Jio Annual Plan: ಜಿಯೋ ಗ್ರಾಹಕರಿಗೆ ಬಂಪರ್, ದಿನಕ್ಕೆ 11ರೂ. ಖರ್ಚು ಮಾಡಿದ್ರೆ ವರ್ಷವಿಡೀ ಡೇಟಾ ಫ್ರೀ!

Fri, 23 Aug 2024-10:13 am,

ಭಾರತದ ಟೆಲಿಕಾಂ ದೈತ್ಯ ರಿಲಯನ್ಸ್ ಜಿಯೋ ತನ್ನ ಪ್ರಿಪೇಯ್ಡ್ ಗ್ರಾಹಕರಿಗಾಗಿ ಅತ್ಯಂತ ಕಡಿಮೆ ಬೆಲೆಯ ರಿಚಾರ್ಜ್ ಯೋಜನೆಯನ್ನು ಪರಿಚಯಿಸಿದೆ. 

ಜಿಯೋದ ಈ ರಿಚಾರ್ಜ್ ಪ್ಲಾನ್​ನಲ್ಲಿ ಗ್ರಾಹಕರಿಗೆ ನಿತ್ಯ ಕೇವಲ 11 ರೂ.ನಲ್ಲಿ ವರ್ಷವಿಡೀ ಉಚಿತ ಡೇಟಾ ಸೌಲಭ್ಯದ ಜೊತೆಗೆ ಹಲವು ಪ್ರಯೋಜನಗಳು ಲಭ್ಯವಾಗಲಿವೆ. 

ಹೌದು, ರಿಲಯನ್ಸ್ ಜಿಯೋದ 3999 ರೂ. ಪ್ರಿಪೇಯ್ಡ್ ಪ್ಲಾನ್/ದಿನಕ್ಕೆ ಸುಮಾರು 11 ರೂ. ರಿಚಾರ್ಜ್ ಮಾಡಿದರೆ ಹಲವು ಪ್ರಯೋಜನಗಳನ್ನು ಪಡೆಯಬಹುದಾಗಿದೆ. 

ರಿಲಯನ್ಸ್ ಜಿಯೋದ 3999 ರೂ.  ಪ್ರಿಪೇಯ್ಡ್ ಪ್ಲಾನ್​ನಲ್ಲಿ ಗ್ರಾಹಕರಿಗೆ 365ದಿನಗಳವರೆಗೆ ಪ್ರತಿದಿನ 2.5 ಜಿಬಿ 5G ಡೇಟಾ ಲಭ್ಯವಾಗಲಿದೆ. ದೈನಂದಿನ ಡೇಟಾ ಖಾಲಿಯಾದ ಬಳಿಕ ಇದರ ವೇಗವು 64Kbpsಗೆ ಇಳಿಕೆಯಾಗುತ್ತದೆ. 

ಜಿಯೋದ ಈ ಪ್ರಿಪೇಯ್ಡ್ ಪ್ಲಾನ್​ನಲ್ಲಿ ವರ್ಷವಿಡೀ 5G ಡೇಟಾ ಜೊತೆಗೆ ಅನ್​ಲಿಮಿಟೆಡ್​ ಕಾಲ್ ಮತ್ತು ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್( ವರ್ಷಕ್ಕೆ 6500 SMS) ಪಡೆಯಬಹುದಾಗಿದೆ. 

ಜಿಯೋದ 3999 ರೂ. ಪ್ರಿಪೇಯ್ಡ್ ಪ್ಲಾನ್​ನಲ್ಲಿ ಗ್ರಾಹಕರಿಗೆ ಉಚಿತ OTT ಚಂದಾದಾರಿಕೆಯನ್ನು ಸಹ ಪಡೆಯಬಹುದಾಗಿದೆ. ಗ್ರಾಹಕರು ಇದರಲ್ಲಿ OTT ಸ್ಟ್ರೀಮಿಂಗ್‌ಗಾಗಿ ಜಿಯೋ ಸಿನಿಮಾಗೆ ಪ್ರವೇಶ, ಜಿಯೋ ಟಿವಿ, ಜಿಯೋ ಕ್ಲೌಡ್‌ಗೆ ಉಚಿತ ಚಂದಾದಾರಿಕೆಗಳನ್ನು ಕೂಡ ಆನಂದಿಸಬಹುದು. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link