Jio ಅಗ್ಗದ ರೀಚಾರ್ಜ್ ಪ್ಲಾನ್ : ದಿನಕ್ಕೆ 3, 6 ಮತ್ತು 7 ರೂ. ಗಳಿಗೆ ಸಿಗಲಿದೆ ಟಾಕ್ ಟೈಂ ಜೊತೆ ಉಚಿತ ಡಾಟಾ
ರಿಲಯನ್ಸ್ ಜಿಯೋನಲ್ಲಿ 28 ದಿನಗಳ ವ್ಯಾಲಿಡಿಟಿಯೊಂದಿಗೆ 75 ರೂ. ರೀಚಾರ್ಜ್ ಪ್ಲಾನ್ ಸಿಗುತ್ತಿದೆ. ಈ ಪ್ಲಾನ್ ನಲ್ಲಿ 28 ದಿನಗಳವರೆಗೆ ಅನಿಯಮಿತ ಕರೆಗಳೊಂದಿಗೆ ಒಟ್ಟು 3 ಜಿಬಿ ಡೇಟಾವನ್ನು ನೀಡಲಾಗುತ್ತದೆ. ಅಂದರೆ, ಗ್ರಾಹಕರು ಪ್ರತಿದಿನ 100MB ಡೇಟಾವನ್ನು ಬಳಸಬಹುದು. ಯೋಜನೆಯಲ್ಲಿ 50 ಉಚಿತ ಎಸ್‌ಎಂಎಸ್ ಸೌಲಭ್ಯ ಕೂಡಾ ಲಭ್ಯವಿದೆ. ಇದನ್ನು ನಾವು ಲೆಕ್ಕ ಹಾಕಿದರೆ ದಿನಕ್ಕೆ ನಾವು ಖರರ್ಚು ಮಾಡಬೇಕಾಗಿರುವುದು ಕೇವಲ 2.67 ರೂ.
ಜಿಯೋನ 39 ರೂಗಳ ರೀಚಾರ್ಜ್ ಬಗ್ಗೆ ಹೇಳುವುದಾದರೆ, ಇದರಲ್ಲಿ 14 ದಿನಗಳ ವ್ಯಾಲಿಡಿಟಿಯೊಂದಿಗೆ, ಪ್ರತಿ ದಿನ 100MB ಡೇಟಾ ಲಭ್ಯವಿದೆ. ಇದರೊಂದಿಗೆ, ಅನಿಯಮಿತ ಕರೆ ಮತ್ತು ದಿನಕ್ಕೆ 100 ಎಸ್‌ಎಂಎಸ್ ಸೇವೆ ಕೂಡಾ ಇದೆ. ಇದರೊಂದಿಗೆ, ಜಿಯೋ ಅಪ್ಲಿಕೇಶನ್‌ಗಳ ಚಂದಾದಾರಿಕೆಯನ್ನು ಸಹ ಉಚಿತವಾಗಿ ನೀಡಲಾಗುತ್ತಿದೆ. ಈ ಯೀಜನೆಯನ್ನು ಲೆಕ್ಕ ಹಾಕಿದರೆ, ದಿನಕ್ಕೆ 2.78 ಮಾತ್ರ ಖರ್ಚು ಮಾಡಬೇಕಾಗುವುದು.
ಇನ್ನು ಜಿಯೋ ಕಂಪನಿಯ 69 ರೂ. ಪ್ಲಾನ್ ಬಗ್ಗೆ ಹೇಳುವುದಾದರೆ, ಈ ಯೋಜನೆಯ ವ್ಯಾಲಿಡಿಟಿ 14 ದಿನಗಳವರೆಗೆ ಇರುತ್ತದೆ. ಇದರಲ್ಲಿ ನೀವು ಪ್ರತಿದಿನ 0.5 ಜಿಬಿ ಡೇಟಾವನ್ನು ಬಳಸಬಹುದು. ಅಲ್ಲದೆ, ಅನಿಯಮಿತ ಕರೆ ಮತ್ತು ದೈನಂದಿನ 100 ಎಸ್‌ಎಂಎಸ್ ಸಹ ನೀಡಲಾಗುತ್ತದೆ. ಇದರೊಂದಿಗೆ ಬಳಕೆದಾರರು ಜಿಯೋ ಅಪ್ಲಿಕೇಶನ್‌ಗಳ ಉಚಿತ ಚಂದಾದಾರಿಕೆಯನ್ನು ಪಡೆಯಬಹುದು. ಈ ಪ್ಲಾನ್ ಅನ್ನು ಲೆಕ್ಕ ಹಾಕಿದರೆ, ದಿನಕ್ಕೆ 4.92 ರೂ.ಗಳನ್ನು ಖರ್ಚು ಮಾಡಬೇಕಾಗುತ್ತದೆ.
