50 ವರ್ಷಗಳ ಬಳಿಕ ಈ ರಾಶಿಗೆ ಕೂಡಿಬಂತು ರಾಜಯೋಗ: ಎಲ್ಲದರಲ್ಲೂ ಯಶಸ್ಸು ಸಿಗುವ ಕಾಲ! ಸಂಪತ್ತು, ಕೀರ್ತಿ, ಪ್ರತಿಷ್ಠೆ ಒಟ್ಟಾಗಿ ಲಭಿಸುವುದು ಖಚಿತ
ಪ್ರತಿಯೊಂದು ಗ್ರಹಗಳು ಸಹ ಕಾಲಕ್ಕೆ ಅನುಗುಣವಾಗಿ ತನ್ನ ಸ್ಥಾನ ಬದಲಾವಣೆ ಮಾಡುತ್ತಿರುತ್ತವೆ. ಈ ಸಂದರ್ಭಗಳಲ್ಲಿ ಶುಭ ಅಥವಾ ಅಶುಭ ಯೋಗಗಳು ಸೃಷ್ಟಿಯಾಗುತ್ತವೆ. ಇನ್ನು ಕೆಲವು ಗ್ರಹಗಳ ಅಪರೂಪದ ಸಂಯೋಜನೆಯಿಂದ ಆ ಯೋಗಗಳಲ್ಲಿ ಕೆಲವು ಹಲವು ವರ್ಷಗಳ ನಂತರ ರೂಪುಗೊಳ್ಳುತ್ತವೆ. ಅಂತಹ ಯೋಗಗಳ ಪರಿಣಾಮವು ಎಲ್ಲಾ ರಾಶಿಗಳಲ್ಲಿ ಕಂಡುಬರುತ್ತದೆ. ಈ ರೀತಿಯಾಗಿ ಆಗಸ್ಟ್ʼನಲ್ಲಿ ಸಿಂಹ ರಾಶಿಯಲ್ಲಿ ಚತುರ್ಗ್ರಹಿ ಯೋಗವು ರೂಪುಗೊಳ್ಳುತ್ತದೆ. ಈ ಯೋಗವು ಬುಧ, ಚಂದ್ರ, ಶುಕ್ರ ಮತ್ತು ಸೂರ್ಯನ ಸಂಯೋಜನೆಯಿಂದ ರೂಪುಗೊಂಡಿದೆ.
ಆಗಸ್ಟ್ʼನಲ್ಲಿ ಸಿಂಹ ರಾಶಿಯಲ್ಲಿ ಬುಧ, ಚಂದ್ರ, ಶುಕ್ರ ಮತ್ತು ಸೂರ್ಯನ ಸಂಯೋಜನೆಯಿಂದ ಚತುರ್ಗ್ರಹ ಯೋಗವು ರೂಪುಗೊಳ್ಳುತ್ತದೆ. ಈ ಮಂಗಳಕರ ಯೋಗದ ಪ್ರಭಾವವು ಎಲ್ಲಾ ರಾಶಿಗಳಲ್ಲಿ ಕಂಡುಬಂದರೂ, ಕೆಲವು ರಾಶಿಗಳ ಜನರು ತುಂಬಾ ಅದೃಷ್ಟಶಾಲಿಯಾಗುತ್ತಾರೆ.
ಜುಲೈ 19 ರಂದು ಸಿಂಹ ರಾಶಿಗೆ ಪ್ರವೇಶಿಸಿರುವ ಬುಧ ಆಗಸ್ಟ್ 22 ರವರೆಗೆ ಈ ರಾಶಿಯ ಮೂಲಕ ಪ್ರಯಾಣಿಸುತ್ತಾನೆ. ನಂತರ ಆಗಸ್ಟ್ 16 ರಂದು ಸೂರ್ಯನು ಸಿಂಹ ರಾಶಿಗೆ ಸಾಗುತ್ತಾನೆ. ಶುಕ್ರವು ಜುಲೈ 31 ರಿಂದ ಆಗಸ್ಟ್ 25 ರವರೆಗೆ ಸಿಂಹ ರಾಶಿಯಲ್ಲಿ ಗೋಚರವಾಗಲಿದೆ.
