Smartphone Tips: ಮೊಬೈಲ್ ಖರೀದಿಗೂ ಮುನ್ನ ಈ 5 ವೈಶಿಷ್ಟ್ಯಗಳಿವೆಯೇ ಎಂದು ಪರಿಶೀಲಿಸಿ
ನೀವು ಸಹ ಅಗ್ಗದ ಸ್ಮಾರ್ಟ್‌ಫೋನ್ ಖರೀದಿಸುವಾಗ ಎಚ್ಚರವಹಿಸಿ. ಏಕೆಂದರೆ ಕನಿಷ್ಠ 90 Hz ರಿಫ್ರೆಶ್ ದರವನ್ನು ಹೊಂದಿರುವ ಅಗ್ಗದ ಸ್ಮಾರ್ಟ್‌ಫೋನ್‌ನಲ್ಲಿ ಸಹ ನಿಮಗೆ ದುಬಾರಿ ಸ್ಮಾರ್ಟ್‌ಫೋನ್‌ನ ಭಾವನೆ ಬರ ಬಹುದು. ಒಂದು ವೇಳೆ ರಿಫ್ರೆಶ್ ದರ ಕಡಿಮೆಯಾದಾಗ ಸ್ಮಾರ್ಟ್‌ಫೋನ್ ಬಹಳಷ್ಟು ಹ್ಯಾಂಗ್ ಆಗುವ ಸಾಧ್ಯತೆ ಇದೆ.
ನೀವು ಸ್ಮಾರ್ಟ್‌ಫೋನ್ ಖರೀದಿಸುತ್ತಿದ್ದರೆ, ಅದರಲ್ಲಿ ಕನಿಷ್ಠ 50 MP ಕ್ಯಾಮೆರಾ ಇದೆಯೇ ಎಂದು ನೋಡಿಕೊಳ್ಳಿ. ಇದರಿಂದ ನೀವು ಅತ್ಯುತ್ತಮ ಛಾಯಾಗ್ರಹಣವನ್ನು ಮಾಡಬಹುದು. ಇದಕ್ಕಿಂತ ಕಡಿಮೆ ಸಾಮರ್ಥ್ಯದ ಕ್ಯಾಮರಾ ನಿಮಗೆ ಆ ಛಾಯಾಗ್ರಹಣದ ಅನುಭವವನ್ನು ನೀಡಲು ಸಾಧ್ಯವಾಗುವುದಿಲ್ಲ.
ಕನಿಷ್ಠ 5000 mAh ಬ್ಯಾಟರಿ ಹೊಂದಿರುವ ಸ್ಮಾರ್ಟ್‌ಫೋನ್ ಅನ್ನು ಮಾತ್ರ ಖರೀದಿಸಿ ಏಕೆಂದರೆ ನೀವು ಫೋನ್ ಅನ್ನು ಮತ್ತೆ ಮತ್ತೆ ಚಾರ್ಜ್ ಮಾಡುವ ಅಗತ್ಯವಿರುವುದಿಲ್ಲ, ಈ ಬ್ಯಾಟರಿಯು ಒಂದರಿಂದ ಎರಡು ದಿನಗಳವರೆಗೆ ಸುಲಭವಾಗಿ ಇರುತ್ತದೆ.
ನೀವು ಸ್ಮಾರ್ಟ್‌ಫೋನ್ ಖರೀದಿಸಲು ಬಯಸಿದರೆ, ಕನಿಷ್ಠ ಅದು HD Plus ಡಿಸ್‌ಪ್ಲೇ ಇದೆಯೇ ಎಂದು ನೋಡಿ, ಬಳಿಕ ಖರೀದಿಸಿ. ಏಕೆಂದರೆ ಈ ಡಿಸ್‌ಪ್ಲೇ ತುಂಬಾ ಪ್ರಕಾಶಮಾನವಾಗಿರುತ್ತದೆ. ಒಂದು ವೇಳೆ ನೀವು LCD ಡಿಸ್ಪ್ಲೇ ಹೊಂದಿರುವ ಸ್ಮಾರ್ಟ್‌ಫೋನ್ ಖರೀದಿಸಿದರೆ, ದೃಶ್ಯ ಅನುಭವವು ಸಾಕಷ್ಟು ಮಂದವಾಗಿರುತ್ತದೆ.
ಗೇಮಿಂಗ್ ವಿಷಯದಲ್ಲಿ ಉತ್ತಮವಾದ ಪ್ರೊಸೆಸರ್ ಅನ್ನು ಯಾವಾಗಲೂ ಆಯ್ಕೆ ಮಾಡಬೇಕು. ಸ್ಮಾರ್ಟ್ಫೋನ್ ಎಷ್ಟೇ ಅಗ್ಗವಾಗಿದ್ದರೂ ಸಹ ಪ್ರೊಸೆಸರ್ ಮಾತ್ರ ಉತ್ತಮವಾಗಿರಲಿ.