ದಿನಾ ಬೆಳಗ್ಗೆ ಏಳುತ್ತಿದ್ದಂತೆ ಹಳಸಿದ ಬಾಯಲ್ಲಿ ಈ ಕಾಳನ್ನು ಜಗಿಯಿರಿ: ಕಿಡ್ನಿಯಲ್ಲಿ ಕಲ್ಲು ಇದ್ದರೆ ಸರಾಗವಾಗಿ ಕರಗಿ ಹೋಗುತ್ತೆ!

Sat, 06 Apr 2024-5:46 pm,

ಒಂದು ಸಂಶೋಧನೆಯ ಪ್ರಕಾರ, 10 ಪ್ರತಿಶತ ಜನರು ತಮ್ಮ ಜೀವನದ ಕೆಲವು ಹಂತದಲ್ಲಿ ಕಿಡ್ನಿ ಸ್ಟೋನ್ ಸಮಸ್ಯೆಗೆ ತುತ್ತಾಗುತ್ತಾರೆ. ಅಂದಹಾಗೆ ಕೆಲ ಮನೆಮದ್ದುಗಳ ಮೂಲಕ ಕಿಡ್ನಿ ಸ್ಟೋನ್ ಸಮಸ್ಯೆಗೆ ಶೀಘ್ರ ಪರಿಹಾರ ಪಡೆಯಬಹುದು. ಅಲ್ಲದೆ ಮೂತ್ರಕೋಶದ ಆರೋಗ್ಯವನ್ನು ಕಾಪಾಡಲು ಸಹ ಇದು ಸಹಕಾರಿ.

ನಿಂಬೆ: ತಾಜಾ ನಿಂಬೆ ರಸವನ್ನು ಉಗುರುಬೆಚ್ಚಗಿನ ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ದೇಹದಲ್ಲಿರುವ ವಿಷದ ಅಂಶ ಹೊರಹಾಕಲ್ಪಡುತ್ತದೆ. ಜೊತೆಗೆ ಇದು ಮೂತ್ರಪಿಂಡದ ಕಲ್ಲುಗಳನ್ನು ಸುಲಭವಾಗಿ ಕರಗಿಸುತ್ತದೆ. ಪ್ರತಿದಿನ ನಿಂಬೆ ನೀರನ್ನು ಕುಡಿಯುವುದರಿಂದ ದೇಹದಲ್ಲಿ ನೀರಿನ ಕೊರತೆ ಇರುವುದಿಲ್ಲ.

ಹಾಲು: ಉತ್ತಮ ಪ್ರಮಾಣದ ಕ್ಯಾಲ್ಸಿಯಂ ಅನ್ನು ಹೊಂದಿರುವ ಹಾಲು, ಮೂತ್ರಪಿಂಡದ ಕಲ್ಲುಗಳನ್ನು ತೊಡೆದುಹಾಕಲು ಉತ್ತಮ ಮಾರ್ಗ. ಹಾಲಿನಲ್ಲಿರುವ ಕ್ಯಾಲ್ಸಿಯಂ ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಅಂತೆಯೇ ಇದು ಮೂತ್ರಪಿಂಡದ ಕಲ್ಲುಗಳ ರಚನೆಯನ್ನು ತಡೆಯುತ್ತದೆ.

ಆಪಲ್ ಸೈಡರ್ ವಿನೆಗರ್: ಎರಡು ಚಮಚ ಆಪಲ್ ಸೈಡರ್ ವಿನೆಗರ್ ಅನ್ನು ಒಂದು ಲೋಟ ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ಮೂತ್ರಪಿಂಡದ ಕಲ್ಲುಗಳನ್ನು ಕರಗಿಸಬಹುದು. ಆದರೆ ಆಪಲ್ ಸೈಡರ್ ವಿನೆಗರ್‌’ನ ಆಮ್ಲೀಯ ಮಟ್ಟವು ಹೊಟ್ಟೆಯಲ್ಲಿ ಸಮಸ್ಯೆಗೆ ಕಾರಣವಾಗಬಹುದು. ಹೀಗಾಗಿ ಗಮನ ಕೊಡಬೇಕಾದ ಅಗತ್ಯವಿರುತ್ತದೆ.

ದಾಳಿಂಬೆ ರಸ: ದಾಳಿಂಬೆ ರಸವನ್ನು ಕಿಡ್ನಿಯ ಆರೋಗ್ಯ ಕಾಪಾಡಲು ಶತಮಾನಗಳಿಂದಲೂ ಬಳಸಲಾಗುತ್ತಿದೆ. ಇದು ಕಿಡ್ನಿ ಸ್ಟೋನ್’ಗಳನ್ನು ತೆಗೆದುಹಾಕುವುದು ಮಾತ್ರವಲ್ಲದೆ ದೇಹದಿಂದ ವಿಷವನ್ನು ಹೊರಹಾಕುತ್ತದೆ. ಇದರಲ್ಲಿ ಉತ್ಕರ್ಷಣ ನಿರೋಧಕಗಳು ಸಹ ಸಮೃದ್ಧವಾಗಿವೆ.

ಜೀರಿಗೆ: ಸಮೃದ್ಧ ಪೋಷಕಾಂಶಗಳಿಂದ ತುಂಬಿರುವ ಜೀರಿಗೆಯನ್ನು ಪ್ರತಿನಿತ್ಯ ಮುಂಜಾನೆ ಹಳಸಿದ ಬಾಯಲ್ಲಿ ಜಗಿದರೆ ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಶೀಘ್ರ ಪರಿಹಾರ ಪಡೆಯಬಹುದು. ದೇಹದಲ್ಲಿ ಡಿಹೈಡ್ರೇಶನ್ ಆದರೆ ಕಿಡ್ನಿ ಸ್ಟೋನ್ ಕೂಡ ಆಗುತ್ತದೆ. ಜೀರಿಗೆಯನ್ನು ಒಂದು ಲೋಟ ನೀರಿಗೆ ಹಾಕಿ ಮುಂಜಾನೆ ಕುಡಿದರೆ ಸುಲಭವಾಗಿ ಈ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.

ನೀರು: ನೈಸರ್ಗಿಕವಾಗಿ ಕಿಡ್ನಿ ಸ್ಟೋನ್’ಗಳನ್ನು ದೇಹದಿಂದ ಹೊರಹಾಕಲು ಸಾಕಷ್ಟು ನೀರು ಕುಡಿಯಬೇಕು. ಎಲ್ಲಾ ರೀತಿಯ ದ್ರವಗಳು ಮೂತ್ರದ ಮೂಲಕ ದೇಹದಿಂದ ತೆಗೆದುಹಾಕಲ್ಪಡುತ್ತದೆ.  

(ಸೂಚನೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಮತ್ತು ವೃತ್ತಿಪರ ವೈದ್ಯಕೀಯ ಸಲಹೆಯಾಗಿ ತೆಗೆದುಕೊಳ್ಳಬಾರದು. ನೀವು ಯಾವುದೇ ಪ್ರಶ್ನೆಗಳನ್ನು ಅಥವಾ ಕಾಳಜಿಗಳನ್ನು ಹೊಂದಿದ್ದರೆ, ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link