ಇಂತಹ ಪರಿಸ್ಥಿತಿಯಲ್ಲಿ ಆಗಸ್ಟ್ 16ರ ನಂತರ ಸಿಂಹರಾಶಿಯಲ್ಲಿರುವ ಸೂರ್ಯ, ಶುಕ್ರ, ಬುಧ, ಮತ್ತು ಚಂದ್ರ ಗ್ರಹಗಳು ಚತುರ್ಗ್ರಹ ಯೋಗವನ್ನು ರೂಪಿಸುತ್ತವೆ. 50 ವರ್ಷಗಳ ನಂತರ ಈ ಅಪರೂಪದ ಯೋಗ ಸಿಂಹ ರಾಶಿಯಲ್ಲಿ ಸೃಷ್ಟಿಯಾಗಿದೆ.
ಚತುರ್ಗ್ರಹ ಯೋಗವು ಸಿಂಹ ರಾಶಿಯವರಿಗೆ ಅದೃಷ್ಟದ ಸಂಪೂರ್ಣ ಬೆಂಬಲವನ್ನು ನೀಡುತ್ತದೆ. ವೃತ್ತಿ ಮತ್ತು ಉದ್ಯೋಗದಲ್ಲಿ ಉತ್ತಮ ಬದಲಾವಣೆಗಳನ್ನು ಪಡೆಯಬಹುದು. ಕೆಲಸದಲ್ಲಿ ಬಡ್ತಿಯೊಂದಿಗೆ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಲಿದೆ. ವಿವಾಹ ಯೋಗ ಇರುತ್ತದೆ. ದಾಂಪತ್ಯ ಜೀವನದಲ್ಲಿ ಸಂತಸ ಹೆಚ್ಚಾಗಲಿದೆ. ಆರೋಗ್ಯವೂ ಉತ್ತಮವಾಗಿರುತ್ತದೆ.
ಚತುರ್ಗ್ರಹ ಯೋಗದಿಂದಾಗಿ ವೃಶ್ಚಿಕ ರಾಶಿಯವರು ಕೆಲಸದಲ್ಲಿ ಮಹತ್ತರವಾದ ಸಾಧನೆ ಮಾಡುವರು. ವ್ಯಾಪಾರದಲ್ಲಿ ಸುಧಾರಣೆ ಕಂಡುಬರಲಿದೆ. ಹಣ ಗಳಿಸಲು ನಿಮಗೆ ಅನೇಕ ಸುವರ್ಣಾವಕಾಶಗಳು ಸಿಗುತ್ತವೆ. ವ್ಯಾಪಾರದಲ್ಲಿ ಲಾಭ ಹೆಚ್ಚಾಗುತ್ತದೆ.
ಚತುರ್ಗ್ರಹ ಯೋಗವು ಧನು ರಾಶಿಯವರಿಗೆ ಕಚೇರಿಯಲ್ಲಿ ಬಡ್ತಿ ಅಥವಾ ಕೆಲವು ಅಮೂಲ್ಯ ಉಡುಗೊರೆಗಳನ್ನು ನೀಡುತ್ತದೆ. ಮನೆಯಲ್ಲಿ ಕೆಲವು ಧಾರ್ಮಿಕ ಕಾರ್ಯಗಳು ನಡೆಯಬಹುದು. ಷೇರು ಮಾರುಕಟ್ಟೆ, ಲಾಟರಿ ಇತ್ಯಾದಿಗಳಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭ ಪಡೆಯಬಹುದು.
ಸೂಚನೆ: ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ಈ ಮಾಹಿತಿಯನ್ನು ಜೀ ಮೀಡಿಯಾ ಖಚಿತಪಡಿಸಿಲ್ಲ.