ಜಿಯೋನ 98 ರೂ ಯೋಜನೆಯಲ್ಲಿ 14 ದಿನಗಳ ವ್ಯಾಲಿಡಿಟಿ ಇರುತ್ತದೆ. ಈ ಯೋಜನೆಯಲ್ಲಿ ದಿನಕ್ಕೆ 1.5 ಜಿಬಿ ಡೇಟಾ ಲಭ್ಯವಿರುತ್ತದೆ. ಅಂದರೆ 14 ದಿನಗಳಿಗೆ ಒಟ್ಟು 21 ಜಿಬಿ ಡೇಟಾವನ್ನು ಗ್ರಾಹಕರಿಗೆ ನೀಡಲಾಗುವುದು. ಇದು ಜಿಯೋನ ಅಗ್ಗದ ಆಲ್ ಇನ್ ಒನ್ ಯೋಜನೆಯಾಗಿದೆ. ಇದರೊಂದಿಗೆ, 4 ಜಿ ಡೇಟಾದೊಂದಿಗೆ ಅನಿಯಮಿತ ಕರೆ ಕೂಡ ಇರುತ್ತದೆ. ಇದರೊಂದಿಗೆ, ಗ್ರಾಹಕರಿಗೆ ಈ ಯೋಜನೆಯಲ್ಲಿ ಅನಿಯಮಿತ ಕರೆಗಳು ಮತ್ತು JioTV, JioCinema ಮತ್ತು JioNews ನಂತಹ ಅಪ್ಲಿಕೇಶನ್‌ಗಳಿಗೆ ಉಚಿತ ಆಕ್ಸಸ್ ಇರುತ್ತದೆ. ಆದರೆ, ಈ ಯೋಜನೆಯೊಂದಿಗೆ ಎಸ್‌ಎಂಎಸ್ ಸೌಲಭ್ಯ ಸಿಗುವುದಿಲ್ಲ. ದನ್ನು ದಿನವೊಂದಕ್ಕೆ ಲೆಕ್ಕ ಹಾಕಿದರೆ ನಾವು ವ್ಯಯಿಸಬೇಕಾಗಿರುವುದು ಪ್ರತಿ ದಿನ 7 ರೂ. ಮಾತ್ರ.
ಒಂದು ವೇಳೆ ಇನ್ನೂ ಹೆಚ್ಚಿನ ಡೇಟಾವನ್ನು ಉಪಯೋಗಿಸುವುದಾದರೆ, 155 ರೂ ರೀಚಾರ್ಜ್ ಪ್ಲಾನ್ ಮಾಡಬಹುದು. ಈ ಯೋಜನೆಯಲ್ಲಿ 28 ದಿನಗಳ ವ್ಯಾಲಿಡಿಟಿ ಇರುತ್ತದೆ. ಪ್ರತಿದಿನ 1 ಜಿಬಿ ಡೇಟಾ ಲಭ್ಯವಿರುತ್ತದೆ. ಈ ಯೋಜನೆಯಲ್ಲಿಯೂ ಎಲ್ಲಾ ನೆಟ್‌ವರ್ಕ್‌ಗಳಿಗೆ ಅನಿಯಮಿತ ಕರೆಯೊಂದಿಗೆ ಜಿಯೋ ಅಪ್ಲಿಕೇಶನ್‌ಗಳ ಚಂದಾದಾರಿಕೆಗಳು ಲಭ್ಯವಿರುತ್ತವೆ. ಇನ್ನು ಈ ಪ್ಲಾನ್ ಅನ್ನು ಪ್ರತಿದಿನಕ್ಕೆ ಅನ್ವಯಿಸುವಂತೆ ಲೆಕ್ಕ ಹಾಕಿದರೆ ದಿನಕ್ಕೆ ಕೇವಲ 6 ರೂ. ಮಾತ್ರ ಖರ್ಚಾಗುತ್ತದೆ.