚತುರ್ಗ್ರಾಹಿ ಯೋಗದ ಪರಿಣಾಮ ಎಲ್ಲಾ 12 ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೂ, ನಾಲ್ಕು ರಾಶಿಯ ಜನರಿಗೆ ಇದು ಭಾರೀ ಅದೃಷ್ಟದ ಸಮಯ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ...
ಸ್ವ ರಾಶಿಯಲ್ಲಿ ಗುರು, ಶುಕ್ರ, ಬುಧ ಮತ್ತು ಸೂರ್ಯನ ಉಪಸ್ಥಿತಿಯಿಂದ ನಿರ್ಮಾಣವಾಗುತ್ತಿರುವ ಚತುರ್ಗ್ರಾಹಿ ಯೋಗವು ವೃಷಭ ರಾಶಿಯ ಜನರಿಗೆ ಭಾರೀ ಲಾಭವನ್ನು ನೀಡಲಿದೆ. ಈ ಸಮಯದಲ್ಲಿ ಉದ್ಯೋಗ ವ್ಯವಹಾರದಲ್ಲಿ ಭಾರೀ ಲಾಭವನ್ನು ನಿರೀಕ್ಷಿಸಬಹುದು. ಉದ್ಯೋಗಸ್ಥರಿಗೆ ಬಡ್ತಿ ಸಂಭವವಿದ್ದು, ಆರ್ಥಿಕ ಸ್ಥೀಟ್ ಸುಧಾರಿಸಲಿದೆ.
ಚತುರ್ಗ್ರಾಹಿ ಯೋಗವು ಕನ್ಯಾ ರಾಶಿಯವರಿಗೆ ಜೀವನದ ಪ್ರತಿ ಹಂತದಲ್ಲೂ ಯಶಸ್ಸನ್ನು ನೀಡಲಿದೆ. ಈ ವೇಳೆ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದುವರು. ಉದ್ಯೋಗ ಕ್ಷೇತ್ರದಲ್ಲಿ ವಿದೇಶಕ್ಕೆ ಹೋಗುವ ಕನಸು ನನಸಾಗಲಿದೆ. ವಿವಾಹಿತರಿಗೆ ಸಂತಾನ ಯೋಗವೂ ಇದೆ.
ಚತುರ್ಗ್ರಾಹಿ ಯೋಗವು ವೃಶ್ಚಿಕ ರಾಶಿಯವರಿಗೆ ವೈಯಕ್ತಿಕ ಜೀವನದಲ್ಲಿ ಸುಖ-ಸಂಪತ್ತನ್ನು ಹೆಚ್ಚಿಸಲಿದೆ. ಕೌಟುಂಬಿಕ ಜೀವನ ಉತ್ತಂವಾಗಿರುತ್ತದೆ. ವೃತ್ತಿ ವ್ಯವಹಾರದಲ್ಲಿ ಸ್ವಲ್ಪ ಎಚ್ಚರಿಕೆಯಿಂದ ಕೆಲಸ ಮಾಡಿದರೆ ಹೆಸರು, ಕೀರ್ತಿಯನ್ನು ಪಡೆಯಬಹುದು. ಪೂರ್ವಿಕರ ಆಸ್ತಿಯಿಂದ ಲಾಭವಾಗಲಿದೆ.
ಚತುರ್ಗ್ರಾಹಿ ಯೋಗವು ಮಕರ ರಾಶಿಯವರಿಗೆ ಅನುಕೂಲಕರ ಸಮಯ ಎಂತಲೇ ಹೇಳಬಹುದು. ಉದ್ಯೋಗಸ್ಥರಿಗೆ ಬಡ್ತಿ ಸಾಧ್ಯತೆ ಇದೆ. ಹೊಸ ಕೆಲಸಕ್ಕಾಗಿ ಪ್ರಯತ್ನಿಸುತ್ತಿದ್ದರೆ ನೆಚ್ಚಿನ ಉದ್ಯೋಗ ಪ್ರಾಪ್ತಿ. ಅವಿವಾಹಿತರಿಗೆ ಉದ್ಯೋಗ ರಸ್ತಾಪಗಳು ಬರಬಹುದು. ವ್ಯಾಪಾರಸ್ಥರು ಬಂಪರ್ ಲಾಭವನ್ನು ನಿರೀಕ್ಷಿಸಬಹುದು.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.