ಊಟಕ್ಕೆ ಮೊದಲು ಈ ಗಿಡದ ಚಿಗುರನ್ನು ಜಗಿದು ರಸ ನುಂಗಿದರೆ ಬ್ಲಡ್ ಶುಗರ್ ದಿಢೀರ್ ಅಂತ ನಾರ್ಮಲ್ ಆಗುವುದು! ಮಧುಮೇಹಿಗಳೇ ಒಮ್ಮೆ ಟ್ರೈ ಮಾಡಿ
ಚಳಿಗಾಲದಲ್ಲಿ ಹೆಚ್ಚು ಸಿಗುವ ವಸ್ತುವೆಂದರೆ ಹುಣಸೆ ಮರದ ಚಿಗುರು. ಹುಣಸೆ ಮರದ ಚಿಗುರಿನಿಂದ ತಯಾರಿಸಿದ ಖಾದ್ಯಗಳ ರುಚಿಗೆ ಮಿತಿಯೇ ಇರಲ್ಲ. ಅಷ್ಟೊಂದು ಸೊಗಸಾಗಿರುತ್ತದೆ. ಇನ್ನು ಇದು ರುಚಿಯಷ್ಟೇ ಅಲ್ಲ, ಆರೋಗ್ಯದ ನಿಧಿಯನ್ನೇ ಹೊಂದಿದೆ.
ಹುಣಸೆ ಚಿಗುರು ದೇಹಕ್ಕೆ ಬೇಕಾದ ಸಾಕಷ್ಟು ಪೋಷಕಾಂಶಗಳನ್ನು ಒದಗಿಸುತ್ತದೆ. ಇದು ವಿಟಮಿನ್ ಸಿ, ಉತ್ಕರ್ಷಣ ನಿರೋಧಕಗಳು, ಕಬ್ಬಿಣ, ಫೈಬರ್, ಪ್ರೋಟೀನ್, ಕ್ಯಾಲ್ಸಿಯಂ, ರಂಜಕ ಮತ್ತು ಮೆಗ್ನೀಸಿಯಮ್ ಅನ್ನು ಹೊಂದಿರುತ್ತದೆ.
ಹುಣಸೆ ಚಿಗುರುಗಳನ್ನು ತಿನ್ನುವುದರಿಂದ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕರಗುತ್ತದೆ ಮತ್ತು ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ. ಹಾಗಾಗಿ ಹೃದಯ ಸಂಬಂಧಿ ಸಮಸ್ಯೆಗಳು ದೂರವಾಗುತ್ತವೆ.
ಹುಣಸೆ ಚಿಗುರುಗಳಲ್ಲಿ ಉತ್ಕರ್ಷಣ ನಿರೋಧಕಗಳು, ಉರಿಯೂತದ ಗುಣಲಕ್ಷಣಗಳು ಮತ್ತು ವಿಟಮಿನ್ ಸಿ ಇದೆ. ಹಾಗಾಗಿ ದೇಹದಲ್ಲಿ ರೋಗನಿರೋಧಕ ಶಕ್ತಿ ಬಲಗೊಳ್ಳುತ್ತದೆ.
ರಕ್ತಹೀನತೆ ಇರುವವರೂ ಹುಣಸೆ ಚಿಗುರು ತಿನ್ನುವುದರಿಂದ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಏಕೆಂದರೆ ಇದರಲ್ಲಿ ಕಬ್ಬಿಣದ ಪ್ರಮಾಣ ಹೆಚ್ಚಾಗಿರುತ್ತದೆ.
ಹುಣಸೆ ಚಿಗುರುಗಳನ್ನು ತಿನ್ನುವುದರಿಂದ ರಕ್ತ ಶುದ್ಧವಾಗುತ್ತದೆ. ಅಂತೆಯೇ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕೂ ಇದು ಸಹಕಾರಿ. ರಕ್ತ ಮತ್ತು ದೇಹದಲ್ಲಿರುವ ಕಲ್ಮಶಗಳನ್ನು ಮತ್ತು ವಿಷಕಾರಿ ವಸ್ತುಗಳನ್ನು ಹೊರಹಾಕುವ ಮೂಲಕ ರಕ್ತವನ್ನು ಶುದ್ಧೀಕರಿಸುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ.
ಸೂಚನೆ: ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ಈ ವಿವರಗಳನ್ನು ನಿಮಗೆ ಒದಗಿಸಲಾಗಿದೆ. ವಿಷಯಗಳು ಮಾಹಿತಿಗಾಗಿ ಮಾತ್ರ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.