Chaturgrahi Yog: ಮೇಷದಲ್ಲಿ ಚತುರ್ಗ್ರಾಹಿ ಯೋಗ.. ಈ ರಾಶಿಗಳ ಗೋಲ್ಡನ್ ಟೈಮ್ ಶುರು! ಅಪಾರ ಕೀರ್ತಿ - ಸಂಪತ್ತು ನಿಮ್ಮದಾಗುವ ಕಾಲ
ಮೇಷದಲ್ಲಿ ಗುರು, ಸೂರ್ಯ, ರಾಹು ಮತ್ತು ಬುಧ ಸಂಯೋಗದೊಂದಿಗೆ ಚತುರ್ಗ್ರಾಹಿ ಯೋಗವು ರೂಪುಗೊಳ್ಳುತ್ತದೆ. ಚತುರ್ಗ್ರಾಹಿ ಯೋಗವು 4 ರಾಶಿಗಳ ಜನರಿಗೆ ತುಂಬಾ ಮಂಗಳಕರವಾಗಿದೆ.
ಮೇಷ ರಾಶಿ : ಚತುರ್ಗ್ರಾಹಿ ಯೋಗವು ಈ ರಾಶಿಯವರಿಗೆ ತುಂಬಾ ಶುಭ ಫಲಿತಾಂಶಗಳನ್ನು ನೀಡುತ್ತದೆ. ವೃತ್ತಿಯಲ್ಲಿ ಪ್ರಗತಿಯನ್ನು ನೀಡುತ್ತದೆ. ಬಡ್ತಿ ಸಿಗಲಿದೆ. ಆದಾಯ ಹೆಚ್ಚಲಿದೆ. ಇನ್ಕ್ರಿಮೆಂಟ್ ಹೆಚ್ಚಾಗುತ್ತದೆ. ವ್ಯಾಪಾರದಲ್ಲಿ ಲಾಭ, ಮದುವೆ ಪ್ರಸ್ತಾಪವನ್ನು ಪಡೆಯಬಹುದು.
ಮಿಥುನ ರಾಶಿ : ಚತುರ್ಗ್ರಾಹಿ ಯೋಗವು ಮಿಥುನ ರಾಶಿಯವರಿಗೆ ಬಲವಾದ ಲಾಭವನ್ನು ನೀಡುತ್ತದೆ. ಈ ಜನರು ಇದ್ದಕ್ಕಿದ್ದಂತೆ ಆರ್ಥಿಕ ಲಾಭ ಪಡೆಯಬಹುದು. ಉದ್ಯೋಗದಲ್ಲಿ ಬಡ್ತಿ, ಹೊಸ ಉದ್ಯೋಗ ಪ್ರಸ್ತಾಪವನ್ನು ಪಡೆಯಬಹುದು. ವ್ಯಾಪಾರದಲ್ಲಿ ವಿಶೇಷ ಲಾಭ ದೊರೆಯಲಿದೆ. ಆರ್ಥಿಕ ಪರಿಸ್ಥಿತಿ ಉತ್ತಮವಾಗುವುದು.
ಕರ್ಕಾಟಕ: ಕರ್ಕಾಟಕ ರಾಶಿಯವರಿಗೆ ಚತುರ್ಗ್ರಾಹಿ ಯೋಗವು ಸಂಪತ್ತನ್ನು ನೀಡಲಿದೆ. ಈ ಜನರು ತಮ್ಮ ವೃತ್ತಿಜೀವನದಲ್ಲಿ ಉತ್ತಮ ಲಾಭ ಪಡೆಯಬಹುದು. ನಿರೀಕ್ಷೆಯಲ್ಲಿದ್ದ ಬಡ್ತಿ, ವರ್ಗಾವಣೆ, ಹೊಸ ಮನೆ - ಕಾರು ಖರೀದಿಸಬಹುದು. ವಿದೇಶ ಪ್ರವಾಸಕ್ಕೆ ಹೋಗಬಹುದು.
ಸಿಂಹ ರಾಶಿ : ಈ ರಾಶಿಯವರಿಗೆ ಚತುರ್ಗ್ರಾಹಿ ಯೋಗವು ಅದೃಷ್ಟವನ್ನು ತರಲಿದೆ. ಅದೃಷ್ಟದ ಸಹಾಯದಿಂದ ಪ್ರತಿ ಕೆಲಸಗಳು ಪೂರ್ಣಗೊಳ್ಳುತ್ತವೆ. ರಾಜಕೀಯದಲ್ಲಿ ಸಕ್ರಿಯರಾಗಿರುವವರು ಉನ್ನತ ಸ್ಥಾನ ಪಡೆಯಬಹುದು. ಹೊಸ ಉದ್ಯೋಗ ಅರಸಿ ಬರಬಹುದು.