100 ವರ್ಷಗಳ ನಂತರ ಚತುರ್ಗ್ರಾಹಿ ಯೋಗ! ಈ ರಾಶಿಯವರ ಜೀವನದಲ್ಲಿ ಹರಿದು ಬರುವುದು ಸಂಪತ್ತು !ಸಿಗುವುದು ಉನ್ನತ ಸ್ಥಾನಮಾನ

Mon, 16 Oct 2023-11:04 am,

ಅಕ್ಟೋಬರ್ 18 ರಂದು ಸೂರ್ಯ ,ಅಕ್ಟೋಬರ್ 19 ರಂದು ಬುಧ ಗ್ರಹ ತುಲಾ ರಾಶಿಯನ್ನು ಪ್ರವೇಶಿಸಲಿದೆ. ಮಂಗಳ ಮತ್ತು ಕೇತು ಗ್ರಹಗಳು ಈಗಾಗಲೇ ತುಲಾ ರಾಶಿಯಲ್ಲಿವೆ. ಇದರಿಂದ ತುಲಾ ರಾಶಿಯಲ್ಲಿ ಚತುರ್ಗ್ರಾಹಿ ಯೋಗ ನಿರ್ಮಾಣವಾಗುತ್ತದೆ.   

ತುಲಾ ರಾಶಿಯಲ್ಲಿ ಸೂರ್ಯ, ಮಂಗಳ, ಕೇತು ಮತ್ತು ಬುಧ ಸಂಯೋಗದಿಂದ 100 ವರ್ಷಗಳ ನಂತರ ಚತುರ್ಗ್ರಾಹಿ ಯೋಗವು ರೂಪುಗೊಳ್ಳುತ್ತಿದೆ. ಈ ಚತುರ್ಗ್ರಾಹಿ ಯೋಗದ ಪ್ರಭಾವದಿಂದ, ಕೆಲವು ರಾಶಿಯವರ ಅದೃಷ್ಟ ಬೆಳಗುವುದು. ಇದ್ದಕ್ಕಿದ್ದಂತೆ ಸಂಪತ್ತು ಪ್ರಗತಿ ಹೊಂದುವುದು ಸಾಧ್ಯವಾಗುವುದು. 

ಮೇಷ ರಾಶಿ :ಚತುರ್ಗ್ರಾಹಿ ಯೋಗದ ರಚನೆಯು ಮೇಷ ರಾಶಿಯ ಜನರಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಈ ರಾಶಿಯವರು ಯಾವುದೇ ಕೆಲಸ ಮಾಡಿದರೂ ಅದರಲ್ಲಿ ಯಶಸ್ಸು ಸಿಗುವುದು. ಜನರು ಪಾಲುದಾರಿಕೆ ಕೆಲಸದಲ್ಲಿ  ಪ್ರಗತಿ ಇರುವುದು. ದಾಂಪತ್ಯ ಜೀವನದಲ್ಲಿ ಸಂತಸ ಹೆಚ್ಚಾಗಲಿದೆ. ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಸಂಬಂಧವು ಸೌಹಾರ್ದಯುತವಾಗಿರುತ್ತದೆ. 

ಮಕರ ರಾಶಿ :ವೃತ್ತಿ ಜೀವನದಲ್ಲಿ ಉತ್ತಮ ಪ್ರಗತಿ ಸಿಗಲಿದೆ. ಈ ರಾಶಿಯವರು ಉದ್ಯೋಗ ಮತ್ತು ವ್ಯವಹಾರದಲ್ಲಿ ದೊಡ್ಡ ಮಟ್ಟದ ಲಾಭವನ್ನು ಪಡೆಯಬಹುದು. ಉದ್ಯೋಗಸ್ಥರಿಗೆ ಬಡ್ತಿ, ವೇತನ ಹೆಚ್ಚಳದಂತಹ ಶುಭ ಫಲಗಳು ಸಿಗಬಹುದು. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯಲಿದೆ. 

ಚತುರ್ಗ್ರಾಹಿ ಯೋಗ ಕುಂಭ ರಾಶಿಯವರಿಗೆ ಅನುಕೂಲಕರವಾಗಿದೆ. ನಿಮ್ಮ ಪ್ರತಿ ಹೆಜ್ಜೆಯಲ್ಲಿಯೂ ಅದೃಷ್ಟ ಜೊತೆಗಿರುವುದು. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಲಿದೆ. ಕೆಲಸಕ್ಕೆ ಸಂಬಂಧಿಸಿದಂತೆ ಪ್ರಯಾಣ ಬೆಳೆಸಬೇಕಾಗಬಹುದು. ಇದು ಶುಭ ಫಲಿತಾಂಶಗಳನ್ನು ನೀಡುತ್ತದೆ. 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link