ನಿತ್ಯ ಎರಡೇ ಎರಡು ಎಲೆ ಜಗಿಯಿರಿ ! ಈ ಪುಟ್ಟ ಎಲೆ ನಾರ್ಮಲ್ ಮಾಡಿ ಬಿಡುತ್ತದೆ ಬ್ಲಡ್ ಶುಗರ್ !
ರಕ್ತದಲ್ಲಿನ ಸಕ್ಕರೆ ಜಾಸ್ತಿಯಾದರೆ ಬೇರೆ ಬೇರೆ ರೀತಿಯ ಕಾಯಿಲೆಗಳು ನಮ್ಮನ್ನು ಬಾಧಿಸಲು ಶುರು ಮಾಡುತ್ತದೆ. ಹಾಗಾಗಿ ಮಧುಮೇಹವನ್ನು ನಿಯಂತ್ರಿಸಲು ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.
ರಕ್ತದಲ್ಲಿನ ಸಕ್ಕರೆ ಅಂಶ ಹೆಚ್ಚಾದರೆ ಔಷಧಿಯೇ ಸೇವಿಸಬೇಕೆಂದಿಲ್ಲ. ಬದಲಾಗಿ ಕೆಲವು ಮನೆ ಮದ್ದುಗಳನ್ನು ಪ್ರಯತ್ನಿಸುವ ಮೂಲಕ ಕೂಡಾ ಈ ಕಾಯಿಲೆಗೆ ಪರಿಹಾರ ಕಂಡುಕೊಳ್ಳಬಹುದು.
ಬೇವು ನಮ್ಮ ಮನೆಯ ಸುತ್ತ ಮುತ್ತ ಸುಲಭವಾಗಿ ಸಿಗುವ ವಸ್ತುವಾಗಿದೆ. ನಿತ್ಯ ಬೇವಿನ ಮರದ ಎರಡು ಎಲೆಗಳನ್ನು ತೆಗೆದುಕೊಂಡು ಮಧುಮೇಹ ರೋಗಿಗಳು ಜಗಿಯಬೇಕು. ಹೀಗೆ ನಿತ್ಯ ಎರಡು ಎಲೆಯನ್ನು ಜಗಿದು ರಸ ಕುಡಿಯಬೇಕು. ಈ ಮೂಲಕ ರಕ್ತದ ಸಕ್ಕರೆ ನಿಯಂತ್ರಣಕ್ಕೆ ಬರುವುದಲ್ಲಿ ಸಂದೇಹ ಇಲ್ಲ ಎನ್ನಲಾಗುತ್ತದೆ.
ಬೇವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಹೊಂದಿದೆ ಎನ್ನುವುದು ಸಂಶೋಧನೆಯ ಮೂಲಕ ಕೂಡಾ ಸಾಬೀತಾಗಿದೆ. ಇದು ಮಧುಮೇಹದಿಂದ ಬಳಲುತ್ತಿರುವ ರೋಗಿಗಳ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಅಸ್ತಮಾ ಸಮಸ್ಯೆ ಇದ್ದರೆ ಇದನ್ನು ಪ್ರತಿದಿನ ಇದನ್ನು ಸೇವಿಸುವ ಮೂಲಕ ಅಸ್ತಮಾವನ್ನು ಗುಣಪಡಿಸಬಹುದು.ಬೇವನ್ನು ಮೌತ್ ವಾಶರ್ ಆಗಿ ಬಳಸುತ್ತಾರೆ. ಬೇವಿನ ಕೊಂಬೆಯನ್ನು ಬಳಸುವುದರಿಂದ ಹಲ್ಲುಗಳನ್ನು ಬಿಳಿಯಾಗಿ ಮತ್ತು ಹೊಳೆಯುವಂತೆ ಮಾಡಬಹುದು.ಬೇವಿನಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಚರ್ಮವನ್ನು ಆರೋಗ್ಯವಾಗಿರಿಸುತ್ತದೆ.ಬೇವಿನ ಎಣ್ಣೆ ಕೂದಲು ಒಡೆಯುವ ಸಮಸ್ಯೆಯನ್ನು ಹೋಗಲಾಡಿಸುತ್ತದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.