RCB ಅಲ್ಲವೇ ಅಲ್ಲ… ಐಪಿಎಲ್ ಇತಿಹಾಸದಲ್ಲಿ ಅತೀ ಹೆಚ್ಚು ಫ್ಯಾನ್ ಫಾಲೋವರ್ಸ್ ಹೊಂದಿರೋದು ಈ ತಂಡ ಮಾತ್ರ!
ನಾವಿಂದು ಈ ವರದಿಯಲ್ಲಿ, ಸೋಶಿಯಲ್ ಮೀಡಿಯಾದ ಪ್ರಕಾರ ಯಾವ ತಂಡಕ್ಕೆ ಅತಿ ಹೆಚ್ಚು ಫ್ಯಾನ್ ಫಾಲೋವರ್ಸ್ ಇದ್ದಾರೆ ಎಂಬುದನ್ನು ತಿಳಿಸಿಕೊಡಲಿದ್ದೇವೆ.
ಚೆನ್ನೈ ಸೂಪರ್ ಕಿಂಗ್ಸ್ IPL ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡವಾಗಿದೆ. ಇದುವರೆಗೆ 5 IPL ಮತ್ತು ಎರಡು ಚಾಂಪಿಯನ್ಸ್ ಲೀಗ್ T20 ಪ್ರಶಸ್ತಿಗಳನ್ನು ಗೆದ್ದಿದೆ. ಎಂಎಸ್ ಧೋನಿ ನೇತೃತ್ವದ 'ಯೆಲ್ಲೋ ಆರ್ಮಿ' ಕ್ರಿಕೆಟ್ ಮೈದಾನದಲ್ಲಿ ಮಾತ್ರವಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿಯೂ ಸಾಕಷ್ಟು ಜನಪ್ರಿಯವಾಗಿದೆ. ಇನ್’ಸ್ಟಾಗ್ರಾಂನಲ್ಲಿ ಸುಮಾರು 13.5 ಮಿಲಿಯನ್, ಟ್ವಿಟರ್’ನಲ್ಲಿ 9.6 ಮಿಲಿಯನ್ ಮತ್ತು ಯೂಟ್ಯೂಬ್’ನಲ್ಲಿ 2.86 ಮಿಲಿಯನ್ ಫಾಲೋವರ್ಸ್’ಗಳನ್ನು ಹೊಂದಿದೆ ಈ ತಂಡ,
ಐಪಿಎಲ್’ನ ಮತ್ತೊಂದು ಜನಪ್ರಿಯ ಮತ್ತು ಯಶಸ್ವಿ ತಂಡವೆಂದರೆ ಮುಂಬೈ ಇಂಡಿಯನ್ಸ್. ಮುಂಬೈ ತಂಡ ಒಟ್ಟು 5 ಬಾರಿ ಐಪಿಎಲ್ ಪ್ರಶಸ್ತಿ ಗೆದ್ದಿದೆ. ರೋಹಿತ್ ಶರ್ಮಾ ಮತ್ತು ಮಾಜಿ ಶ್ರೇಷ್ಠ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ತಂಡದಲ್ಲಿ ಇರುವುದರಿಂದ ಅಭಿಮಾನಿಗಳ ಸಂಖ್ಯೆ ಕೂಡ ಹೆಚ್ಚಾಗಿದ್ದು, ಇನ್’ಸ್ಟಾಗ್ರಾಂನಲ್ಲಿ 12.3ಮಿಲಿಯನ್ ಫಾಲೋವರ್ಸ್ ಇದ್ದಾರೆ.
ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಮಾಜಿ ನಾಯಕತ್ವದ ಆರ್’ಸಿಬಿ ತಂಡವಿದೆ. ಈ ತಂಡಕ್ಕೆ ಇನ್’ಸ್ಟಾಗ್ರಾಂನಲ್ಲಿ ಒಟ್ಟು 1.8 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಈ ತಂಡ ಇದುವರೆಗೆ IPL ಟ್ರೋಫಿ ಗೆದ್ದಿಲ್ಲವಾದರೂ ಅಭಿಮಾನಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಗೌತಮ್ ಗಂಭೀರ್ ನಾಯಕತ್ವದಲ್ಲಿ 2012 ಮತ್ತು 2014 ರಲ್ಲಿ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ಹೆಸರು ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಈ ತಂಡವು ಸಾಮಾಜಿಕ ಮಾಧ್ಯಮದಲ್ಲಿ ಸುಮಾರು 4.1 ಫಾಲೋವರ್ಸ್’ಗಳನ್ನು ಹೊಂದಿದೆ.
2008 ರಿಂದ ಒಮ್ಮೆಯೂ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿಲ್ಲದ ಪಂಜಾಬ್ ಕಿಂಗ್ಸ್ ಹೆಸರು ಈ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಈ ತಂಡದ ಮಾಲಕಿ ಪ್ರೀತಿ ಜಿಂಟಾ. ಇದೇ ಕಾರಣದಿಂದ ತಂಡಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಫಾಲೋವರ್ಸ್ ಇದ್ದಾರೆ. ತಂಡವು ಇನ್’ಸ್ಟಾಗ್ರಾಂನಲ್ಲಿ ಒಟ್ಟು 3 ಮಿಲಿಯನ್ ಫಾಲೋವರ್ಸ್’ಗಳನ್ನು ಹೊಂದಿದೆ.